ಜಿಯೋ ಬಳಕೆದಾರರಿಗೆ 2 ಚೀಪೆಸ್ಟ್ ಪ್ಲಾನ್ ನೀಡಿದ ಮುಕೇಶ್ ಅಂಬಾನಿ

By Mahmad Rafik  |  First Published Nov 11, 2024, 5:14 PM IST

ಮುಕೇಶ್ ಅಂಬಾನಿ ಸಾಲು ಸಾಲು ಪ್ರಿಪೇಯ್ಡ್ ಪ್ಲಾನ್‌ ನೀಡುತ್ತಿವೆ. ಇದೇ ಪ್ಲಾನ್‌ನ್ನು ಬೇರೆ ಟೆಲಿಕಾಂ ಕಂಪನಿಗಳು 180 ರಿಂದ 200 ರೂ.ವರೆಗೆ ನೀಡುತ್ತಿವೆ.


ಮುಂಬೈ: ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತ ಮಾತ್ರವಲ್ಲ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಿಲಯನ್ಸ್ ಇಂಡಸ್ಟ್ರಿ ಭಾರತದ ಪ್ರಮುಖ ಕಂಪನಿಗಳಲ್ಲಿ ಒಂದಾಗಿದ್ದು, ಹಳ್ಳಿ ಹಳ್ಳಿಗೂ ಸೇವೆಯನ್ನು ತಲುಪಿಸುವಲ್ಲಿ ಕೆಲಸ ಮಾಡುತ್ತಿದೆ. ರಿಲಯನ್ಸ್ ಜಿಯೋ ಭಾರತದ ಅತಿ ದೊಡ್ಡ ಖಾಸಗಿ ಟೆಲಿಕಾಂ ಕಂಪನಿಯಾಗಿದ್ದು, ಇದನ್ನು ಮುಕೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ನೋಡಿಕೊಳ್ಳುತ್ತಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿ ರಿಲಯನ್ಸ್ ಜಿಯೋ ತನ್ನದೇ ಆದ ಮೈಲಿಗಲ್ಲು ಸ್ಥಾಪನೆ ಮಾಡಿರುವ ಸಂಸ್ಥೆ, ಟ್ಯಾರಿಫ್ ಬೆಲೆ ಏರಿಕೆ ನಂತರ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. 

ರಿಲಯನ್ಸ್ ಜಿಯೋ ನಂತರ ಇನ್ನುಳಿದ ಖಾಸಗಿ ಕಂಪನಿಗಳಾದ  ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಹ ಟ್ಯಾರಿಫ್ ಹೆಚ್ಚಿಸಿಕೊಂಡಿದ್ದವು. ಆದ್ರೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಬೆಲೆ ಹೆಚ್ಚಿಸಿಕೊಳ್ಳದೇ ತನ್ನ ನೆಟ್‌ವರ್ಕ್‌ಗೆ ಬರೋ ಗ್ರಾಹಕರಿಗಾಗಿ ಹೊಸ ಆಫರ್ ಬಿಡುಗಡೆ ಮಾಡಿತು. ಈ ಕಾರಣದಿಂದ ಗ್ರಾಹಕರು ಬಿಎಸ್‌ಎನ್‌ಎಲ್‌ ನತ್ತ ಮುಖ ಮಾಡಲು ಆರಂಭಿಸಿದರು. ಇದೀಗ ರಿಲಯನ್ಸ್ ಜಿಯೋ ಕಡಿಮೆ ಬೆಲೆಯ 2 ಪ್ರಿಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆಗೊಳಿಸಿದೆ. 

Latest Videos

Jio Rs 173 recharge plan 
ಜಿಯೋದ ಒಂದು ತಿಂಗಳಿನ ಪ್ಲಾನ್ 173 ರೂ.ಗೆ ಲಭ್ಯವಿದೆ. ಇನ್ನುಳಿದ ಎರಡು ಖಾಸಗಿ ಕಂಪನಿಗಳು ಕನಿಷ್ಠ 180 ರಿಂದ 200 ರೂ.ವರೆಗೆ ತಿಂಗಳ ವ್ಯಾಲಿಡಿಟಿಯ ಪ್ಲಾನ್ ನೀಡುತ್ತಿವೆ. ರಿಲಯನ್ಸ್ ಜಿಯೋ ನೀಡುತ್ತಿರುವ 336 ದಿನಗಳ ವ್ಯಾಲಿಡಿಟಿಯ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ್ರೆ ನಿಮಗೆ ತಿಂಗಳಿಗೆ 173 ರೂಪಾಯಿ ಆಗುತ್ತದೆ. ಗ್ರಾಹಕರು 1,899 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ 336 ದಿನದ ಪ್ಲಾನ್ ಆಕ್ಟಿವೇಟ್ ಆಗುತ್ತದೆ. 

ಇದನ್ನೂ ಓದಿ: ಬಿಎಸ್‌ಎನ್‌ಎಲ್‌ಗೆ ಗುನ್ನಾ ಕೊಟ್ಟ ಜಿಯೋ; 10 ರೂಪಾಯಿಗೂ ಕಡಿಮೆ ಬೆಲೆಯಲ್ಲಿ 2 ಬಿಗ್ ಆಫರ್ ಕೊಟ್ಟ ಅಂಬಾನಿ

336 ದಿನದ ವ್ಯಾಲಿಡಿಟಿ ಪ್ಲಾನ್‌ನಲ್ಲಿ ಗ್ರಾಹಕರಿಗೆ 24GB ಹೈಸ್ಪೀಡ್ ಡೇಟಾ ಯಾವುದೇ ದಿನದ ಮಿತಿ ಇಲ್ಲದೇ ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕಾಲ್ ಮಾಡಬಹುದು. ಹಾಗೆ 3,600 ಉಚಿತ ಎಸ್ಎಂಎಸ್ ಆಪ್ಷನ್  ಸಹ ಗ್ರಾಹಕರಿಗೆ ನೀಡಲಾಗುತ್ತದೆ.

Jio Rs 189 recharge plan 
ಜಿಯೋದ ಮತ್ತೊಂದು ಪ್ರಿಪೇಯ್ಡ್ ಪ್ಲಾನ್ ಬೆಲೆ 189 ರೂಪಾಯಿ ಆಗಿದೆ. ಈ ಪ್ಲಾನ್ 2GB ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್, ಉಚಿತ 300 ಎಸ್‌ಎಂಎಸ್ ಬೆನೆಫಿಟ್ ಒಳಗೊಂಡಿವೆ. ಇನ್ನುಳಿದಂತೆ ಗ್ರಾಹಕರಿಗೆ ಜಿಯೋ ಕ್ಲೌಡ್, ಜಿಯೋ ಟಿವಿ, ಜಿಯೋ ಸಿನಿಮಾ ಆಪ್‌ಗಳ ಆಕ್ಸೆಸ್ ಉಚಿತವಾಗಿ ಗ್ರಾಹಕರಿಗೆ ಸಿಗಲಿದೆ. 

ಜಿಯೋ ಫೋನ್‌ ಬಳಕೆದಾರರಿಗೆ 23 ದಿನ ವ್ಯಾಲಿಡಿಟಿಯ 125 ರೂಪಾಯಿಯ ಪ್ಲಾನ್ ನೀಡಲಾಗಿದೆ. ಈ ಪ್ಲಾನ್‌ನಲ್ಲಿ ಪ್ರತಿದಿನ 0.5GB ಡೇಟಾ, ಅನ್‌ಲಿಮಿಟೆಡ್ ಕಾಲ್ ಮತ್ತು 300 ಉಚಿತ ಎಸ್‌ಎಂಎಸ್ ಸಿಗಲಿದೆ. 182 ರೂ.ನಲ್ಲಿ 28 ದಿನದ ವ್ಯಾಲಿಡಿಟಿ ಜೊತೆ ಪ್ರತಿದಿನ 2GB ಡೇಟಾ ಸಿಗುತ್ತದೆ.

ಇದನ್ನೂ ಓದಿ: ಅತಿ ಕಡಿಮೆ ಬೆಲೆಯಲ್ಲಿ ಜಿಯೋದಿಂದ 108MP ಕ್ಯಾಮೆರಾ, 6600mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್

click me!