iQoo Neo Series Launch Event: ಡಿ.20ಕ್ಕೆ NEO 5S, NEO 5 SE ಸ್ಮಾರ್ಟ್‌ಫೋನ ಲಾಂಚ್?

Suvarna News   | Asianet News
Published : Dec 11, 2021, 04:43 PM ISTUpdated : Dec 11, 2021, 04:52 PM IST
iQoo Neo Series Launch Event: ಡಿ.20ಕ್ಕೆ NEO 5S,  NEO 5 SE ಸ್ಮಾರ್ಟ್‌ಫೋನ ಲಾಂಚ್?

ಸಾರಾಂಶ

* ಚೀನಾದಲ್ಲಿ iQoo ಡಿಸೆಂಬರ್‌ 20ಕ್ಕೆ ಸ್ಮಾರ್ಟ್‌ಫೋನ್ ಬಿಡುಗಡೆ ಇವೆಂಟ್ ಆಯೋಜಿಸಿದೆ * ಈ ಇವೆಂಟ್‌ನಲ್ಲಿ ನಿಯೋ ಸೀರೀಸ್ ಸ್ಮಾರ್ಟ್‌ಫೋನ್ ಬಿಡುಗಡೆ ಸಾಧ್ಯತೆ * ಭಾರತದಲ್ಲೂ ತನ್ನದೇ ಗ್ರಾಹಕ ವಲಯವನ್ನು ಹೊಂದಿರುವ ಐಕ್ಯೂ ಕಂಪನಿ  

(ನವದೆಹಲಿ ಡಿ.11) ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಚೀನಾ (China) ಮೂಲದ ಕಂಪನಿಗಳದ್ದೇ ದರ್ಬಾರ್ ಇದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.  ಬಹಳಷ್ಟು ಚೀನಾ ಮೂಲದ ಕಂಪನಿಗಳು ಬಜೆಟ್ ಹಾಗೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೂಲಕ ಭಾರತದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಇದೇ ಹಾದಿಯಲ್ಲಿ ಚೀನಾ ಮೂಲದ ಮತ್ತೊಂದು ಕಂಪನಿ ಐಕ್ಯೂ(iQoo) ಇದೆ. ಈ ಕಂಪನಿಯು ಡಿಸೆಂಬರ್ ನಿಯೋ ಸೀರಿಸ್ (Neo Series) ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಸಾಧ್ಯತೆ ಇದೆ. ಈ ಮಾಹಿತಿಯನ್ನು ಕಂಪನಿಯು ತನ್ನ Weibo ಸಾಮಾಜಿಕ ಜಾಲತಾಣದ ಮೂಲಕ ಘೋಷಣೆ ಮಾಡಿದೆ. ಆದರೆ, ಈ ಇವೆಂಟ್‌ನಲ್ಲಿ ಯಾವ ರೀತಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ ಎಂಬ ಬಗ್ಗೆ ಯಾವುದೇ ರೀತಿ ಖಚಿತ ಮಾಹಿತಿಯನ್ನು ಕಂಪನಿಯು ಬಿಟ್ಟುಕೊಟ್ಟಿಲ್ಲ.

ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ಕಂಪನಿಯು ನಿಯೋ ಸೀರೀಸ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ. ಅಂದರೆ, ಈ ಇವೆಂಟ್‌ನಲ್ಲಿ ಬಳಕೆದಾರರು ಐಕ್ಯೂ ನಿಯೋ 5ಎಸ್ (iQoo Neo 5s), ಐಕ್ಯೂ ನಿಯೋ 5 ಎಸ್ಇ (iQoo Neo SE) ಸೀರೀಸ್ ಸ್ಮಾರ್ಟ್‌ಫೋನ್ ಲಾಂಚ್ ನಿರೀಕ್ಷಿಸಬಹುದಾಗಿದೆ. ಐಕ್ಯೂ ಕಂಪನಿಯು ಈ ಮೊದಲ ವಿವೋ (Vivo) ಕಂಪನಿಯ ಅಂಗ ಸಂಸ್ಥೆಯಾಗಿದ್ದು. ಅದೀಗ ಸ್ವತಂತ್ರ ಬ್ರ್ಯಾಂಡ್ ಆಗಿ ಕಾರ್ಯನಿರ್ವಹಿಸುತ್ತಿದೆ.

ಎಲ್ಲ ಫೋನುಗಳು ಹೊಸ ಒರಿಜಿನ್ ಒಎಸ್ ಆಧಾರಿತ!

ಡಿಸೆಂಬರ್ 20ರಂದ ನಡೆಯಲಿರುವ ಇವೆಂಟ್‌ನಲ್ಲಿ ಲಾಂಚ್ ಆಗಲಿರುವ ಐಕ್ಯೂ ನಿಯೋ 5ಎಸ್ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲಂಕಾಮ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್  (Qualcomm Snapdragon 888) ಇರಬಹದು ಎಂದು ಅಂದಾಜಿಸಲಾಗುತ್ತಿದೆ. ಜೊತೆಗೆ, ನಿಯೋ 5ಎಸ್ ಅಮೋಎಲ್ಇಡಿ ಡಿಸ್‌ಪ್ಲೇ ಕೂಡ ಇರಲಿದೆ. ಕಂಪನಿಯು ಇದೇ ಇವೆಂಟ್‌ನಲ್ಲಿ ಐಕ್ಯೂ ನಿಯೋ 5 ಎಸ್ಇ (iQoo Neo SE) ಸ್ಮಾರ್ಟ್‌ಫೋನ್ ಕೂಡ ಲಾಂಚ್ ಮಾಡಲಿದೆ ಎನ್ನಲಾಗುತ್ತಿದೆ.  ನಿಯೋ ಸೀರೀಸ್‌ನಲ್ಲಿ ಬಿಡುಗಡೆಯಾಗಲಿರುವ ಎಲ್ಲ ಫೋನುಗಳು ಹೊಸ ಒರಿಜಿನ್ ಒಎಸ್ ಆಧರಿತವಾಗಲಿರುವ ಎಂಬುದನ್ನು ಕಂಪನಿಯು ಖಚಿತಪಡಿಸಿದೆ.

Oppo Find N: ಡಿ. 15 ರಂದು ಬಿಡುಗಡೆಗೆ ಸಿದ್ಧವಾಗಿದೆ ಒಪ್ಪೊ ಮೊದಲ ಫೋಲ್ಡೇಬಲ್ ಫೋನ್

ಚೀನಾದ ಸಾಮಾಜಿಕ ಜಾಲತಾಣವಾಗಿರುವ Weiboನಲ್ಲಿ ಟೀಸರ್ ಷೇರ್ ಮಾಡಿಕೊಂಡಿರುವ ಐಕ್ಯೂ ಕಂಪನಿಯು, ಚೀನಾದಲ್ಲಿ ನಿಯೋ ಸೀರೀಸ್ ಫೋನುಗಳ ಲಾಂಚ್ ದಿನಾಂಕವನ್ನು ಪ್ರಕಟಿಸಿದೆ. ದಿನಾಂಕವನ್ನು ಖಚಿತಪಡಿಸಿರುವ ಕಂಪನಿಯು ಯಾವೆಲ್ಲ ಸ್ಮಾರ್ಟ್‌ಫೋನುಗಳನ್ನು ಲಾಂಚ್ ಮಾಡಲಿದೆ ಎಂಬುದನ್ನು ಮಾತ್ರ ತಿಳಿಸಿಲ್ಲ. ಆದರೂ, ಕೆಲವು ವರದಿಗಳ ಪ್ರಕಾರ, ಕಂಪನಿಯ ಐಕ್ಯೂ ನಿಯೋ 5ಎಸ್ ಮತ್ತು ಐಕ್ಯೂ ನಿಯೋ 5 ಎಸ್ಇ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಎನ್ನಲಾಗುತ್ತಿದೆ. 

ಡಿಸೆಂಬರ್ 20ರಂದು ಸಂಪೂರ್ಣ ಮಾಹಿತಿ!

ಈಗ ಗೊತ್ತಾಗಿರುವ ಮಾಹಿತಿಗಳ ಪ್ರಕಾರ, ಐಕ್ಯೂ ನಿಯೋ 5ಎಸ್ (iQoo Neo 5s) ಸ್ಮಾರ್ಟ್‌ಫೋನ್ ಸ್ಯಾಪ್‌ಡ್ರಾಗನ್ 888 ಪ್ರೊಸೆಸರ್ ಹೊಂದಿರಲಿದೆ ಎಂದುಹೇಳಲಾಗುತ್ತಿದೆ. ಜತೆಗೆ, ಹೋಲ್ ಪಂಚ್ ಡಿಸ್‌ಪ್ಲೇ ಇರಲಿದ್ದು, 8 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್  ಅನ್ನು ಕಂಪನಿ ನೀಡಲಿದೆ. ಕೆಲವು ಸೋರಿಕೆ ಮಾಹಿತಿಗಳ ಪ್ರಕಾರ, ಐಕ್ಯೂ ನಿಯೋ 5ಎಸ್ ಸ್ಮಾರ್ಟ್‌ಫೋನ್  AMOLED ಪ್ರದರ್ಶಕದೊಂದಿಗೆ ಬರಲಿದೆ. ನೀವು ಈ ಸ್ಮಾರ್ಟ್‌ಫೋನ್‌ನಲ್ಲಿ 4,500 mAh ಸಾಮರ್ಥ್ಯದ ಬ್ಯಾಟರಿಯನ್ನು ನಿರೀಕ್ಷಿಸಬಹುದಾಗಿದೆ. ಇವೆಲ್ಲವೂ ಆನ್ಲೈನ್‌ನಲ್ಲಿ ಸೋರಿಕೆಯಾದ ಮಾಹಿತಿಗಳಷ್ಟೇ. ಕಂಪನಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಡಿಸೆಂಬರ್ 20ರಂದು ಸಂಪೂರ್ಣ ಮಾಹಿತಿ ಹೊರ ಬೀಳಲಿದೆ. 

ಅದೇ ರೀತಿ, ಐಕ್ಯೂ ನಿಯೋ 5 ಎಸ್ಇ(iQoo Neo 5 SE) ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡಿಮೆನ್ಸಿಟಿ 1200 ಪ್ರೊಸೆಸರ್‌ನೊಂದಿಗೆ ಬರಲಿದೆ ಎನ್ನಲಾಗುತ್ತಿದೆ. ಇನ್ನು ಐಕ್ಯೂ ನಿಯೋ 5ಎಸ್ (iQoo Neo 5s) ಸ್ಮಾರ್ಟ್‌ಫೋನ್  ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳ ಸೆಟ್‌ಅಪ್ ನಿರೀಕ್ಷಿಸಬಹುದಾಗಿದೆ. ಈ ಪೈಕಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಬಹುದು ಎಂದು ಹೇಳಲಾಗುತ್ತಿದೆ.  ಕಂಪನಿಯು ಫೋನ್‌ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡುವ ಸಾಧ್ಯತೆ ಇದೆ.

Moto G51 5G: Motorolaದ ಅತ್ಯಂತ ಅಗ್ಗದ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್