ಹಬ್ಬದ ವೇಳೆ ಆನ್‌ಲೈನ್ ಶಾಪಿಂಗ್ ಮಾಡುತ್ತೀರಾ? ಎಚ್ಚರ ವಹಿಸುವುದು ಅಗತ್ಯ!

By Suvarna News  |  First Published Nov 22, 2020, 2:15 PM IST

ವಂಚನೆಯ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಸೈಬರ್ ವಂಚಕರು ಈ ಹಬ್ಬದ ಋತುವಿಗೆ ಡಿಜಿಟಲ್ ಶಾಪಿಂಗ್ ಮಾಡುವ ಭಾರತೀಯರ ಮೇಲೆ ಹೆಚ್ಚಿನ ಸೈಬರ್ ದಾಳಿ ಸಾಧ್ಯತೆ ಇದೆ.
 


ಭಾರತ(ನ.22) : ಮೆಕಾಫೀ ಕಾರ್ಪ್.(MCFE) ತನ್ನ `2020 ಹಾಲಿಡೇ ಸೀಸನ್: ಸ್ಟೇಟ್ ಆಫ್ ಟುಡೇಸ್ ಡಿಜಿಟಲ್ ಇ-ಶಾಪರ್’ ಭಾರತ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು ಈ ಹಬ್ಬದ ಋತುವಿಗೆ ಹೆಚ್ಚು ಆನ್‍ಲೈನ್‍ನಲ್ಲಿ ಕೊಳ್ಳಲು ಬಯಸುವ ಗ್ರಾಹಕರಿಗೆ ಆನ್‍ಲೈನ್ ತೊಂದರೆಗಳು ಮತ್ತು ಹಗರಣಗಳ ಕುರಿತು ಅರಿವನ್ನು ಮೂಡಿಸಲಿದೆ.

ಸೈಬರ್‌ ದಾಳಿ, ವೈರಸ್‌ ಹಾವಳಿ ಎದುರಿಸಿ : ಮೋದಿ ಟೆಕ್‌ ಟಾಕ್‌!.

Tap to resize

Latest Videos

undefined

ಮೆಕಾಫೀಯ ಸಮೀಕ್ಷೆಯು ಭಾರತದ ಗ್ರಾಹಕರು ಈ ವರ್ಷದ ಜಾಗತಿಕ ಸಂಘಟನೆಗಳಿಂದ ದಿಕ್ಕನ್ನು ಬದಲಾಯಿಸಿದ್ದಾರೆ ಎಂದು ಸೂಚಿಸಿದೆ.  ಕೊರೋನಾ ವಕ್ಕರಿಸಿದ ಬಳಿಕ ಎಲ್ಲವೂ ಆನ್‌ಲೈನ್.  ಇದರಿಂದ ಗ್ರಾಹಕರು ಹೆಚ್ಚು ಆನ್‍ಲೈನ್ ಆತಂಕಗಳಿಗೆ ಒಳಗಾಗುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಪ್ರಾರಂಭವಾದ ದಿನದಿಂದಲೂ ಎಲ್ಲ ವಯಸ್ಸಿನ ಗ್ರಾಹಕರೂ ಅರ್ಧಕ್ಕಿಂತ ಹೆಚ್ಚು(ಶೇ.68.1) ಆನ್‍ಲೈನ್‍ನಲ್ಲಿ ಕೊಳ್ಳುತ್ತಿದ್ದಾರೆ. ಈ ಪ್ರವೃತ್ತಿ ಈ ರಜಾದಿನಗಳಲ್ಲಿ ಹೆಚ್ಚಾಗಲಿದ್ದು ಅರ್ಧದಷ್ಟು(ಶೇ.42.3) ಮಂದಿ ಹಬ್ಬದ ಋತುವಿಗೆ ಆನ್‍ಲೈನ್ ಶಾಪಿಂಗ್ ಚಟುವಟಿಕೆಯನ್ನು ಹೆಚ್ಚಿಸಲು ಯೋಜಿಸುತ್ತಿದ್ದಾರೆ.

ತಪ್ಪು ಮಾಹಿತಿ ನೀಡಿದ 167 ಮಿಲಿಯನ್ ಫೇಸ್‌ಬುಕ್ ಬಳಕೆದಾರರ ಖಾತೆ ಕಪ್ಪು ಪಟ್ಟಿಗೆ!..

2020ರ ಹಬ್ಬದ ಋತುವಿನ ಮೊದಲ ವಾರದಲ್ಲಿ 4.1ಬಿಲಿಯನ್ ಡಾಲರ್ ಇ-ಕಾಮರ್ಸ್ ಮಾರಾಟ ದಾಖಲಾಗಿದ್ದು 2019ರಲ್ಲಿ 2.7ಬಿಲಿಯನ್ ಡಾಲರ್ ಇತ್ತು. ಇದರಿಂದ ಈ ವರ್ಷ ತಮಗೆ, ತಮ್ಮ ಬಂಧುಮಿತ್ರರಿಗೆ ಆನ್‍ಲೈನ್ ಸಂಪರ್ಕದಲ್ಲಿದ್ದಾರೆ ಮತ್ತು ಕೊಳ್ಳುತ್ತಿದ್ದಾರೆ. ಭಾರತದಲ್ಲಿ ಮೂವರಲ್ಲಿ ಒಬ್ಬರು(ಶೇ.29.5) ವಾರಕ್ಕೆ 3-5 ದಿನಗಳು ಶಾಪಿಂಗ್ ಮಾಡುತ್ತಾರೆ ಮತ್ತು ಶೇ.15.7ರಷ್ಟು ಮಂದಿ ಪ್ರತಿನಿತ್ಯ ಶಾಪಿಂಗ್ ಮಾಡುತ್ತಾರೆ.

“ಗ್ರಾಹಕರು ಅಂಗಡಿಗಳಲ್ಲಿ ಕೊಳ್ಳುವುದನ್ನು ತಪ್ಪಿಸಿ ಹಬ್ಬದ ಕೊಳ್ಳುವಿಕೆಯನ್ನು ಆನ್‍ಲೈನ್‍ಗೆ ಬದಲಾಯಿಸುತ್ತಿರುವುದರಿಂದ ಶಾಪಿಂಗ್ ವರ್ತನೆಯು ವಿಕಾಸಗೊಳ್ಳುತ್ತಿದೆ. ಅತ್ಯುತ್ತಮ ರಜಾದಿನದ ಡೀಲ್‍ಗಳು ಮತ್ತು ರಿಯಾಯಿತಿಗಳನ್ನು ಪಡೆಯುವ ಪ್ರಯತ್ನದಲ್ಲಿ ಅವರು ಈ ಹಾನಿಕಾರಕ ವೆಬ್‍ಸೈಟ್‍ಗಳಿಗೆ ಪ್ರವೇಶಿಸುತ್ತಾರೆ, ಸ್ಪಾಮ್ ಮೇಲ್‍ಗಳಿಂದ ಫಿಶಿಂಗ್ ದಾಳಿಗಳಿಗೆ ಒಳಗಾಗುತ್ತಾರೆ. ಅಲ್ಲದೆ ಅವರು ನಿರ್ಲಕ್ಷ್ಯದಿಂದ ವೈಯಕ್ತಿಕ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ನೀಡುತ್ತಾರೆ ಅದನ್ನು ಸೈಬರ್ ಅಪರಾಧಿಗಳು ಲಾಭದ ಉದ್ದೇಶಕ್ಕೆ ಬಳಸುತ್ತಾರೆ” ಎಂದು ಮೆಕಾಫೀ ಇಂಡಿಯಾದ ಎಂಜಿನಿಯರಿಂಗ್ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವೆಂಕಟ್ ಕೃಷ್ಣಾಪುರ್ ಹೇಳಿದರು.

ಈ ಬಾರಿಯ ಹಬ್ಬಕ್ಕೆ ಭಾರತೀಯರ ಬ್ರ್ಯಾಂಡ್ ಆಯ್ಕೆ ಹೇಗಿತ್ತು? ಸಮೀಕ್ಷೆ ಬಹಿರಂಗ

ಅವರು, “ಶೇ.27.5ರಷ್ಟು ಆನ್‍ಲೈನ್ ಕೊಳ್ಳುಗರು ಮಾತ್ರ ಆನ್‍ಲೈನ್ ಭದ್ರತೆಯ ಪರಿಹಾರಗಳನ್ನು ಕೊಳ್ಳುವುದರಿಂದ ಸೈಬರ್ ಅಪರಾಧಿಗಳಿಗೆ ಮುಗ್ಧ ಬಳಕೆದಾರರ ಅನುಕೂಲ ಪಡೆಯುವುದು ಸುಲಭವಾಗಿದೆ. ಸೈಬರ್ ಅಪರಾಧಿಗಳು ಈ ಆನ್‍ಲೈನ್ ವಹಿವಾಟುಗಳ ಹೆಚ್ಚಳದ ಪ್ರಯೋಜನ ಪಡೆಯುತ್ತಾರೆ, ಬಳಕೆದಾರರು ಸಂಭವನೀಯ ರಿಸ್ಕ್‍ಗಳ ಕುರಿತು ಎಚ್ಚರಿಕೆ ವಹಿಸುವುದು ಮತ್ತು ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಈ ಹಬ್ಬದ ಋತುವಿನಲ್ಲಿ ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ” ಎಂದರು.

click me!