ಗ್ರಾಹಕರ ಫ್ಯಾಷನ್ ಅನುಭವವನ್ನು ಹೆಚ್ಚಿಸಲು ABFRL ಜೊತೆ ಫ್ಲಿಪ್‌ಕಾರ್ಟ್ ಒಪ್ಪಂದ!

By Suvarna NewsFirst Published Oct 25, 2020, 5:18 PM IST
Highlights
  • ABFRL ಫ್ಯಾಷನ್ ಲಿಮಿಟೆಡ್‌ನಲ್ಲಿ ಫ್ಲಿಪ್‌ಕಾರ್ಟ್ 1500 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ
  • ಕಾಶುವಲ್ ವೇರ್ ಮತ್ತು ಎಥ್ನಿಕ್ ವೇರ್ ಸೇರಿದಂತೆ ಗ್ರಾಹಕರಿಗೆ ಅನನ್ಯ ಫ್ಯಾಶನ ಕಲೆಕ್ಷನ್ ಹಾಗೂ ಗುಣಮಟ್ಟದ ಉತ್ಪನ್ನಗಳ ಪೂರೈಕೆ

ಬೆಂಗಳೂರು(ಅ.25): ಗ್ರಾಹಕ ಫ್ಯಾಷನ್ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಗ್ರೂಪ್ ಮತ್ತು ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್ (ABFRL) ಇಂದು ಪರಸ್ಪರ ರಚನಾತ್ಮಕ ಒಪ್ಪಂದ ಮಾಡಿಕೊಂಡಿವೆ. 1500 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯೊಂದಿಗೆ ಫ್ಲಿಪ್ ಕಾರ್ಟ್ ABFRL ನ ಶೇ.7.8 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಈ ಮೂಲಕ ಎರಡೂ ಕಂಪನಿಗಳ ಪಾಲುದಾರಿಕೆಯು ದೇಶದ ಫ್ಯಾಷನ್ ವಿಭಾಗದಲ್ಲಿ ಮುಂಚೂಣಿಗೆ ಬರುವ ಯೋಜನೆಗಳನ್ನು ರೂಪಿಸಲಿವೆ.

ಕೈಗೆಟುಕುವ ದರದಲ್ಲಿ ಶಾಂಪಿಂಗ್‌ಗಾಗಿ ಹಣಕಾಸು ಸಂಸ್ಥೆಗಳೊಂದಿಗೆ ಫ್ಲಿಪ್‌ಕಾರ್ಟ್ ಒಪ್ಪಂದ!.

ಫ್ಲಿಪ್ ಕಾರ್ಟ್ ನ ಹೂಡಿಕೆಯನ್ನು  ABFRL ತನ್ನ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಲಿದೆ. ಕಂಪನಿಯು ಫ್ಯಾಷನ್ ವಿಭಾಗಗಳಾದ ಇನ್ನರ್ ವೇರ್/ಅಥ್ಲೆಸಿಸರ್, ಕಾಶುವಲ್ ವೇರ್ ಮತ್ತು ಎಥ್ನಿಕ್ ವೇರ್ ನ ಬೆಳವಣಿಗೆಗೆ ಯೋಜನೆಗಳನ್ನು ರೂಪಿಸಲಿದೆ. ಇದಲ್ಲದೇ,  ABFRL ತನ್ನ ದೊಡ್ಡ ಮಟ್ಟದ ಡಿಜಿಟಲ್ ರೂಪಾಂತರ ಕಾರ್ಯತಂತ್ರವನ್ನು ಇನ್ನಷ್ಟು ಆಳವಾಗಿ ಪ್ರಗತಿಗೆ ಬಳಸಿಕೊಂಡು ಮತ್ತಷ್ಟು ಗ್ರಾಹಕರನ್ನು ತಲುಪಲಿದೆ. ತನ್ನ ಹಿನ್ನೆಲೆಯ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಂಡು  ದೇಶದಲ್ಲಿ ಅತ್ಯಂತ ಸಮಗ್ರ ಒಮ್ಲಿ-ಚಾನೆಲ್ ಫ್ಯಾಷನ್ ಸಂಸ್ಥೆಯಾಗಿ ಸ್ಥಾನ ಪಡೆದಿದೆ.

ಹಬ್ಬದ ಪ್ರಯುಕ್ತ 2000 ಫ್ಯಾಷನ್ ಸ್ಟೋರ್ ಜೊತೆ ಒಪ್ಪಂದ ಮಾಡಿದ ಫ್ಲಿಪ್‌ಕಾರ್ಟ್!...

ಈ ಪಾಲುದಾರಿಕೆ ಮೂಲಕ ಫ್ಲಿಪ್ ಕಾರ್ಟ್ ಗ್ರೂಪ್ ತನ್ನ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಾದ ಫ್ಲಿಪ್ ಕಾರ್ಟ್ ಮತ್ತು ಮೈಂತ್ರಾದಲ್ಲಿ ವಿವಿಧ ಶ್ರೇಣಿಯ ಬ್ರ್ಯಾಂಡ್ ಗಳನ್ನು ವಿಸ್ತಾರಗೊಳಿಸಲಿದೆ.  ABFRL ನೊಂದಿಗಿನ ತನ್ನ ಆಳವಾದ ಸಂಬಂಧದ ಮೂಲಕ ಫ್ಲಿಪ್ ಕಾರ್ಟ್ ಪ್ರೀಮಿಯಂ ಅಂತಾರಾಷ್ಟ್ರೀಯ ಮತ್ತು ಭಾರತೀಯ ಬ್ರ್ಯಾಂಡ್ ಗಳನ್ನು ನೀಡಲಿದೆ. ಫ್ಲಿಪ್ ಕಾರ್ಟ್ ನ ತಂತ್ರಜ್ಞಾನದ ಪ್ರಭಾವವು ABFRL ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದಲ್ಲದೇ ಗ್ರಾಹಕರ ಅನುಭವಗಳನ್ನು ಉತ್ಕೃಷ್ಠಗೊಳಿಸುತ್ತದೆ ಹಾಗೂ ಪ್ರೀಮಿಯಂ ರಾಯಲ್ಟಿ ಕಾರ್ಯಕ್ರಮಗಳಿಗೆ ಪ್ರವೇಶವನ್ನು ಒದಗಿಸುತ್ತದೆ ಹಾಗೂ ಫ್ಲಿಪ್ ಕಾರ್ಟ್ ತಿಳಿದಿರುವ ಕೈಗೆಟುಕುವ  ರಚನೆಗಳನ್ನು ನಿರ್ಮಾಣ ಮಾಡುತ್ತದೆ.

ಫ್ಲಿಪ್ ಕಾರ್ಟ್ ಗ್ರೂಪ್ ನಲ್ಲಿ ನಾವು ಬೆಳೆಯುತ್ತಿರುವ ಭಾರತೀಯ ಗ್ರಾಹಕರ ಬೇಡಿಕೆಗಳನ್ನು ಉತ್ತಮ ಗುಣಮಟ್ಟ ಮತ್ತು ಮೌಲ್ಯಯುತವಾಗಿ ಪೂರೈಸಲು ಪೂರಕವಾಗಿ ಹೊಸ ಹೊಸ ಪಾಲುದಾರಿಕೆಗಳನ್ನು ಮಾಡಿಕೊಳ್ಳುವತ್ತ ಗಮನಹರಿಸುತ್ತಿದ್ದೇವೆ. ದೇಶಾದ್ಯಂತ ವಿವಿಧ ರೀಟೇಲ್ ಸ್ವರೂಪಗಳಲ್ಲಿನ ಫ್ಯಾಷನ್ ಪ್ರಜ್ಞೆಯ ಗ್ರಾಹಕರಿಗೆ ವ್ಯಾಪಕವಾದ ಶ್ರೇಣಿಯ ಉತ್ಪನ್ನಗಳನ್ನು ಲಭ್ಯವಾಗುವಂತೆ ಮಾಡಲು ABFRL ಪಾಲುದಾರಿಕೆಯೊಂದಿಗೆ ಕಾರ್ಯತತ್ಪರವಾಗಿದ್ದೇವೆ. ಭಾರತದಲ್ಲಿ ಉಡುಪು ಉದ್ಯಮದ ಭರವಸೆಯ ಅವಕಾಶವನ್ನು ನಾವು ತಿಳಿಸುತ್ತಿರುವುದರಿಂದ ABFRL ನೊಂದಿಗೆ ಮತ್ತು ಅದರ ಸುಸ್ಥಾಪಿತವಾದ ಹಾಗೂ ಸಮಗ್ರ ಫ್ಯಾಷನ್, ಚಿಲ್ಲರೆ ಮೂಲಸೌಕರ್ಯಗಳೊಂದಿಗೆ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆ ಎಂದು ಫ್ಲಿಪ್ ಕಾರ್ಟ್ ಗ್ರೂಪ್ ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದರು.`

ನಾವು ಫ್ಲಿಪ್ ಕಾರ್ಟ್ ಗ್ರೂಪ್ ನೊಂದಿಗಿನ ಈ ಪಾಲುದಾರಿಕೆಯನ್ನು ಎದುರು ನೋಡುತ್ತಿದ್ದೇವೆ ಮತ್ತು ಯುವ ಹಾಗೂ ಮಹತ್ವಾಕಾಂಕ್ಷೆಯ ಭಾರತದ ಗ್ರಾಹಕರನ್ನು ಸಂತೋಷಪಡಿಸುವತ್ತ ಗಮನಹರಿಸಿದ್ದೇವೆ. ABFRL ಮತ್ತು ಫ್ಲಿಪ್ ಕಾರ್ಟ್ ಗ್ರೂಪ್ ನ ಪೂರಕ ಸಾಮರ್ಥ್ಯವನ್ನು ಗಮನಿಸಿದರೆ, ಈ ಪಾಲುದಾರಿಕೆಯು ಭಾರತದ ಉಡುಪು ಉದ್ಯಮದ ಬೆಳವಣಿಗೆಯನ್ನು ವೇಗಗೊಳಿಸುವುದು ಮತ್ತು ಉಡುಪು ವಾಣಿಜ್ಯವನ್ನು ಮರು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡೂ ಸಂಸ್ಥೆಗಳ ನಡುವಿನ ಈ ಒಪ್ಪಂದವು ಅಸ್ತಿತ್ವದಲ್ಲಿರುವ ಬ್ರ್ಯಾಂಡ್ ಗಳ ಪ್ರಮಾಣವನ್ನು ವೃದ್ಧಿಸಿಕೊಳ್ಳಲು ಮತ್ತು ಅದರ ಬ್ರ್ಯಾಂಡ್ ಪೋರ್ಟ್ ಫೋಲಿಯೋವನ್ನು ಉದಯೋನ್ಮುಖವಾದ ಗ್ರಾಹಕ ವಿಭಾಗಗಳಾಗಿ ವಿಸ್ತರಣೆ ಮಾಡಲು ಒಂದು ಅತ್ಯದ್ಭುತವಾದ ಅವಕಾಶವನ್ನು ಕಲ್ಪಿಸುತ್ತದೆ ಎಂದು  ABFRL ವ್ಯವಸ್ಥಾಪಕ ನಿರ್ದೇಶಕ ಆಶಿಶ್ ದೀಕ್ಷಿತ್  ಹೇಳಿದರು.
 

click me!