ಗ್ರಾಹಕರಿಗೆ BSNL ಭರ್ಜರಿ ಕೊಡುಗೆ, ನಾವು ಯಾರಿಗೂ ಕಮ್ಮಿ ಇಲ್ಲ

By Web Desk  |  First Published Oct 16, 2019, 7:41 PM IST

4ಜಿ ಸೇವೆಗೆ ಅಡಿಯಿಟ್ಟ ಬಿಎಸ್ ಎನ್ ಎಲ್/ ದೇಶಾದ್ಯಂತ ಸೇವೆ ವಿಸ್ತರಣೆ/ ಪ್ರಯೋಗಾರ್ಥ  ವ್ಯವಸ್ಥೆಯಲ್ಲಿ ಯಶ ಕಂಡ ಸಂಸ್ಥೆ/ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ಲಾನ್


ನವದೆಹಲಿ[ಅ. 16]  ಭಾರತೀಯ ದೂರ ಸಂಚಾರ ನಿಗಮ ನಿಯಮಿತ [ಬಿಎಸ್ ಎನ್ ಎಲ್] ಖಾಸಗಿ ಟೆಲಿಕಾಂ ಕಂಪನಿಗಳ ಕಡೆ ಹರಿದು ಹಂಚಿ ಹೋಗಿರುವ ತನ್ನ ಗ್ರಾಹಕರನ್ನು ಮತ್ತೆ ಸೆಳೆಯಲು ಹೊಸ ಪ್ಲಾನ್ ಮಾಡಿದೆ.

ಜಿಯೋ, ವೋಡಾಫೋನ್, ಏರ್ ಟೆಲ್ ಸಾಲಿನಲ್ಲಿಯೇ ಹೆಜ್ಜೆ ಹಾಕಲು ಮುಂದಾಗಿದೆ. ಬಿಎಸ್ ಎನ್ ಎಲ್ VoLTE ಸೇವೆ ನೀಡಲು ಅಣಿಯಾಗಿದೆ. ಈಗಾಗಲೇ ಈ ಪ್ರಕ್ರಿಯೆ ಪರೀಕ್ಷಾರ್ಥವಾಗಿ ಜಾರಿಯಾಗಿದೆ. ರೆಡ್ ಮೀ, ವಿವೋ, ನೋಕಿಯಾ, ಸೋನಿ ಸೇರಿದಂತೆ ವಿವಿಧ ಹ್ಯಾಂಡ್ ಸೆಟ್ ಗಳಲ್ಲಿ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಡೇಟಾ ಬಳಸಿಕೊಂಡು ವೈಸ್ ಮತ್ತು ವಿಡಿಯೋ ಕಾಲ್ ಮಾಡಲು ಗ್ರಾಹಕರಿಗೆ ಸಾಧ್ಯವಾಗಲಿದೆ.

Tap to resize

Latest Videos

undefined

ಟ್ರಿಣ್ ಟ್ರಿಣ್ ಟ್ರೀನ್ ಟ್ರೀನ್.. ಟ್ರೀಈನ್...... BSNL ಅಂತ್ಯ ಸನ್ನಿಹಿತ?

3ಜಿ ಜಾಗದಲ್ಲಿ ಇನ್ನು ಮುಂದೆ 4ಜಿ ಬಳಕೆ ಮಾಡಲು ಸಾಧ್ಯವಾಗುತ್ತದೆ. BSNL ಗ್ರಾಹಕರು ತಮ್ಮ ಸಿಮ್ ಅನ್ನು 3ಜಿಯಿಂದ 4ಜಿಗೆ ಅಪ್ ಗ್ರೇಡ್ ಮಾಡಿಕೊಳ್ಳಬೇಕಾಗುತ್ತದೆ. ಟೆಲಿಕಾಂ ಸಂಸ್ಥೆ ತನ್ನ ಸಧ್ಯದ 3ಜಿ ನೆಟ್‌ವರ್ಕ್‌ಗಳನ್ನು ಬದಲಾಯಿಸುವ 4ಜಿ ಸೇವೆ ಪ್ರಾರಂಭಿಸುವುದಾಗಿ ಹೇಳಿದೆ. ಬಿಎಸ್ಎನ್ಎಲ್ ಕೆಲವು ವಲಯಗಳಲ್ಲಿ ತನ್ನ 3 ಜಿ ಸ್ಪೆಕ್ಟ್ರಮ್ ಅನ್ನು 4ಜಿ ಗೆ ಮರುಹೊಂದಿಸಿದೆ. ಎಲ್ಲೆಡೆ ಈ ಪ್ರಕ್ರಿಯೆ ಮುಗಿದ ನಂತರ ಎಲ್ಲಾ ಬಿಎಸ್‌ಎನ್‌ಎಲ್ ಬಳಕೆದಾರರು 4ಜಿ ಸಿಮ್ ಕಾರ್ಡ್‌ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. 

ಬಿಎಸ್ ಎನ್ ಎಲ್ ನಷ್ಟದ ಹಾದಿಯಲ್ಲಿದೆ. ಕಂಪನಿಯ ಬಳಿ ನೌಕಕರಿಗೆ ಸಂಬಳ ನೀಡಲು ಹಣ ಇಲ್ಲ. ಕೆಲವೇ ತಿಂಗಳುಗಳಲ್ಲಿ ಕಂಪನಿ ಬಾಗಿಲು ಹಾಕಲಿದೆ ಎಂಬ ಮಾತುಗಳು ಹರಿದಾಡಿದ್ದವು. ಇದೆಲ್ಲವನ್ನು ಮೀರಿ ಕಂಪನಿ ಹೆಜ್ಜೆ ಇಡುತ್ತಿದ್ದು ಗ್ರಾಮೀಣ ಭಾಗದಲ್ಲಿ ಇಂದಿಗೂ ದೊಡ್ಡ ನೆಟ್ ವರ್ಕ್ ಎಂದು ಕರೆಸಿಕೊಳ್ಳುವ ಬಿಎಸ್ ಎನ್ ಎಲ್ ಸಾರ್ವಜನಿಕ ಸೇವೆಯಲ್ಲಿ ಯಾವೆಲ್ಲ ಹೊಸ ಹೆಜ್ಜೆ ಇಡಲಿದೆ ಎಂಬುದನ್ನು ಕಾದು ನೋಡಬೇಕು.

click me!