ಇನ್ಮುಂದೆ ಡಾಕ್ಟರ್ ನಿಮ್ಮ ಫೋನ್ ಇಲ್ಲ ವಾಚ್ ನಲ್ಲೇ ಲಭ್ಯವಾಗಲಿದ್ದಾರೆ. ನಿಮ್ಮ ಆರೋಗ್ಯ ಹದಗೆಡುತ್ತಿದ್ದಂತೆ ನಿಮಗೆ ಮಾಹಿತಿ ನೀಡಲಿದ್ದಾರೆ. ಆಪಲ್ ಈ ಬಗ್ಗೆ ಕೆಲಸ ಮಾಡ್ತಿದೆ.
ಸೋಶಿಯಲ್ ಮೀಡಿಯಾ (social media ) ದಲ್ಲಿ ಎಐ ಗಿಬ್ಲಿ (AI Ghibli) ಹವಾ ಸಂಚಲನ ಸೃಷ್ಟಿಸಿದೆ. ಪ್ರತಿಯೊಬ್ಬರೂ ತಮ್ಮ ಫೋಟೋಗಳನ್ನು ಗಿಬ್ಲಿಗೆ ಬದಲಿಸಿಕೊಳ್ತಿದ್ದಾರೆ. ಇನ್ನೊಂದು ಕಡೆ ಜಗತ್ತನ್ನು ನಿಧಾನವಾಗಿ ಎಐ ಆವರಿಸಿದೆ. ಎಐ ಮೂಲಕ ಜನರು ತಮ್ಮೆಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗ್ತಿದ್ದಾರೆ. ಕೆಲಸದಿಂದ ಹಿಡಿದು ಪ್ರೀತಿಯವರೆಗೆ ಎಲ್ಲದರ ಹುಡುಕಾಟ ಎಐ ಮೂಲಕ ನಡೆಯುತ್ತಿದೆ. ಎಐ ಸಹಾಯದಿಂದ ಜನರು ತಮ್ಮ ಆರೋಗ್ಯದ ಬಗ್ಗೆಯೂ ಮಾಹಿತಿ ಪಡೆಯುತ್ತಿದ್ದಾರೆ.
ಆಪಲ್ (Apple) ಕೂಡ ನಿಧಾನವಾಗಿ ತನ್ನ ವ್ಯವಸ್ಥೆಯಲ್ಲಿ ಎಐ ಸೇರಿಸಿಕೊಳ್ತಿದೆ. ಆಪಲ್ ತನ್ನ ಸೇವೆಯಲ್ಲಿ ಎಐ ಡಾಕ್ಟರ್ ಸೇವೆ ಸೇರಿಸುವ ಸಾಧ್ಯತೆ ಇದೆ. ಐಫೋನ್, ಆಪಲ್ ವಾಚ್ ಹಾಗೂ ಏರ್ ಪಾಡ್‌ಗಳಲ್ಲಿ ಈಗಾಗ್ಲೇ ಲೈಫ್ ಸೇವಿಂಗ್ ಫೀಚರ್ ಇದೆ. ಕೆಲ ದಿನಗಳ ಹಿಂದೆ ಆಪಲ್ ಫೋನ್ ಒಬ್ಬರ ಜೀವ ಉಳಿಸಿತ್ತು. ಹೃದಯ ಬಡಿತದಲ್ಲಿನ ಏರಿಳಿತ ಗಮನಿಸಿದ ವ್ಯಕ್ತಿ ತಕ್ಷಣ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದ. ಆಪಲ್ ಐಫೋನ್, ವಾಚ್ ಗಳು, ಹೃದಯ ಬಡಿತ ಮೇಲ್ವಿಚಾರಣೆ, SPo2 ಬಗ್ಗೆ ಮಾಹಿತಿ ನೀಡುವ ಸಂವೇದಕ, ECG ಮುಂತಾದ ವೈಶಿಷ್ಟ್ಯಗಳನ್ನು ಕಂಪನಿ ನೀಡಿದೆ.
ಅಮೆಜಾನ್‌ನಲ್ಲಿ ಅರ್ಧಬೆಲೆಗೆ ಸಿಗುತ್ತಿದೆ ಗೇಮಿಂಗ್‌ಗೆ ಹೇಳಿ ಮಾಡಿಸಿದಂಥ Realme GT 6T ಸ್ಮಾರ್ಟ್‌ಫೋನ್!
ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ನೀಡಿರುವ ಮಾಹಿತಿ ಪ್ರಕಾರ, ಆರೋಗ್ಯ ಸುರಕ್ಷತೆಗೆ ಸಂಬಂಧಿಸಿದಂತೆ ಮಹತ್ವದ ಕೆಲಸ ಮಾಡ್ತಿದೆ. ಐಫೋನ್ ಮತ್ತು ಹೆಲ್ತ್ ಅಪ್ಲಿಕೇಶನ್ ಒಳಗೆ ಹೆಲ್ತ್ ಕೋಚ್ ಇಂಟಿಗ್ರೇಷನ್ ವೈಶಿಷ್ಟ್ಯ ನೀಡುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಈ ವೈಶಿಷ್ಟ್ಯವು ಒಂದು ರೀತಿಯ ವರ್ಚುವಲ್ ಡಾಕ್ಟರ್ ರೀತಿಯಲ್ಲಿ ಇರಲಿದೆ. ಅಂದರೆ ಅವರು ಎಐ ವೈದ್ಯರಾಗುತ್ತಾರೆ. ಇದು ಬಳಕೆದಾರರಿಗೆ ತುಂಬಾ ಉಪಯುಕ್ತವೆಂದು ಸಾಬೀತುಪಡಿಸಬಹುದು. ಈ ಕುರಿತು ಪ್ರಸ್ತುತ ತರಬೇತಿ ನಡೆಯುತ್ತಿದ್ದು, ವೈದ್ಯಕೀಯ ವೃತ್ತಿಪರರು ತರಬೇತಿ ನೀಡಲಿದ್ದಾರೆ.
ಆಪಲ್ ನಲ್ಲಿ ಮೊದಲೇ ಇದೆ ಈ ಫೀಚರ್ : ಆಪಲ್ ತನ್ನ ಉತ್ಪನ್ನಗಳಲ್ಲಿ ಸಾಕಷ್ಟು ಬದಲಾವಣೆ ಮಾಡ್ತಾ ಬಂದಿದೆ. ಕಳೆದ ಕೆಲವು ವರ್ಷಗಳಲ್ಲಿ, ಆಪಲ್ ವಾಚ್ ಮತ್ತು ಏರ್‌ಪಾಡ್‌ಗಳು ಸೇರಿದಂತೆ ತನ್ನ ಹಲವು ಉತ್ಪನ್ನಗಳಲ್ಲಿ ಹೊಸ ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನು ಸೇರಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಕಂಪನಿ, ದೀರ್ಘಾವಧಿಯ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡ್ತಿದೆ. ಡೇಟಾ ಸಂಗ್ರಹಕ್ಕಿಂತ ಇದು ಭಿನ್ನವಾಗಿರಲಿದೆ. ಬಳಕೆದಾರರು ಎಐ ಸಹಾಯದಿಂದ ತಮ್ಮ ಆರೋಗ್ಯದ ಬಗ್ಗೆ ಸಲಹೆಯನ್ನು ಪಡೆಯಬಹುದು. ಆಪಲ್ ಹೆಲ್ತ್ ಅಪ್ಲಿಕೇಶನ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ನೀಡುವ ಕೆಲಸ ಪ್ರಾರಂಭವಾಗಿದೆ. ಈ ಹೊಸ ವೈಶಿಷ್ಟ್ಯವು iOS 19 ಏಕೀಕರಣದೊಂದಿಗೆ ಬರುತ್ತದೆ. ಎಐ ಹೆಲ್ತ್ ಕೋಚ್ ವೈಶಿಷ್ಟ್ಯದ ಕೆಲಸ ಆರೋಗ್ಯ ಡೇಟಾವನ್ನು ವಿಶ್ಲೇಷಿಸುವುದು.
ಈ ವರ್ಷ 15ಕ್ಕೂ ಅಧಿಕ ಪ್ರಾಡಕ್ಟ್ ರಿಲೀಸ್ ಮಾಡಲಿದೆ ಆ್ಯಪಲ್, ಬರಲಿರೋ ಹೊಸ ಐಫೋನ್
ಸದ್ಯ ಆಪಲ್, ಎಐ ಹೆಲ್ತ್ ಕೋಚ್ ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ವಿವರವಾದ ಮಾಹಿತಿ ನೀಡುವ ಸಾಧ್ಯತೆ ಇದೆ. ಈ ವೈಶಿಷ್ಟ್ಯವು ಐಫೋನ್, ಆಪಲ್ ವಾಚ್ ಮತ್ತು ಇತರ ಪರಿಕರಗಳಿಂದ ಬರುವ ಡೇಟಾವನ್ನು ವಿಶ್ಲೇಷಿಸುತ್ತದೆ ಮತ್ತು ನಂತರ ಬಳಕೆದಾರರಿಗೆ ವರದಿಯನ್ನು ನೀಡುತ್ತದೆ. ಇದ್ರ ಮೂಲಕ ಬಳಕೆದಾರರು ತಮ್ಮ ಆರೋಗ್ಯವನ್ನು ನಿಯಮಿತವಾಗಿ ಪರಿಶೀಲನೆ ನಡೆಸಬಹುದು. ಜೊತೆಗೆ ಸೂಕ್ತ ಸಮಯದಲ್ಲಿ ಸೂಕ್ತ ವೈದ್ಯಕೀಯ ಸಹಾಯವನ್ನು ಪಡೆಯುವ ಮೂಲಕ ಪ್ರಾಣಾಪಾಯದಿಂದ ಬಚಾವ್ ಆಗಬಹುದು.