AI ಘಿಬ್ಲಿ ಇಮೇಜ್‌ನಿಂದ ಗರ್ಭಿಣಿಯರ ಫೋಟೋ ಎಡವಟ್ಟು; ಮನುಷ್ಯರೇ ಪರ್ಫೆಕ್ಟ್ ಅನ್ನೋದು ಪ್ರೂವ್ ಆಗೋಯ್ತು!

ಚಾಟ್ ಜಿಪಿಟಿಯ ಘಿಬ್ಲಿ ಇಮೇಜ್ ಟ್ರೆಂಡ್ ಸೃಷ್ಟಿಸಿದೆ. ಆದರೆ, ಗರ್ಭಿಣಿ ಫೋಟೋ ಶೂಟ್‌ನಲ್ಲಿ ಎಐ ಮಾಡಿದ ಎಡವಟ್ಟು ಮಹಿಳೆಯರಿಗೆ ಮುಜುಗರ ತಂದಿದೆ. ಕೃತಕ ಬುದ್ಧಿಮತ್ತೆ ಮಾನವನಿಗೆ ಸರಿಸಾಟಿಯಲ್ಲ ಎಂದು ಇದು ತೋರಿಸುತ್ತದೆ.

AI Ghibli image creation gone wrong this incident proves that humans are perfect sat

ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಚಾಟ್ ಜಿಪಿಟಿಯ AI ಘಿಬ್ಲಿ ಇಮೇಜ್ (Chat GPT Ghibli image Trend) ಭಾರೀ ಟ್ರೆಂಡ್ ಸೃಷ್ಟಿಸಿದೆ. ಈ ಘಿಬ್ಲಿ ಇಮೇಜ್ ಅನ್ನು ಕೇಂದ್ರ ಸರ್ಕಾರದ ಇಲಾಖೆಯಿಂದ ಪ್ರಧಾನಿ ಮೋದಿ ಫೋಟೋಗಳನ್ನು ಹಾಗೂ ಕ್ರಿಕೆಟ್‌ನ ದೇವರು ಸಚಿನ್ ತೆಂಡೂಲ್ಕರ್ ತಮ್ಮ ಫೋಟೋಗಳನ್ನು ಘಿಬ್ಲಿ ಇಮೇಜ್ ಮಾಡಿಕೊಂಡಿದ್ದಾರೆ. ಆದರೆ, ಇದೇ ಘಿಬ್ಲಿ ಇಮೇಜ್ ಮಹಿಳೆಯರ ಜೀವನದಲ್ಲಿ ಮಹಾ ಎಡವಟ್ಟು ಮಾಡಿಬಿಟ್ಟಿದೆ.

ಇತ್ತೀಚೆಗೆ ಎಲ್ಲಿ ನೋಡಿದರೂ ಎಐನದ್ದೇ ಸಂಚಲನವಾಗಿದೆ. ಉದ್ಯೋಗ ಕ್ಷೇತ್ರಗಳಿಗೂ ಎಐ ಕಾಲಿಟ್ಟು ಮಾನವರ ಕೆಲಸವನ್ನು ಕಿತ್ತುಕೊಳ್ಳುತ್ತದೆ ಎಂದು ಕೆಲವರು ಆತಂಕಪಡುತ್ತಿದ್ದಾರೆ. ಆದರೆ, ಈ ಎಐ ಮಾಡಿದ ಎಡವಟ್ಟು ನೋಡಿದರೆ ನೀವು ಎಂದಿಗೂ ಇದನ್ನು ಬಳಸುವುದೇ ಇಲ್ಲ. ಜೊತೆಗೆ, ಈ ಎಐ ನಂಬಿಕೊಂಡು ಕೆಲಸ ಮಾಡಲು ಸಾಧ್ಯವೇ ಎನ್ನುವುದು ನಿಮಗೆ ತಿಳಿಯುತ್ತದೆ. ಎಐ ಘಿಬ್ಲಿ ಇಮೇಜ್ ಮೇಲೆ ಏಕಿಷ್ಟು ಆರೋಪ ಮಾಡಲಾಗುತ್ತಿದೆ ಎಂದು ಚಿಂತಿಸಬೇಡಿ. ಇಲ್ಲಿದೆ ನೋಡಿ ಘಿಬ್ಲಿ ಇಮೇಜ್ ಸೃಷ್ಟಿ ವೇಳೆ ಆಗಿರುವ ಮಹಾ ಎಡವಟ್ಟು...

Latest Videos

ಇದನ್ನೂ ಓದಿ: ಘಿಬ್ಲಿ ಫೋಟೋಗಾಗಿ ನಿಮ್ಮ ಚಿತ್ರವನ್ನು ChatGPT ಕೈಗೆ ನೀಡೋದು ಎಷ್ಟು ಡೇಂಜರ್‌ ಗೊತ್ತಾ? ಇಲ್ಲಿದೆ ಡೀಟೇಲ್ಸ್‌..

ಒಬ್ಬ ಭಾರತೀಯ ಮಹಿಳೆ ತನ್ನ ಬೇಬಿ ಬಂಪ್ (ಗರ್ಭಿಣಿ) ಫೋಟೋ ಶೂಟ್ ಮಾಡಿಸುತ್ತಿದ್ದಾಳೆ. ಅವರೊಂದಿಗೆ ನಾಲ್ವರು ಸ್ನೇಹಿತರು ಅಥವಾ ಕುಟುಂಬದ ಯುವತಿಯರು ಕೂಡ ನಿಂತುಕೊಂಡಿದ್ದಾರೆ. ಮಹಿಳೆ ಹೊಟ್ಟೆಯ ಮೇಲೆ ಹೃದಯಾಕಾರದಲ್ಲಿ ಕೈ ಹಿಡಿದು ಫೋಟೋ ಪೋಸ್ ಕೊಟ್ಟರೆ, ಉಳಿದವರು ಆಕೆಯ ಕೈ ಕಡೆಗೆ ತಮ್ಮ ಒಂದೊಂದು ಕೈ ತೋರಿಸಿ ಹಿಡಿದುಕೊಂಡಿದ್ದಾರೆ.  ಇಲ್ಲಿ ಒಬ್ಬ ಮಹಿಳೆ ಮಾತ್ರ ಗರ್ಭಿಣಿಯಾಗಿದ್ದು, ಉಳಿದವರಿಗೆ ಕನಿಷ್ಠ ಮದುವೆಯೂ ಆಗಿಲ್ಲ. ಈ ಫೋಟೋವನ್ನು ಘಿಬ್ಲಿ ಇಮೇಜ್ ಮಾಡುವುಯದಕ್ಕೆ ಎಐಗೆ ಕೊಡಲಾಗಿದೆ. ಆದರೆ, ಈ ಎಐ ಘಿಬ್ಲಿ ಇಮೇಜ್ ಮಾಡುವಾಗ ಮಧ್ಯದಲ್ಲಿ ನಿಂತ ಮಹಿಳೆ ಸೇರಿ ಎಲ್ಲ ಐವರನ್ನೂ ಗರ್ಭಿಣಿ ಮಾಡಿದೆ. ಎಲ್ಲರೂ ತಮ್ಮ ತಮ್ಮ ಗರ್ಭಿಣಿ ಅಕಾರದ ಹೊಟ್ಟೆಯ ಮೇಲೆ ಕೈ ಇಟ್ಟುಕೊಂಡು ಪೋಸ್ ಕೊಡುವ ರೀತಿ ಚಿತ್ರವನ್ನು ಕೊಟ್ಟಿದೆ.

 
 
 
 
 
 
 
 
 
 
 
 
 
 
 

A post shared by Sandhya🧿 (@saisandhya_1)

ಮಾನವ ಕೆಲಸವೇ ಪರ್ಫೆಕ್ಟ್:
ಅನೇಕ ಬಾರಿ ಕೆಲಸ ಮಾಡುವ ಮಾನವನೇ ತಪ್ಪು ಮಾಡುತ್ತಾನೆ. ಆದರೆ, ತಪ್ಪು ಎಂದು ತಿಳಿದ ನಂತರ ಕೂಡಲೇ ತಿದ್ದಿಕೊಂಡು ಸರಿಯಾಗಿ ಕೆಲಸ ಮಾಡುತ್ತಾನೆ. ಆದರೆ, ಮಾನವ ನಿರ್ಮಿತ ಈ ಕೃತಕ ಬುದ್ಧಿಮತ್ತೆ (ಎಐ) ತನಗೆ ಸೂಚಿಸಿದಷ್ಟೇ ಕೆಲಸ ಮಾಡುತ್ತದೆ. ಹೆಚ್ಚುವರಿ ಬುದ್ಧಿ ಉಪಯೋಗಿಸಿ ಕೆಲಸ ಮಾಡುವುದಕ್ಕೆ ಬರುವುದಿಲ್ಲ. ಆದ್ದರಿಂದ, ಕೃತಕ ಬುದ್ಧಿಮತ್ತೆ ಮಾನವರ ಬುದ್ಧಿಗೆ ಎಂದಿಗೂ ಸಮನಾಗಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡ್ ಸೃಷ್ಟಿಸಿರುವ ಈ ಘಿಬ್ಲಿ ಇಮೇಜ್‌ನ ಮೊದಲ ಯಡವಟ್ಟು ಇದಾಗಿದ್ದು, ಇಂತಹ ಅನೇಕ ಎಡವಟ್ಟುಗಳು ಮುಂದೆ ಸಂಭವಿಸುತ್ತಲೇ ಹೋಗುತ್ತದೆ.

ಇದನ್ನೂ ಓದಿ: ಈಗ ಟ್ರೆಂಡ್‌ನಲ್ಲಿರೋ ಘಿಬ್ಲಿ ಶೈಲಿಯ AI ಫೋಟೋ ಕ್ರಿಯೇಟ್‌ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ..

vuukle one pixel image
click me!