ಚೀನೀ ಆ್ಯಪ್‌ ನಿಷೇಧದ ಬಳಿಕ ಭಾರತದ ಆ್ಯಪ್‌ಗಳಿಗೆ ಬಂಪರ್‌!

By Kannadaprabha NewsFirst Published Jul 2, 2020, 8:18 AM IST
Highlights

ಚೀನೀ ಆ್ಯಪ್‌ ನಿಷೇಧದ ಬಳಿಕ ಭಾರತದ ಆ್ಯಪ್‌ಗಳಿಗೆ ಬಂಪರ್‌!| 35 ಲಕ್ಷ ಜನರಿಂದ ಚಿಂಗಾರಿ ಡೌನ್‌ಲೋಡ್‌| ರೋಪ್ಸೋ, ಶೇರ್‌ಚಾಟ್‌, ಗೋ ಸೋಷಿಯಲ್‌ ಜಂಪ್‌

ನವದೆಹಲಿ(ಜು.02): ಚೀನಾದ 59 ಮೊಬೈಲ್‌ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರ ಗೇಟ್‌ಪಾಸ್‌ ನೀಡಿದ ಬೆನ್ನಲ್ಲೇ ಚಿಂಗಾರಿ, ಶೇರ್‌ಚಾಟ್‌, ರೊಪ್ಸೋ, ಗೋಸೋಷಿಯಲ್‌ ಸೇರಿದಂತೆ ಹಲವು ದೇಶೀಯ ಆ್ಯಪ್‌ಗಳ ಡೌನ್‌ಲೋಡ್‌ನಲ್ಲಿ ಗಣನೀಯ ಪ್ರಮಾಣ ಕಂಡುಬಂದಿದೆ.

ಡಿಜಿಟಲ್ ಸ್ಟ್ರೈಕ್ ಬೆನ್ನಲ್ಲೇ ಚೀನಾಕ್ಕೆ ರಸ್ತೆ, ರೈಲು, ಟೆಲಿಕಾಂ ಶಾಕ್‌!

ಟಿಕ್‌ಟಾಕ್‌ಗೆ ಪರ್ಯಾಯ ಎನ್ನಲಾದ ಭಾರತದ ಚಿಂಗಾರಿ ಆ್ಯಪ್‌ ಅನ್ನು ಪ್ರತೀ ಗಂಟೆಗೆ 3-4 ಲಕ್ಷ ಮಂದಿ ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಚಿಂಗಾರಿ ಡೌನ್‌ಲೋಡ್‌ 35 ಲಕ್ಷ ಮೀರಿದೆ. ಇದರೊಂದಿಗೆ ಜೂ.11ರಂದು ಭಾರತದ ಟಾಪ್‌ 200 ಆ್ಯಪ್‌ಗಳ ಪಟ್ಟಿಯಲ್ಲಿದ್ದ ಚಿಂಗಾರಿ ಆ್ಯಪ್‌ ಜುಲೈ 1ಕ್ಕೆ ಭಾರತದ ಟಾಪ್‌ ಆ್ಯಪ್‌ ಆಗಿ ಹೊರಹೊಮ್ಮಿದೆ.

ಗಡಿಯಲ್ಲಿ ಯುದ್ಧದ ಕಾರ್ಮೋಡ: ಭಾರತದ 30,000 ಯೋಧರು, ಟ್ಯಾಂಕ್‌ಗಳು ಗಾಲ್ವಾನ್‌ಗೆ!

ಇನ್ನು ಪ್ರತೀ ಗಂಟೆಗೆ 5 ಲಕ್ಷ ಮಂದಿ ಡೌನ್‌ಲೋಡ್‌ ಆಗುತ್ತಿರುವ ಶೇರ್‌ಚಾಟ್‌ನ ಒಟ್ಟು ಡೌನ್‌ಲೋಡ್‌ ಸಂಖ್ಯೆ 1.5 ಕೋಟಿಗೆ ಮೀರಿದೆ. ಇನ್ನು ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ ಮಹೀಂದ್ರಾ ಬೆಂಬಲಿತ ಹಾಪ್‌ರಾರ‍ಯಂಪ್‌ನ ಗೋಸೋಷಿಯಲ್‌ ಆ್ಯಪ್‌ ಡೌನ್‌ಲೋಡ್‌ನಲ್ಲಿ ಶೇ.20ರಷ್ಟುಏರಿಕೆ ದಾಖಲಾಗಿದೆ. ಅಲ್ಲದೆ, ಚೀನಾದ ಆ್ಯಪ್‌ಗಳ ಹಾವಳಿ ಇದ್ದಾಗ ದಿನಕ್ಕೆ 10 ಸಾವಿರದಿಂದ 15 ಸಾವಿರ ಡೌನ್‌ಲೋಡ್‌ ದಾಖಲಿಸುತ್ತಿದ್ದ ಡಿಜಿಟಲ್‌ ಆಡಿಯೋ ಪ್ಲಾಟ್‌ಫಾಮ್‌ರ್‍ ಖಾಬ್ರಿ ಡೌನ್‌ಲೋಡ್‌ ಸಂಖ್ಯೆ ಇದೀಗ ದಿನಕ್ಕೆ 18,000-24 ಸಾವಿರಕ್ಕೆ ಏರಿದೆ.

click me!