ಈ 21 ಆಪ್‌ ಬಗ್ಗೆ ಎಚ್ಚರವಿರಲಿ, ನಿಮ್ಮ ಫೋನ್‌ನಲ್ಲಿದ್ರೆ ಈಗಲೇ ಡಿಲೀಟ್ ಮಾಡಿ!

By Suvarna News  |  First Published Oct 26, 2020, 11:29 AM IST

ಸೈಬರ್ ಸೆಕ್ಯುರಿಟಿ ಫರ್ಮ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ 21 ಅಡ್ವೆಂಚರ್ ಗೇಮಿಂಗ್ ಆಪ್ ಬಗ್ಗೆ ಎಚ್ಚರಿಕೆ |  21 ಆಪ್‌ಗಳು ಹಿಡನ್ ಆಡ್‌ ಆದ ಫ್ಯಾಮಿಲಿ ಟ್ರೋಜನ್ ಭಾಗ| ನಿಮ್ಮ ಫೋನ್‌ನಲ್ಲಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ


ಸೈಬರ್ ಸೆಕ್ಯುರಿಟಿ ಫರ್ಮ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ 21 ಅಡ್ವೆಂಚರ್ ಗೇಮಿಂಗ್ ಆಪ್ ಬಗ್ಗೆ ಎಚ್ಚರಿಕೆ ನೀಡಿದೆ. ಈ ಕಂಪನಿ ಅನ್ವಯ ಈ 21 ಆಪ್‌ಗಳು ಹಿಡನ್ ಆಡ್‌ ಆದ ಫ್ಯಾಮಿಲಿ ಟ್ರೋಜನ್ ಭಾಗವೆಂದು ತಿಳಿಸಿದೆ. ಈಗಿನ ಪರಿಸ್ಥಿತಿಯಲ್ಲಿ ಗೂಗಲ್ ಈ ಗೇಮಿಂಗ್ ಆಪ್‌ಗಳ ವರದಿ ಪರಿಶೀಲನೆ ಆರಂಭಿಸಿದೆ. ಇನ್ನು ಸೆನ್ಸರ್ ಟವರ್ ನೀಡಿದ ದಾಖಲೆಯನ್ವಈ ಆಪ್‌ಗಳನ್ನು ಗೂಗಲ್ ಆಪ್‌ನಿಂದ ಬರೋಬ್ಬರಿ 80 ಲಕ್ಷ ಬಾರಿ ಡೌನ್‌ಲೋಡ್ ಮಾಡಲಾಗಿದೆ.

Avast ಈ ಸಂಬಂಧ ಮಾಹಿತಿ ನೀಡಿದ್ದು, ಇವುಗಳಲ್ಲಿರುವ ಅನೇಕ ಅಡ್ವೆಂಚರ್ ಗೇಮಿಂಗ್ ಆಪ್‌ನ ಜಾಹೀರಾತನ್ನು YouTube ಸೇರಿ ಅನೇಕ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರ ಮಾಡಲಾಗಿತ್ತು. ಆದರೆ ಇದನ್ನು ಡೌನ್‌ಲೋಡ್ ಮಾಡಿದ ಬಳಿಕ ಜಾಹೀರಾತಿನಲ್ಲಿ ತಿಳಿಸಿದಂತೆ ಯಾವ ವಿಚಾರವನ್ನೂ ತೋರಿಸುತ್ತಿಲ್ಲ. ಆದರೆ ಇದು ಬಳಕೆದಾರರ ಮೊಬೈಲನ್ನು ಅನಗತ್ಯ ಜಾಹೀರಾತುಗಳಿಂದ ತುಂಬಿಸಿಡುತ್ತದೆ ಎಂಬುವುದರಲ್ಲಿ ಯಾವುದೇ ಡೌಟ್ ಇಲ್ಲ ಎಂದು ಇದು ತಿಳಿಸಿದೆ.

Latest Videos

undefined

ಅಷ್ಟಕ್ಕೂ ಆ ಇಪ್ಪತ್ತೊಂದು ಆಪ್‌ ಯಾವುದು?

Shoot Them
Crush Car
Rolling Scroll
Helicopter Attack - NEW
Assassin Legend - 2020 NEW
Helicopter Shoot
Rugby Pass
Flying Skateboard
Iron it
Shooting Run
Plant Monster
Find Hidden
Find 5 Differences - 2020 NEW
Rotate Shape
Jump Jump
Find the Differences - Puzzle Game
Sway Man
Desert Against
Money Destroyer
Cream Trip - NEW
Props Rescue

ಈ ಆಪ್‌ಗಳಿಂದ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆಗಳೂ ಇವೆ ಎನ್ನಲಾಗಿದ್ದು, ಗೂಗಲ್ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದೆ. 

click me!