ಟ್ರೋಜನ್ ಮಾಲ್‌ವೇರ್ ರಿಕವರಿ ಮಾಡಿಕೊಡುವಂತೆ ಹೇಳಿ unknown malware ಇನ್ಸ್‌ಟಾಲ್ ಮಾಡುತ್ತಾರೆ. ಈ ರೀತಿ ಮಾಲ್‌ವೇರ್ ಇನ್ಸ್‌ಟಾಲ್ ಮಾಡುವದರಿಂದ ಸೂಕ್ಷ್ಮ ಡೇಟಾ ಸೋರಿಕೆ, ಸಿಸ್ಟಮ್ ಕ್ರ್ಯಾಶ್‌ಗಳು ಮತ್ತು ಡೇಟಾ ನಷ್ಟಕ್ಕೆ ಕಾರಣವಾಗಬಹುದು.
ನವದೆಹಲಿ: ಇತ್ತೀಚೆಗೆ ಮೈಕ್ರೋಸಾಫ್ಟ್ ವಿಂಡೋಸ್ ಸ್ಥಗಿತದಿಂದ ಹಲವು ಅಡಚಣೆಗಳು ಉಂಟಾಗಿದ್ದವು. ಇದೀಗ ಇದನ್ನೇ ಬಂಡವಾಳ ಮಾಡಿಕೊಂಡು ಫಿಶಿಂಗ್ ದಾಳಿ ನಡೆಸಲಾಗುತ್ತಿದ್ದು, ಬಳಕೆದಾರರು ಎಚ್ಚರಿಕೆಯಿಂದಿರಬೇಕು ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಸಲಹೆ ಜೊತೆಗೆ ಎಚ್ಚರಿಕೆಯನ್ನು ನೀಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ರಾಷ್ಟ್ರೀಯ ಸೈಬರ್ ಭದ್ರತಾ ಸಂಸ್ಥೆ CERT-In ನಿರ್ವಹಿಸುತ್ತದೆ. ಕ್ರೌಡ್‌ಸ್ಟ್ರೈಕ್ ಫಾಲ್ಕನ್ ಸೆನ್ಸರ್ ಸಾಫ್ಟ್‌ವೇರ್ ಅಪ್‌ಗ್ರೇಡ್‌ನಲ್ಲಿನ ದೋಷದಿಂದಾಗಿ ಮೈಕ್ರೋಸಾಫ್ಟ್ ವಿಂಡೋಸ್ ಕಾರ್ಯಚರಣೆಯಲ್ಲಿ ದೊಡ್ಡಮಟ್ಟದ ಅಡಚಣೆ ಉಂಟಾಗುತ್ತದೆ. ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ ಕಾರ್ಯಾಚರಣೆಯಲ್ಲಿ ಅಡಚಣೆ ಉಂಟಾಗಿದ್ದರಿಂದ ಆಸ್ಪತ್ರೆ, ಬ್ಯಾಂಕ್, ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಸಿಇಆರ್‌ಟಿ-ಇನ್‌ನ ಸಲಹೆಯ ಪ್ರಕಾರ, ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ ಕ್ರ್ಯಾಶ್ ಬಳಸಿಕೊಂಡು ಕ್ರೌಡ್‌ಸ್ಟ್ರೈಕ್‌ನ ಬಳಕೆದಾರರ ಮೇಲೆ ನಿರಂತರವಾಗಿ ಫಿಶಿಂಗ್ ದಾಳಿ (ಹ್ಯಾಕಿಂಗ್) ಪ್ರಯತ್ನಗಳು ನಡೆಯುತ್ತಿವೆ. ಈ ಸಮಸ್ಯೆಯನ್ನು ಸೈಬರ್ ದಾಳಿಕೋರರು ದುಷ್ಕೃತ್ಯಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಬಳಕೆದಾರರಿಗೆ ಕರೆ ಮಾಡಿ ಮೈಕ್ರೋಸಾಫ್ಟ್ ವಿಂಡೋಸ್ ಕಾರ್ಯಚರಣೆ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ. ಈ ವೇಳೆ ಸಾಫ್ಟ್‌ವೇರ್ ಅಪ್‌ಡೇಟ್ ಸೇರದಂತೆ ಲೈಸೆನ್ಸ್ ನವೀಕರಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಸ್ವಯಂಚಾಲಿತವಾಗಿ ಪರಿಹರಿಸುವ ಭರವಸೆ ನೀಡಲಾಗುತ್ತದೆ. ಈ ಮೂಲಕ ಸೈಬರ್ ದಾಳಿ ನಡೆಸಲಾಗುತ್ತಿದೆ.
undefined
ಬೆಂಗಳೂರಲ್ಲಿ ಮ್ಯಾನುಯಲ್ ಚೆಕ್ ಇನ್- ಕೈನಲ್ಲೇ ವಿಮಾನ ಬೋರ್ಡಿಂಗ್ ಪಾಸ್ ಬರೆದಕೊಟ್ಟ ಸಿಬ್ಬಂದಿ
ಸೈಬರ್ ಹ್ಯಾಕರ್ಸ್ ಕೆಲ ಸಾಫ್ಟ್‌ವೇರ್ ಲಿಂಕ್ ಅಪ್ಲೋಡ್ ಮಾಡಿಕೊಳ್ಳಲು ಸಲಹೆ ನೀಡುತ್ತಾರೆ. ನಂತರ ಟ್ರೋಜನ್ ಮಾಲ್‌ವೇರ್ ರಿಕವರಿ ಮಾಡಿಕೊಡುವಂತೆ ಹೇಳಿ unknown malware ಇನ್ಸ್‌ಟಾಲ್ ಮಾಡುತ್ತಾರೆ. ಈ ರೀತಿ ಮಾಲ್‌ವೇರ್ ಇನ್ಸ್‌ಟಾಲ್ ಮಾಡುವದರಿಂದ ಸೂಕ್ಷ್ಮ ಡೇಟಾ ಸೋರಿಕೆ, ಸಿಸ್ಟಮ್ ಕ್ರ್ಯಾಶ್‌ಗಳು ಮತ್ತು ಡೇಟಾ ನಷ್ಟಕ್ಕೆ ಕಾರಣವಾಗಬಹುದು. ನಂತರ ಎಲ್ಲಾ ಡೇಟಾ ರಿಸ್ಟೋರ್ ಮಾಡಿಕೊಡುವದಾಗಿ ಹೇಳಿ ನಿಮ್ಮ ಸಿಸ್ಟಂನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಖಾಸಗಿ ಮಾಹಿತಿ ಕಳ್ಳತನ ಮಾಡಲಾಗುತ್ತದೆ. ಫೈರ್ ವಾಲ್ ರೂಲ್ಸ್ ಸೆಟ್ಟಿಂಗ್ ಮಾಡುವಾಗ ಕೆಲ ಯುಆರ್‌ಎಲ್ ಬ್ಲಾಕ್ ಮಾಡಲು ಸಲಹೆ ನೀಡಲಾಗಿದೆ.
ಮೈಕ್ರೋಸಾಫ್ಟ್ ಸಾಫ್ಟ್‌ವೇರ್‌ನಲ್ಲಿ ವ್ಯತ್ಯಯ; ಸಿಗರೇಟು ಸೇದುತ್ತ ಮಲಗಿರುವ ವ್ಯಕ್ತಿಯ ಫೋಟೋ ಹಂಚಿಕೊಂಡ ಮಸ್ಕ್