ಸ್ವಿಸ್ ಜನಕ್ಕೆ ನಾಲ್ಕೇ ದಿನ, ಐಫೋನ್ 16 ಖರೀದಿಗೆ ಭಾರತೀಯರು ಸರಾಸರಿ ಎಷ್ಟು ದಿನ ಕೆಲಸ ಮಾಡಬೇಕು?

Published : Oct 07, 2024, 02:34 PM IST
ಸ್ವಿಸ್ ಜನಕ್ಕೆ ನಾಲ್ಕೇ ದಿನ, ಐಫೋನ್ 16 ಖರೀದಿಗೆ ಭಾರತೀಯರು ಸರಾಸರಿ ಎಷ್ಟು ದಿನ ಕೆಲಸ ಮಾಡಬೇಕು?

ಸಾರಾಂಶ

ಐಫೋನ್ 16 ಖರೀದಿಗೆ ಭಾರತೀಯರು ಮುಗಿ ಬೀಳುತ್ತಿದ್ದಾರೆ. ಆದರೆ ಐಫೋನ್ 16 ಎಲ್ಲಾ ಭಾರತೀಯರಿಗೆ ಕೈಗೆಟುಕುವ ದರದ ಫೋನ್ ಅಲ್ಲ. ಹಾಗಾದರೆ ಭಾರತೀಯರ ಸರಾಸರಿ ಆದಾಯ ಲೆಕ್ಕಹಾಕಿದರೆ ಐಫೋನ್ 16 ಖರೀದಿಗೆ ಎಷ್ಟು ದಿನ ಕೆಲಸ ಮಾಡಬೇಕು? ಇತರ ದೇಶಗಳಲ್ಲಿ ಎಷ್ಟು ದಿನ ದುಡಿದರೆ ಐಫೋನ್ 16 ಖರೀದಿಸಲು ಸಾಧ್ಯ, ಇಲ್ಲಿದೆ ಅಧ್ಯಯನ ವರದಿ

ದೆಹಲಿ(ಅ.07): ಬೆಲೆ ಎಷ್ಟೇ ಜಾಸ್ತಿಯಾದ್ರೂ ಆಪಲ್ ಐಫೋನ್‌ಗಳಿಗೆ ಜಗತ್ತಿನಾದ್ಯಂತ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ. ಭಾರತದಲ್ಲೂ ಐಫೋನ್ ಪ್ರಿಯರು ತುಂಬಾ ಜನ ಇದ್ದಾರೆ. ಆದ್ರೆ ಎಲ್ಲರೂ ಅದನ್ನು ಖರೀದಿಸಲು ಸಾಧ್ಯವಾಗುತ್ತದೆ ಎಂದೇನಿಲ್ಲ. ಏಕೆಂದರೆ ಐಫೋನ್ ನಮ್ಮ ಜೇಬಿಗೆ ತಕ್ಕ ಸ್ಮಾರ್ಟ್‌ಫೋನ್ ಅಲ್ಲ. ಐಫೋನ್ 16 ಸರಣಿ ಬಿಡುಗಡೆಯಾದ ದಿನ ಆಪಲ್ ಸ್ಟೋರ್‌ಗಳ ಮುಂದೆ ದೊಡ್ಡ ಕ್ಯೂ ಕಂಡರೂ, ಹೆಚ್ಚಿನ ಭಾರತೀಯರಿಗೆ ಈ ಮಾದರಿಗಳನ್ನು ಖರೀದಿಸುವುದು ಅಷ್ಟು ಸುಲಭವಲ್ಲ ಎಂದು ಅಂಕಿಅಂಶಗಳು ತೋರಿಸುತ್ತವೆ. 

ಪ್ರತಿಯೊಂದು ದೇಶದಲ್ಲೂ ಐಫೋನ್ ಖರೀದಿಸಲು ಎಷ್ಟು ದಿನ ಕೆಲಸ ಮಾಡಬೇಕು ಎಂಬುದರ ಬಗ್ಗೆ ಒಂದು ಅಧ್ಯಯನ ನಡೆದಿದೆ. ಮೂರು ತಿಂಗಳು ದುಡಿದರೆ ಸಿಗುವ ಸಂಬಳದಲ್ಲಿ ಮಾತ್ರ ಐಫೋನ್ 16 ಕೊಳ್ಳಲು ಸಾಧ್ಯವಾಗುವ ಜನ ಈ ಜಗತ್ತಿನಲ್ಲಿದ್ದಾರೆ. ಅದೇ ಸಮಯದಲ್ಲಿ, ಕೇವಲ 4 ದಿನ ಕೆಲಸ ಮಾಡಿದರೆ ಐಫೋನ್ 16 ಕೊಳ್ಳಲು ಸಾಧ್ಯವಾಗುವ ಜನರೂ ಇದ್ದಾರೆ ಎಂದು 'ಐಫೋನ್ ಇಂಡೆಕ್ಸ್' ಹೇಳುತ್ತದೆ. ಐಫೋನ್ 16 ಪ್ರೊ (128GB) ರೂಪಾಂತರದ ಬೆಲೆ ಮತ್ತು ಪ್ರತಿಯೊಂದು ದೇಶದ ಸರಾಸರಿ ವೇತನವನ್ನು ಆಧರಿಸಿ ಐಫೋನ್ ಇಂಡೆಕ್ಸ್ ಅನ್ನು ಲೆಕ್ಕಹಾಕಲಾಗುತ್ತದೆ. 

ಹಬ್ಬದ ಬೆನ್ನಲ್ಲೇ ಮುಕೇಶ್ ಅಂಬಾನಿ ಮಾಸ್ಟರ್‌ಸ್ಟ್ರೋಕ್, ಕೇವಲ 13 ಸಾವಿರ ಇಎಂಐನಲ್ಲಿ ಐಫೋನ್ 16 !

ಐಫೋನ್ ಇಂಡೆಕ್ಸ್ ಪ್ರಕಾರ, ಸ್ವಿಟ್ಜರ್‌ಲ್ಯಾಂಡ್‌ನ ಜನರು ಕೇವಲ 4 ದಿನ ಕೆಲಸ ಮಾಡಿದರೆ ಸಾಕು, ಅವರ ಸಂಬಳದಲ್ಲಿ ಐಫೋನ್ 16 ಕೊಳ್ಳಬಹುದು. ಅಮೆರಿಕಾದಲ್ಲಿ 5.1 ದಿನ ಕೆಲಸ ಮಾಡಿದರೆ ಈ ಫೋನ್ ಕೊಳ್ಳಬಹುದು. 5.7 ದಿನಗಳೊಂದಿಗೆ ಆಸ್ಟ್ರೇಲಿಯಾ ಮತ್ತು ಸಿಂಗಾಪುರ ಇದ್ದರೆ,  ಲಕ್ಸೆಂಬರ್ಗ್, ಡೆನ್ಮಾರ್ಕ್, ಯುಎಇ, ಕೆನಡಾ, ನಾರ್ವೆ, ನ್ಯೂಜಿಲೆಂಡ್, ಐರ್ಲೆಂಡ್, ಜರ್ಮನಿ, ಯುಕೆ, ನೆದರ್‌ಲ್ಯಾಂಡ್ಸ್, ಫಿನ್‌ಲ್ಯಾಂಡ್, ಪೋರ್ಟೊ ರಿಕೊ, ದಕ್ಷಿಣ ಕೊರಿಯಾ, ಸ್ವೀಡನ್, ಫ್ರಾನ್ಸ್, ಆಸ್ಟ್ರಿಯಾ ಇತ್ಯಾದಿ ದೇಶಗಳಲ್ಲಿ ಐಫೋನ್ 16 ಖರೀದಿಸಲು ಸರಾಸರಿ 10 ದಿನಗಳಿಗಿಂತ ಕಡಿಮೆ ಸಮಯದ ವೇತನ ಸಾಕು. 

ಆದರೆ ಭಾರತದಲ್ಲಿ ಒಬ್ಬ ವ್ಯಕ್ತಿ ಹೊಸ ಐಫೋನ್ 16 ಖರೀದಿಸಬೇಕೆಂದರೆ 47.6 ದಿನ ಕೆಲಸ ಮಾಡಬೇಕು. ಬ್ರೆಜಿಲ್‌ನಲ್ಲಿ ಈ ಸಂಖ್ಯೆ 68.6 ಕ್ಕೆ ಹೆಚ್ಚುತ್ತದೆ, ಫಿಲಿಪ್ಪೀನ್ಸ್‌ನಲ್ಲಿ 68.8 ಮತ್ತು ಟರ್ಕಿಯಲ್ಲಿ 72.9 ದಿನಗಳು. ಚೀನಾದಲ್ಲಿ ಐಫೋನ್ 16 ಖರೀದಿಸಲು ಬೇಕಾದ ಹಣವನ್ನು ಸಂಪಾದಿಸಲು ಒಬ್ಬ ವ್ಯಕ್ತಿ ಸರಾಸರಿ 24.7 ದಿನ ಕೆಲಸ ಮಾಡಬೇಕು. ಭಾರತದಲ್ಲಿ ಐಫೋನ್ 16 ರೂಪಾಂತರವು ₹79,900, ಐಫೋನ್ 16 ಪ್ಲಸ್ ₹89,900, ಐಫೋನ್ 16 ಪ್ರೊ ₹1,19,900 ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ₹1,44,900 ಗಳಿಂದ ಪ್ರಾರಂಭವಾಗುತ್ತದೆ. 

ಆ್ಯಪಲ್ ಐಫೋನ್ 16 ಖರೀದಿಸುವವರಿಗೆ ಗುಡ್ ನ್ಯೂಸ್ ನೀಡಿದ ರತನ್ ಟಾಟಾ!

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್