ಇನ್ಫಿನಿಕ್ಸ್ ನೋಟ್ 11, ಇನ್ಫಿನಿಕ್ಸ್ ನೋಟ್ 11 ಪ್ರೋ ಫೋನ್ ಲಾಂಚ್

By Suvarna News  |  First Published Oct 18, 2021, 4:54 PM IST

ಗೇಮಿಂಗ್‌ಗೆ ನೆರವು ಒದಗಿಸುವ ಫೋನುಗಳು ಎಂದ ಹೇಳಲಾಗುತ್ತಿರುವ ಇನ್ಫಿನಿಕ್ಸ್ ನೋಟ್ 11 (Infinix Note 11) ಮತ್ತು ಇನ್ಫಿನಿಕ್ಸ್ ನೋಟ್ 11 ಪ್ರೋ (Infinix Note 11 Pro) ಸ್ಮಾರ್ಟ್‌ಫೋನುಗಳ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಆದರೆ, ಈ ಫೋನುಗಳ ಬೆಲೆ ಎಷ್ಟಿದೆ ಎಂಬ ಬಗ್ಗೆ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ಈ ಎರಡೂ ಫೋನುಗಳು ಸಾಕಷ್ಟು ವಿಶೇಷತೆಗಳನ್ನು ಹೊಂದಿವೆ. 


ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆ (Indian Smart Phone Market) ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ (Global Market) ತನ್ನದೇ ಆದ ಗ್ರಾಹಕ ವರ್ಗವನ್ನು ಸೃಷ್ಟಿಸಿಕೊಂಡಿರುವ ಇನ್ಫಿನಿಕ್ಸ್ (Infinix) ಮತ್ತೆರೆಡು ಹೊಸ ಸ್ಮಾರ್ಟ್‌ಫೋನ್‌ಗಳೊಂದಿಗೆ ಮರಳಿ ಬಂದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗೆಯಾಗಿರುವ ಈ ಎರಡೂ ಫೋನುಗಳು ತಮ್ಮದೇ ವಿಶೇಷತೆಗಳಿಂದ ಗಮನ ಸೆಳೆಯುತ್ತಿವೆ. ಇನ್ಫಿನಿಕ್ಸ್ ನೋಟ್ 11 ಸೀರೀಸ್‌ನಲ್ಲಿ ಇನ್ಫಿನಿಕ್ಸ್ ನೋಟ್ 11 (Infinix Note 11) ಮತ್ತು ಇನ್ಫಿನಿಕ್ಸ್ ನೋಟ್ 11 ಪ್ರೋ (Infinix Note 11 Pro) ಸ್ಮಾರ್ಟ್‌  ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಈ ಎರಡೂ ಫೋನುಗಳಲ್ಲಿ  ಮೀಡಿಯಾಟೆಕ್ ಹೆಲಿಯೋ ಜಿ96 ಪ್ರೊಸೆಸರ್ ಅನ್ನು ಕಂಪನಿ ಬಳಸಿದೆ. ಇದಕ್ಕೆ 8 ಜಿಬಿ ರ್ಯಾಮ್ (RAM) ಸಾಥ್ ನೀಡಿದೆ. ಜೊತೆಗೆ ಅತ್ಯುತ್ತಮ ಪ್ರದರ್ಶನದ ತೋರುವ  ಬ್ಯಾಟರಿ ಕೊಡಲಾಗಿದೆ.

Tap to resize

Latest Videos

undefined

20ನೇ ವಾರ್ಷಿಕೋತ್ಸವಕ್ಕೆ ನೋಕಿಯಾ 6310 ಫೋನು ಮರು ಬಿಡುಗಡೆ!

ಇನ್ಫಿನಿಕ್ಸ್ ನೋಟ್ 11 ಮತ್ತು ಇನ್ಫಿನಿಕ್ಸ್ ನೋಟ್ 11 ಪ್ರೋ ಸ್ಮಾರ್ಟ್‌ಫೋನುಗಳ ಡ್ಯುಯಲ್ ಸಿಮ್‌ಗೆ ಸಪೋರ್ಟ್ ಮಾಡುತ್ತವೆ. XOS 10 ಆಧರಿತ ಆಂಡ್ರಾಯ್ಡ್ 11 ಒಎಸ್ ಮೇಲೆ ಈ ಫೋನುಗಳ ರನ್ ಆಗುತ್ತವೆ. ಸ್ಕ್ರೀನ್ ‌ಬಗ್ಗೆ ಹೇಳುವುದಾದರೆ, ಇನ್ಫಿನಿಕ್ಸ್ ನೋಟ್ ಸ್ಮಾರ್ಟ್‌ಫೋನ್‌ 6.95 ಇಂಚ್ ಫುಲ್ ಎಚ್‌ಡಿ ಪ್ಲಸ್ ಐಪಿಎಸ್ ಎಲ್‌ಸಿಡಿ ಪ್ರದರ್ಶಕವನ್ನು ಹೊಂದಿದೆ. 

ಇನ್ಫಿನಿಕ್ಸ್ ನೋಟ್ 11 ಪ್ರೋ (Infinix Note 11 Pro) ಸ್ಮಾರ್ಟ್‌ಫೋನ್‌ನಲ್ಲಿ ಕಂಪನಿಯು ಮೀಡಿಯಾ ಟೆಕ್ ಹೆಲಿಯೋ ಜಿ96 (MediaTek Helio G96) ಪ್ರೊಸೆರ್ ಬಳಸಿದೆ. ಇದಕ್ಕೆ 8 ಜಿಬಿ ರ್ಯಾಮ್ (RAM) ಸಾಥ್ ನೀಡಿದೆ. 128 ಜಿಬಿ ಸ್ಟೋರೇಜ್ ಇದೆ. ಆದರೆ, ಬಳಕೆದಾರರು ಹೆಚ್ಚಿನ ಮೆಮೋರಿ ಅಗತ್ಯವಿದ್ದರೆ ಮೈಕ್ರೋಎಸ್‌ಡಿ ಕಾರ್ಡ್ ಮೂಲಕ 2 ಟಿಬಿ ವರೆಗೂ ಸ್ಟೋರೇಜ್ ಹೆಚ್ಚಿಸಿಕೊಳ್ಳಬಹುದು. 

ಇನ್ಫಿನಿಕ್ಸ್ ನೋಟ್ 11 ಪ್ರೋ (Infinix Note 11 Pro) ಸ್ಮಾರ್ಟ್‌ಫೋನ್ ಮತ್ತೊಂದು ವಿಶೇಷತೆ ಏನೆಂದರೆ, ಸ್ಟೋರೇಜ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೇ, ರ್ಯಾಮ್ (RAM) ‌ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು. ಬಳಕೆದಾರರು ಕಂಪನಿಯ ಒದಗಿಸುವ 8 ಜಿಬಿ ರ್ಯಾಮ್ (RAM) ಮೆಮೊರಿಯನ್ನು 11 ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ನಿಮ್ಮ ಫೋನ್‌ನಲ್ಲಿ Weather Report ಅಲರ್ಟ್ ಸೆಟ್ ಮಾಡುವುದು ಹೇಗೆ? 

ಈ ಸ್ಮಾರ್ಟ್‌ಫೋನ್‌ನ ಹಿಂಬದಿಯಲ್ಲಿ ನೀವು ಮೂರು ಕ್ಯಾಮೆರಾಗಳ ಸೆಟ್‌ಅಪ್ (Camera Setup) ಕಾಣಬಹುದು. ಈ ಪೈಕಿ ಮೊದಲನೆಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದ್ದರೆ, ಎರಡು ಮತ್ತು ಮೂರನೇ ಕ್ಯಾಮೆರಾಗಳು ಕ್ರಮವಾಗಿ 13 ಮೆಗಾ ಪಿಕ್ಸೆಲ್ ಹಾಗೂ 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿವೆ. ಇದೇ ವೇಳೆ, ವೆನಿಲಾ ನೋಟ್ ಇನ್ಫಿನಿಕ್ಸ್ ನೋಟ್ 11 ಸ್ಮಾರ್ಟ್‌ಪೋನ್‌ನಲ್ಲಿ (Infinix Note 11) 50 ಮೆಗಾ ಪಿಕ್ಸೆಲ್ ಕ್ಯಾಮೆರಾವಿದೆ. ಈ ಎರಡೂ ಫೋನುಗಳ ಮುಂಬದಿಯಲ್ಲಿ ಕಂಪನಿಯು ಸೆಲ್ಫಿಗಾಗಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಿದೆ. ಸೆಲ್ಫಿ ಮಾತ್ರವಲ್ಲದೇ ವಿಡಿಯೋ ಕಾಲ್ ಹಾಗೂ ಚಾಟ್‌ಗೂ ಇದರಿಂದ ನೆರವು ದೊರೆಯಲಿದೆ. 

ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ ಇನ್ಫಿನಿಕ್ಸ್ ನೋಟ್ 11 ಸೀರೀಸ್ ಫೋನುಗಳನ್ನು ಗೇಮಿಂಗ್‌ಗಾಗಿ ರೂಪಿಸಲಾಗಿದೆ ಎನ್ನಲಾಗುತ್ತಿದೆ. ಹಾಗಾಗಿಯೇ, ಡಿಟಿಎಸ್‌ ಸರೌಂಡ್ ಸೌಂಡ್ (DTS surround sound) ಹೊಂದಿರುವ ಎರಡು ಸ್ಪೀಕರ್‌ಗಳನ್ನು ನೀವು ಫೋನುಗಳಲ್ಲಿ ಕಾಣಬಹುದು. ಇಮೇಜ್ ಸ್ಟೆಬಿಲಿಟಿ ಹಾಗೂ ಟಚ್ ಸೆನ್ಸಿಟಿವಿಟಿಯನ್ನು ಹೆಚ್ಚಿಸುವುದಕ್ಕಾಗಿ ಕೃತಕ ಬುದ್ಧಿಮತ್ತೆ (AI)ಯನ್ನು ತಂತ್ರಜ್ಞಾನವನ್ನು ಬಳಸಲಾಗಿದೆ. 

ಉಚಿತ ವಾಟ್ಸಾಪ್ ಬ್ಯಾಕ್‌ಅಪ್ ಶೀಘ್ರವೇ ಅಂತ್ಯ? ಸ್ಪೇಸ್ ಬೇಕಿದ್ದರೆ ದುಡ್ಡು ಕೊಡ್ಬೇಕಾ? 

ಈ ಫೋನುಗಳಲ್ಲಿ 5000 mAH ಬ್ಯಾಟರಿಯನ್ನು ನೀಡಲಾಗಿದ್ದು, ಅದು 33 ವ್ಯಾಟ್ ಸೂಪರ್‌ ಚಾರ್ಜ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ. ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕ ವಿಶಿಷ್ಟ ಫೀಚರ್‌ಗಳನ್ನು ಈ ಎರಡೂ ಫೋನುಗಳು ಹೊಂದಿವೆ. ಕಂಪನಿಯು ಈ ಫೋನುಗಳ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿಯನ್ನು ಇದುವರೆಗೂ ಬಿಟ್ಟುಕೊಟ್ಟಿಲ್ಲ.

click me!