ರಿಲಯನ್ಸ್ ಜಿಯೋದ ಕಡಿಮೆ ಬೆಲೆಯ ಈ 2 ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್?

By Mahmad Rafik  |  First Published Nov 13, 2024, 11:15 AM IST

ರಿಲಯನ್ಸ್ ಜಿಯೋ 239 ರೂ. ಮತ್ತು 249 ರೂ. ಪ್ರಿಪೇಯ್ಡ್ ಪ್ಲಾನ್‌ಗಳ ನಡುವಿನ ವ್ಯತ್ಯಾಸವೇನು? ಯಾವ ಪ್ಲಾನ್ ಹೆಚ್ಚು ಡೇಟಾ ಮತ್ತು ವ್ಯಾಲಿಡಿಟಿ ನೀಡುತ್ತದೆ? ಈ ಲೇಖನದಲ್ಲಿ ತಿಳಿಯಿರಿ.


ಮುಂಬೈ: ಟೆಲಿಕಾಂ ಅಂಗಳದಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ, 4G ನೆಟ್‌ವರ್ಕ್ ಸರ್ವಿಸ್‌ನಲ್ಲಿ ಒಂದೇ ವ್ಯಾಲಿಡಿಟಿ ಹೊಂದಿದ್ದರೂ, ಬೇರೆ ಬೇರೆ ದರಗಳ ಪ್ಲಾನ್‌ ನೀಡಿವೆ. ಕೈಗೆಟುಕುವ ದರದಲ್ಲಿ ಒಂದು ತಿಂಗಳ ವ್ಯಾಲಿಡಿಟಿಯ ಎರಡು ಪ್ರಿಪೇಯ್ಡ್ ಪ್ಲಾನ್ ನೀಡುತ್ತಿದೆ. ರಿಲಯನ್ಸ್ ಜಿಯೋದ 239 ರೂಪಾಯಿ ಮತ್ತು 249 ರೂಪಾಯಿ ರೀಚಾರ್ಜ್ ಪ್ಲಾನ್ ಬಗ್ಗೆ ಹೇಳುತ್ತಿದ್ದೇವೆ. ಈ ಎರಡರಲ್ಲಿ ಯಾವ ರೀಚಾರ್ಜ್ ಹೆಚ್ಚು ಬೆನೆಫಿಟ್ ಹೊಂದಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ. 

ಸದ್ಯ ರಿಲಯನ್ಸ್ ಜಿಯೋದ 239 ರೂ. ಮತ್ತು 249 ರೂ. ಪ್ರಿಪೇಯ್ಡ್ ಪ್ಲಾನ್‌ಗಳು ಹೆಚ್ಚು ಜನಪ್ರಿಯವಾಗಿದೆ. ಈ ಎರಡು ಪ್ಲಾನ್‌ಗಳ ನಡುವಿನ ಕೇವಲ 10 ರೂಪಾಯಿ ಮಾತ್ರವಾಗಿದ್ದು, ಬೆನೆಫಿಟ್‌ಗಳಲ್ಲಿ ಹಲವು ವಿಭಿನ್ನತೆ ಇದೆ. 239 ರೂಪಾಯಿಯ ಪ್ಲಾನ್‌ನಲ್ಲಿ ಪ್ರತಿದಿನ 1.5 GB ಡೇಟಾ ಸಿಕ್ಕರೆ, 249 ರೂ. ಪ್ಲಾನ್‌ನಲ್ಲಿ ಪ್ರತಿದಿನ 1 GB ಡೇಟಾ ನೀಡಲಾಗುತ್ತದೆ. ಆದ್ರೆ ವ್ಯಾಲಿಡಿಟಿಯಲ್ಲಿ ವ್ಯತ್ಯಾಸವಿದೆ. 

ರಿಲಯನ್ಸ್ ಜಿಯೋ ಪ್ಲಾನ್ 1 ಪ್ಲಾನ್ 2
ಬೆಲೆ 239 ರೂಪಾಯಿ 249 ರೂಪಾಯಿ
ಡೇಟಾ ಪ್ರತಿದಿನ 1.5 GB 1 GB
ವ್ಯಾಲಿಡಿಟಿ 22 ದಿನ (3 ವಾರ) 28 ದಿನ (4 ವಾರ))
ಒಟ್ಟು ಡೇಟಾ 33 GB 28 GB
ಎಸ್ಎಂಎಸ್‌ (ಪ್ರತಿದಿನ) 100 100
ಅನಿಯಮಿತ ಕರೆ ಇದೆ ಇದೆ
ಜಿಯೋ ಆಪ್  Jio Cinema, Jio TV, Jio Cloud Jio Cinema, Jio TV, Jio Cloud
ಯಾವುದು ಬೆಸ್ಟ್  ಹೆಚ್ಚು ಡೇಟಾ ಬಳಕೆದಾರರಿಗೆ ಈ ಪ್ಲಾನ್ ಒಳ್ಳೆಯ ಆಯ್ಕೆಯಾಗಿದೆ. ಕಡಿಮೆ ಡೇಟಾ ಬಳಕೆ, ಹೆಚ್ಚು ವ್ಯಾಲಿಡಿಟಿ ಬಳಕೆದಾರರಿಗೆ ಇದು ಒಳ್ಳೆಯ ಆಯ್ಕೆ

Latest Videos

undefined

ಇದನ್ನೂ ಓದಿ: 300MP ಫ್ಲೈಯಿಂಗ್ ಕ್ಯಾಮೆರಾ ಜೊತೆ 7200mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್ ಮೇಲೆ ₹5000ಕ್ಕಿಂತಲೂ ಹೆಚ್ಚು ಡಿಸ್ಕೌಂಟ್ 

Jio 299 Recharge Plan 
ಈ ಎರಡು ಪ್ಲಾನ್ ಜೊತೆಯಲ್ಲಿಯೇ ರಿಲಯನ್ಸ್ ಬಳಕೆದಾರರಿಗೆ 28 ದಿನ ವ್ಯಾಲಿಡಿಟಿಯ ಯೋಜನೆಯನ್ನು 299 ರೂಪಾಯಿಯಲ್ಲಿ ನೀಡುತ್ತಿದೆ. ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 1.5 GB ಡೇಟಾ ಜೊತೆಗೆ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು. ಹಾಗೆ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಮಾಡಬಹುದಾಗಿದೆ. Jio Cinema, Jio TV, Jio Cloud ಆಕ್ಸೆಸ್ ಸಿಗುತ್ತದೆ. 

Jio 319 Recharge Plan
ಜಿಯೋ ಪ್ರಿಪೇಯ್ಡ್ ಬಳಕೆದಾರರು 319 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಇದು ಇಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ಯೋಜನೆಯಡಿ ಬಳಕೆದಾರರಿಗೆ 1.5 GB ಡೇಟಾ ಜೊತೆಗೆ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು. ಹಾಗೆ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಮಾಡಬಹುದಾಗಿದೆ. Jio Cinema, Jio TV, Jio Cloud ಆಕ್ಸೆಸ್ ಸಿಗುತ್ತದೆ. 

ಇದನ್ನೂ ಓದಿ: ಜಿಯೋ ಬಳಕೆದಾರರಿಗೆ 2 ಚೀಪೆಸ್ಟ್ ಪ್ಲಾನ್ ನೀಡಿದ ಮುಕೇಶ್ ಅಂಬಾನಿ

click me!