ಫೇಸ್​ಬುಕ್​, ಇನ್​ಸ್ಟಾ, ಜಿ-ಮೇಲ್​... ಹೀಗೆ ಯಾವುದಾದ್ರೂ ಪಾಸ್​ವರ್ಡ್​ ಮರೆತುಹೋಗಿದ್ಯಾ? ಇಲ್ಲೇ ಇರತ್ತೆ ನೋಡಿ!

By Suchethana DFirst Published Oct 5, 2024, 10:32 PM IST
Highlights


ಸ್ಮಾರ್ಟ್​ಫೋನ್​ನಲ್ಲಿ ಸ್ಟೋರ್​ ಆಗಿರೋ ಆ್ಯಪ್​ಗಳ ಪಾಸ್​ವರ್ಡ್​ ಮರೆತು ಪೇಚಿಗೆ ಸಿಲುಕಿದ್ದೀರಾ? ಇನ್ಮುಂದೆ ವರಿ ಮಾಡೋ ಅಗತ್ಯವಿಲ್ಲ. ಎಲ್ಲಾ ಇಲ್ಲೇ ಸಿಗತ್ತೆ ನೋಡಿ...
 

ಸ್ಮಾರ್ಟ್​ಫೋನ್​ ಬಂದ ಮೇಲೆ ಪಾಸ್​ವರ್ಡ್​ ಹೆಚ್ಚಾಗಿ ಬಿಟ್ಟಿದೆ. ಒಂದೊಂದಕ್ಕೆ ಒಂದೊಂದು ಪಾಸ್​ವರ್ಡ್​ ಇಟ್ಟೋ, ಇಲ್ಲವೇ ಯಾವ ಆ್ಯಪ್​ಗೆ ಯಾವ ಪಾಸ್​ವರ್ಡ್​ ಎಂದು ಮರೆತುಹೋಗಿಯೋ ಪೇಚಾಡುವವರೇ ಹೆಚ್ಚು. ಫಾರ್​ಗಾಟ್​ ಪಾಸ್​ವರ್ಡ್​ ಕೊಟ್ಟು, ಅದು ಕೇಳುವ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರಿಸೋದು, ಈ ಹಿಂದೆ ಯಾವ ಪ್ರಶ್ನೆಗೆ ಏನು ಉತ್ತರ ಕೊಟ್ಟಿದ್ದು ಗೊತ್ತಾಗದೇ ಪೇಚಿಗೆ ಸಿಲುಕುವುದು... ಅಬ್ಬಬ್ಬಾ ಈ ಪಾಸ್​ವರ್ಡ್​ಗಳ ಉಸಾಬರಿಯೇ ಬೇಡ ಎನ್ನಿಸುತ್ತದೆ. ಇನ್​ಸ್ಟಾಗ್ರಾಮ್​, ಫೇಸ್​ಬುಕ್​, ಇ-ಮೇಲ್​, ಫೋನ್​ ಪೇ, ಗೂಗಲ್​ ಪೇ... ಸೇರಿದಂತೆ ನಿಮ್ಮ ಮೊಬೈಲ್​ನಲ್ಲಿ ಸ್ಟೋರ್​ ಆಗಿರುವ ಎಲ್ಲಾ ಆ್ಯಪ್​ಗಳ ಎಲ್ಲಾ ಪಾಸ್​ವರ್ಡ್​ಗಳೂ ಒಂದೇ ಕಡೆ ಸ್ಟೋರ್​ ಆಗಿರುತ್ತೆ ಎನ್ನುವುದು ನಿಮಗೆ ಗೊತ್ತಾ? 

ಹೌದು. ಕೆಲವೊಮ್ಮೆ ತಿಂಗಳಿಗೋ, ಎರಡು ತಿಂಗಳಿಗೊಮ್ಮೆಯೋ ಕೆಲವು ಆ್ಯಪ್​ಗಳು ಅದರಲ್ಲಿಯೂ ಹೆಚ್ಚಾಗಿ ಬ್ಯಾಂಕಿಂಗ್​ಗಳ ಆ್ಯಪ್​ಗಳು ಪಾಸ್​ವರ್ಡ್​ ಬದಲಾಯಿಸುವಂತೆ ಕೇಳುತ್ತವೆ. ಹಿಂದೆ ಮೂರು ಬಾರಿ ಕೊಟ್ಟಿರುವ ಪಾಸ್​ವರ್ಡ್​ ಮತ್ತೆ ಕೊಡುವಂತಿರುವುದಿಲ್ಲ. ಇದಕ್ಕಾಗಿಯೇ ಯಾವ ಪಾಸ್​ವರ್ಡ್​ ಕೊಟ್ಟೆನೆಂದು ತಿಳಿಯದೇ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮೊಬೈಲ್​ನಲ್ಲಿ ಇರುವ ನಿಮ್ಮ ಎಲ್ಲಾ ಆ್ಯಪ್​ಗಳ ಪಾಸ್​ವರ್ಡ್​ಗಳು ಒಂದು ಕಡೆ ಸ್ಟೋರ್​ ಆಗಿರುತ್ತದೆ. ಅದು ಎಲ್ಲಿ ಇರುತ್ತೆ, ಹೇಗೆ ಇರುತ್ತೆ ಎನ್ನುವ ಡಿಟೇಲ್ಸ್ ಇಲ್ಲಿದೆ ನೋಡಿ...

Latest Videos

ಒಂದು ಲಕ್ಷ ಠೇವಣಿಗೆ 50 ಸಾವಿರ ರೂ. ಬಡ್ಡಿ: ಎಲ್ಲಕ್ಕಿಂತ ಬೆಸ್ಟ್‌ ಅಂಚೆ ಇಲಾಖೆಯ ಎಫ್‌ಡಿ!

ಮೊಬೈಲ್​ ಸೆಟ್ಟಿಂಗ್​ನಲ್ಲಿ ಗೂಗಲ್​ (Goole) ಮೇಲೆ ಕ್ಲಿಕ್​ ಮಾಡಿ. ನಂತರ ಆಟೋಫಿಲ್​ (autofill) ಮೇಲೆ ಕ್ಲಿಕ್​  ಮಾಡಿ. ನಂತರ ಆಟೋಫಿಲ್ ವಿತ್​ ಗೂಗಲ್​  (Autofill with Google) ಮೇಲೆ ಕ್ಲಿಕ್​  ಮಾಡಿ. ಯೂಸ್​ ಆಟೊಫಿಲ್​ ವಿತ್​ ಗೂಗಲ್​ (Use Autofill with Google) ಆಫ್​ ಇದ್ದರೆ ಆನ್​ ಮಾಡಿಕೊಳ್ಳಿ. ನಂತರ ಗೂಗಲ್​ ಪಾಸ್​ವರ್ಡ್​​ ಮ್ಯಾನೇಜರ್​ (Google Password Manager) ಮೇಲೆ ಕ್ಲಿಕ್​ ಮಾಡಿ. ಇಲ್ಲಿ ನಿಮಗೆ ಯಾವ ಪಾಸ್​ವರ್ಡ್​ ಬೇಕೋ ಎಲ್ಲವೂ ಸಿಗುತ್ತದೆ. ಅಲ್ಲಿ ಸ್ಟಾರ್​ ಬಂದಿರುತ್ತದೆ. ಪಕ್ಕದಲ್ಲಿರುವ ಕಣ್ಣಿನ ಮೇಲೆ ಕ್ಲಿಕ್​ ಮಾಡಿದರೆ ಪಾಸ್​ವರ್ಡ್​ ಕಾಣಿಸುತ್ತದೆ. ಆದರೆ ಒಂದು ಮಾತು ನೆನಪಿಡಿ. ನೀವು ಮೊಬೈಲ್​ನಲ್ಲಿ ಇವೆಲ್ಲವನ್ನೂ ಒಮ್ಮೆಯಾದರೂ ಬಳಸಿರಲೇಬೇಕು. ಅಂದ್ರೆ ಜಿ-ಮೇಲ್​, ಫೇಸ್​​ಬುಕ್​, ಫೋನ್​ಪೇ... ಹೀಗೆ ಯಾವುದಾದರೂ ಆ್ಯಪ್​ಗಳ ಪಾಸ್​ವರ್ಡ್​ ನೀವು ಈ ಟ್ರಿಕ್ಸ್​ ಮೂಲಕ ಗೊತ್ತುಮಾಡಿಕೊಳ್ಳಬೇಕು ಎಂದರೆ, ನಿಮ್ಮ ಆ ಫೋನ್​ನಿಂದ ಒಮ್ಮೆಯಾದರೂ ಈ ಆ್ಯಪ್​ಗಳನ್ನು ನೀವು ಓಪನ್​ ಮಾಡಿರಬೇಕು. 
 
ಹಾಗಿದ್ದರೆ ಯಾರಿಗೆ ಬೇಕಾದ್ರೂ ಯಾವ ಪಾಸ್​ವರ್ಡ್​ ಕೂಡ ಸಿಕ್ಕಿಬಿಡತ್ತಲ್ಲ ಎನ್ನುವ ಭಯ ಬೇಡ. ಏಕೆಂದ್ರೆ ಪ್ರತಿಯೊಂದು ಪಾಸ್​ವರ್ಡ್​ ನೋಡಬೇಕಿದ್ದರೂ ನಿಮ್ಮ ಸ್ಕ್ರೀನ್​ ಪಾಸ್​ವರ್ಡ್​ ಅನ್ನು ಅದು ಕೇಳುತ್ತದೆ. ಒಂದು ವೇಳೆ ಮೊಬೈಲ್​ ಆನ್​ ಮಾಡುವ ಸಂದರ್ಭದಲ್ಲಿ ನೀವು ಯಾವುದೇ ರೀತಿಯ ಪಾಸ್​ವರ್ಡ್​ ಇಟ್ಟುಕೊಳ್ಳದಿದ್ದರೆ, ನೀವು ಈ ಟ್ರಿಕ್ಸ್ ಉಪಯೋಗಿಸಿ ಯಾವುದೇ ಪಾಸ್​ವರ್ಡ್​ ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮೊಬೈಲ್​ ಲಾಕ್​ಸ್ಕ್ರೀನ್​ ಪಾಸ್​ವರ್ಡ್​ ಕಡ್ಡಾಯವಾಗಿ ಬೇಕೇ ಬೇಕು. ಅದು ನಂಬರ್ ಮೂಲಕ ಆಗಿರ್ಬೋದು ಅಥವಾ ಪಾಟರ್ನ್​ ಮೂಲಕ ಆಗಿರಬಹುದು. ಪ್ರತಿಯೊಂದು ಪಾಸ್​ವರ್ಡ್​ ನೋಡುವಾಗಲೂ ನೀವು ಮೊದಲು ಸ್ಕ್ರೀನ್​ಲಾಕ್​ ಪಾಸ್​ವರ್ಡ್​ ಎಂಟರ್​ ಮಾಡಿಯೇ ನೋಡಬೇಕಾಗುತ್ತಿದೆ. ಎಷ್ಟು ಸಿಂಪಲ್​ ಅಲ್ವಾ?

ಮೊದ್ಲು ಬರೋದು ಮೂನಾ? ಸನ್ನಾ? ಸೀತಾರಾಮ ಪ್ರಿಯಾಳ ಉತ್ರ ಕೇಳಿ ನಾಚಿಕೊಂಡ ಶಿವಣ್ಣ, ಅನುಶ್ರೀ!

click me!