OnePlus Global Sale: 2021ರಲ್ಲಿ ಜಾಗತಿಕವಾಗಿ 10 ಮಿಲಿಯನ್ ಸ್ಮಾರ್ಟ್‌ಫೋನ್‌ ಮಾರಾಟ!

By Suvarna News  |  First Published Dec 19, 2021, 3:14 PM IST

*ಜಾಗತಿಕವಾಗಿ 1 ಕೋಟಿ  ಯುನಿಟ್‌ಗಳ  ಮಾರಾಟ
*ಭಾರತದಲ್ಲಿ  OnePlus ಮಾರಾಟ ಶೇ.29% ಬೆಳವಣಿಗೆ
*11 ಮಿಲಿಯನ್‌ ತಲುಪಿದ ಕಮ್ಯೂನಿಟಿ ಫೋರಮ್ 


Tech Desk: ಚೀನಾದ ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ (OnePlus) ತನ್ನ ಜಾಗತಿಕವಾಗಿ 10 ಮಿಲಿಯನ್ ಯುನಿಟ್‌ಗಳನ್ನು (1 ಕೋಟಿ) ಮಾರಾಟ (Global Sale) ಮಾಡುವ ಗುರಿಯನ್ನು ಸಾಧಿಸಿದೆ ಎಂದು ಸಿಇಒ ಪೀಟ್ ಲಾವ್ (Pete Lau) ತಿಳಿಸಿದ್ದಾರೆ. ಕಂಪನಿ ನಿರ್ಧರಿಸಿದ ಸಮಯಕ್ಕಿಂತ ಮುಂಚಿತವಾಗಿಯೇ 10 ಕೋಟಿ ಸಾಧನಗಳ ಮಾರಾಟವಾಗಿವೆ ಎಂದು ಅವರು ತಿಳಿಸಿದ್ದಾರೆ.ಕಂಪನಿಯ ಎಂಟನೇ ವಾರ್ಷಿಕೋತ್ಸವದ ಕುರಿತು ಮಾತನಾಡಿರುವ ಪೀಟ್‌, ವೈಬೋ‌ ( Weibo Article) ಲೇಖನದ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

ಜಾಗತಿಕವಾಗಿ 10 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಬ್ರ್ಯಾಂಡ್ ಮುಟ್ಟಿದೆ ಎಂದು ಅವರು ಉಲ್ಲೇಖಿಸಿದ್ದಾರೆ.  ಲಾವ್ ಹಂಚಿಕೊಂಡ ಲೇಖನದ ಪ್ರಕಾರ, ಈ ವರ್ಷ, OnePlus ದೇಶೀಯ ಮಾರುಕಟ್ಟೆಯಲ್ಲಿ ತನ್ನ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದೆ ಮತ್ತು ಉತ್ಪನ್ನಗಳು ಮತ್ತು ಮಾರ್ಕೆಟಿಂಗ್‌ಗೆ‌ (Product and Marketing) ಸಂಬಂಧಿಸಿದ ಕ್ಷೇತ್ರಗಳನ್ನು ಸಕ್ರಿಯವಾಗಿ ಮುನ್ನಡೆಸಿದೆ. 

Tap to resize

Latest Videos

undefined

ಜಾಗತಿಕ ಮಾರುಕಟ್ಟೆಗಳಲ್ಲಿ ಒನ್‌ಪ್ಲಸ್‌ ಹವಾ! 

OnePlus 9 ಸರಣಿ ಬಿಡುಗಡೆಯಾದ ಆರಂಭಿದಲ್ಲಿ 10 ಸೆಕೆಂಡುಗಳಲ್ಲಿ 300 ಮಿಲಿಯನ್ ಯುವಾನ್ (ಅಂದಾಜು $47 ಮಿಲಿಯನ್) ಮಾರಾಟವಾಗಿದೆ. ಕಂಪನಿಯು OnePlus 9R ಮತ್ತು 9RT ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ ಈ ಮೂಲಕ ಮಧ್ಯಮ ಶ್ರೇಣಿ ಮತ್ತು ಮೇಲಿನ ಮಧ್ಯಮ ಶ್ರೇಣಿಯ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ, OnePlus ನ ಜಾಗತಿಕ ಮಾರಾಟಗಳು 2021 ರ ಮೊದಲಾರ್ಧದಲ್ಲಿ ವರ್ಷದಿಂದ ವರ್ಷಕ್ಕೆ 257% ರಷ್ಟು ಹೆಚ್ಚಾಗಿದೆ.  ಯುಎಸ್‌ನಲ್ಲಿನ ಮಾರಾಟ ವರ್ಷದಿಂದ ವರ್ಷಕ್ಕೆ 428% ರಷ್ಟು ಹೆಚ್ಚುತ್ತಿದೆ. ಹಾಗಾಗಿ ಈ ಅವಧಿಯಲ್ಲಿ  ಒನ್‌ಪ್ಲಸ್ ಜಾಗತಿಕವಾಗಿ ಬ್ರ್ಯಾಂಡ್ ಆಗಿ ಉನ್ನತ ಬೆಳವಣಿಗೆ ದರವನ್ನು ಕಂಡಿದೆ.

ಅಗ್ರ 5 ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿಒನ್‌ ಪ್ಲಸ್‌!

ಯುರೋಪ್‌ನಲ್ಲಿ, OnePlus ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅತ್ಯಧಿಕ ಬೆಳವಣಿಗೆ ದರವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿದ್ದು, ವರ್ಷದಿಂದ ವರ್ಷಕ್ಕೆ 304% ಹೆಚ್ಚಳವಾಗಿದೆ. “ನಮ್ಮ ಯುರೋಪಿಯನ್ ಮಾರುಕಟ್ಟೆಗಳು (European Market) ಸಹ ಗಮನಾರ್ಹ ಬೆಳವಣಿಗೆಯನ್ನು ಕಂಡಿವೆ. ವಾಸ್ತವವಾಗಿ, OnePlus ಅಧಿಕೃತವಾಗಿ ವೇಗವಾಗಿ ಬೆಳೆಯುತ್ತಿರುವ ಅಗ್ರ 5 ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿಒನ್‌ ಪ್ಲಸ್‌ ಕೂಡ ಒಂದು. ಯುರೋಪ್‌ನ , 2021 ರ ಮೂರನೇ ತ್ರೈಮಾಸಿಕದಲ್ಲಿ 131% ವಾರ್ಷಿಕ ಬೆಳವಣಿಗೆ ದರವನ್ನು ಹೊಂದಿದೆ" ಎಂದು OnePlus ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. 

ಭಾರತದಲ್ಲಿ  OnePlus ಮಾರಾಟ ಶೇ.29% ಬೆಳವಣಿಗೆ!

ಭಾರತದಲ್ಲಿ, OnePlus ವರ್ಷದಿಂದ ವರ್ಷಕ್ಕೆ 29% ಬೆಳವಣಿಗೆಯನ್ನು ಕಂಡಿದೆ. 2021 ರ ಮೂರನೇ ತ್ರೈಮಾಸಿಕದಲ್ಲಿ 30,000 ಕ್ಕಿಂತ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ 30% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಅಲ್ಲದೆ, OnePlus ಕಮ್ಯೂನಿಟಿ ಫೋರಮ್ ಸದಸ್ಯರು 11 ಮಿಲಿಯನ್‌ಗೆ ತಲುಪಿದ್ದಾರೆ. ಈ ವೇದಿಕೆಯಲ್ಲಿ 116 ಮಿಲಿಯನ್ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ಒನ್‌ಪ್ಲಸ್ ತಿಳಿಸಿದೆ.

ಚೈನೀಸ್ ಬ್ರ್ಯಾಂಡ್ ಈಗ OnePlus 10 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಇದು Qualcomm Snapdragon 8 Gen 1 ಚಿಪ್‌ಸೆಟ್‌ನಿಂದ ಚಾಲಿತವಾಗುವುದನ್ನು ದೃಢೀಕರಿಸಲಾಗಿದೆ. ವರದಿಗಳ ಪ್ರಕಾರ ಫೋನ್‌ಗಳು ಮುಂದಿನ ತಿಂಗಳು ಚೀನಾದ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿವೆ. ಆದರೆ ಇತರ ಪ್ರದೇಶಗಳಲ್ಲಿನ ಗ್ರಾಹಕರು ಮಾರ್ಚ್ ಅಥವಾ ಏಪ್ರಿಲ್‌ವರೆಗೆ ಕಾಯಬೇಕಾಗಬಹುದು.

ಇದನ್ನೂ ಓದಿ:

1) Upcoming OnePlus Phones: 2022ರಲ್ಲಿ ಬಿಡುಗಡೆಯಾಗಲಿರುವ ಒನ್‌ಪ್ಲಸ್ ಫೋನ್‌ಗಳಿವು!

2) Honor X30 5G ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಎಷ್ಟು?

3) Vivo Y32 Launch: ಡ್ಯುಯಲ್ ಕ್ಯಾಮೆರಾ, ಸ್ನಾಪ್‌ಡ್ರಾಗನ್ 680 SoCಯೊಂದಿಗೆ ವಿವೋ ಹೊಸ ಫೋನ್!

click me!