‘ದೇಶಿ ಟಿಕ್‌ಟಾಕ್‌’ ಚಿಂಗಾರಿ ಆ್ಯಪ್‌ ಈಗ ಸೂಪರ್‌ಹಿಟ್‌!

By Kannadaprabha News  |  First Published Jun 23, 2020, 8:26 AM IST

‘ದೇಶಿ ಟಿಕ್‌ಟಾಕ್‌’ ಚಿಂಗಾರಿ ಆ್ಯಪ್‌ ಈಗ ಸೂಪರ್‌ಹಿಟ್‌| 72 ತಾಸಲ್ಲಿ 5 ಲಕ್ಷ ಡೌನ್‌ಲೋಡ್‌


ಬೆಂಗಳೂರು(ಜೂ.23): ಪೂರ್ವ ಲಡಾಖ್‌ ಗಡಿ ಸಂಘರ್ಷದಲ್ಲಿ ಚೀನಾ 20 ಭಾರತೀಯ ಯೋಧರನ್ನು ಹತ್ಯೆಗೈದ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಭಾರತದಲ್ಲಿ ಜೋರಾಗಿದೆ. ಇದರ ಬೆನ್ನಲ್ಲೇ ಚೀನಾ ಮೂಲದ ಟಿಕ್‌ಟಾಕ್‌ ವಿಡಿಯೋ ಆ್ಯಪ್‌ಗೆ ಪರ್ಯಾಯ ಎಂದೇ ಪರಿಗಣಿಸಲ್ಪಟ್ಟಿರುವ ಬೆಂಗಳೂರು ಮೂಲದ ‘ಚಿಂಗಾರಿ’ ಆ್ಯಪ್‌ ಅನ್ನು 72 ಗಂಟೆಗಳಲ್ಲಿ 5 ಲಕ್ಷ ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಒಂದೇ ವಾಟ್ಸ್‌ಆ್ಯಪ್‌ ಅಕೌಂಟ್‌ ಏಕಕಾಲಕ್ಕೆ 4 ಡಿವೈಸ್‌ನಲ್ಲಿ ಬಳಸಿ!

Tap to resize

Latest Videos

undefined

‘ದೇಶದಲ್ಲಿ ಚೀನಾ ಸೋಷಿಯಲ್‌ ಮೀಡಿಯಾ ಆ್ಯಪ್‌ ಬಹಿಷ್ಕಾರದ ಕೂಗು ಜೋರಾದ ಬಳಿಕ ಚಿಂಗಾರಿ ಆ್ಯಪ್‌ ಜನಪ್ರಿಯತೆ ಹೆಚ್ಚಾಗಿದೆ. ಕಳೆದ 72 ಗಂಟೆಗಳಲ್ಲಿ 5 ಲಕ್ಷ ಜನರು ಆ್ಯಪ್‌ ಡೌನ್‌ಲೋಡ್‌ ಮಾಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಬ್‌ಸ್ಕೆ್ರೖಬ್‌ ಆಗುವ ಸಾಧ್ಯತೆ ಇದೆ’ ಎಂದು ಚಿಂಗಾರಿ ಆ್ಯಪ್‌ ಡೆವಲಪರ್ಸ್ ಬಿಸ್ವಾತ್ಮ ನಾಯಕ್‌ ಮತ್ತು ಸಿದ್ಧಾರ್ಥ ಗೌತಮ್‌ ಅಭಿಪ್ರಾಯಪಟ್ಟಿದ್ದಾರೆ.

ಚೀನಾ-ಭಾರತ ಗಡಿ ಸಂಘರ್ಷದ ಬಳಿಕ ಚಿಂಗಾರಿ ಆ್ಯಪ್‌ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ನಂ.1 ಸ್ಥಾನ ಪಡೆದಿದೆ. ಮಿತ್ರೋಂ ಆ್ಯಪ್‌ ಜನಪ್ರಿಯತೆಯನ್ನೂ ಮೀರಿಸಿದೆ ಎಂದು ಅವರು ಹೇಳಿದ್ದಾರೆ. ಚಿಂಗಾರಿ ಆಡಿಯೋ ವಿಡಿಯೋ ಅಪ್ಲಿಕೇಷನ್‌ ಅನ್ನು 2019ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು.

click me!