ಭಾರತದಲ್ಲಿ ಹಣ ವರ್ಗಾವಣೆ, ಬಿಲ್ ಪಾವತಿ ಸೇರಿದಂತೆ ಬಹುತೇಕ ಟ್ರಾಕ್ಷಾನ್‌ಗೆ ಆ್ಯಪ್ ಗಳನ್ನೇ ಬಳಸಲಾಗುತ್ತದೆ. ಅದರಲ್ಲೂ ಗೂಗಲ್ ಪೇ ಜನಪ್ರಿಯವಾಗಿದೆ. ಇದೀಗ ಭಾರತದಲ್ಲಿ ಗೂಗಲ್ ಪೇ ಆ್ಯಪ್‌ನ್ನು ಆ್ಯಪಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಹೆಚ್ಚಿನ ವಿವರ ಇಲ್ಲಿವೆ.
ನವದೆಹಲಿ(ಅ.27): ಭಾರತದಲ್ಲಿ ಬಹುತೇಕ ಕ್ಷೇತ್ರಗಳು ಡಿಜಿಟಲೀಕರಣವಾಗಿದೆ. ಜನಮಾನ್ಯರು ಕೂಡ ಆ್ಯಪ್ ಬಳಸಿ ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ ಗೂಗಲ್ ಪೆ, ಪೇಟಿಎಂ ಸೇರಿದಂತೆ ಆ್ಯಪ್ ಗಳ ಬಳಕೆ ಹೆಚ್ಚಾಗಿದೆ. ಇದೀಗ ಭಾರತದಲ್ಲಿ ಆ್ಯಪಲ್ ಪ್ಲೇ ಸ್ಟೋರ್‌ನಿಂದ ಗೂಗಲ್ ಪೇ ತಾತ್ಕಾಲಿಕವಾಗಿ ತೆಗೆದುಹಾಕಲಾಗಿದೆ.
ನಿಯಮ ಬಾಹಿರ ಚಟುವಟಿಕೆ; ಗೂಗಲ್ ಪ್ಲೇ ಸ್ಟೋರ್‌ನಿಂದ Paytm ಡಿಲೀಟ್!.
undefined
ಆ್ಯಪಲ್ ಪ್ಲೇ ಸ್ಟೋರ್‌ನಲ್ಲಿ ಗೂಗಲ್ ಪೇ ಕೆಲ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಆ್ಯಪಲ್ ತನ್ನ ಪ್ಲೇ ಸ್ಟೋರ್‌ನಿಂದ ಗೂಗಲ್ ಪೇ ಆ್ಯಪ್‌ನ್ನು ತಾತ್ಕಾಲಿಕವಾಗಿ ತೆಗೆದು ಹಾಕಲಾಗಿದೆ. ಹೀಗಾಗಿ iOS ಡಿವೈಸ್‌ನಲ್ಲಿ ಗೂಗಲ್ ಪೇ ಲಭ್ಯವಿಲ್ಲ. iOS ಡಿವೈಸ್ ಬಳಕೆದಾರರು ಹಣ ಪಾವತಿ, ಸ್ವೀಕೃತಿಗಳಲ್ಲಿ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚಿದೆ.
Google Pay ನಲ್ಲಿ ಹೊಸ ಫೀಚರ್ಸ್: ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ!.
ಆ್ಯಪಲ್ ಆಪ್ಲೀಕೇಶನ್ ಸ್ಟೋರ್‌ನಿಂದ ತಾತ್ಕಾಲಿಕವಾಗಿ ತೆಗೆದುಹಾಕಲಾಗಿರುವ ಗೂಗಲ್ ಪೇ ಆ್ಯಪ್ ಲಭ್ಯತೆ ಕುರಿತು ಸ್ಪಷ್ಟ ಮಾಹಿತಿಯನ್ನ ಗೂಗಲ್ ಬಹಿರಂಗ ಪಡಿಸಿಲ್ಲ. ಕೆಲ ಸಮಸ್ಯೆಗಳನ್ನು ಶೀಘ್ರದಲ್ಲಿ ಸರಿಪಡಿಸಿ ಮತ್ತೆ ಆ್ಯಪಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗುವಂತೆ ಮಾಡುತ್ತೇವೆ. ಈ ನಡುವೆ ಅನಾನುಕೂಲತೆಗೆ ಕ್ಷಮೆಯಾಚಿಸುತ್ತೇವೆ ಎಂದು ಗೂಗಲ್ ಹೇಳಿದೆ.