Realme GT 6T ಮೇಲೆ ಅಮೆಜಾನ್ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಇದರ ಮೂಲ ಬೆಲೆಗಿಂತಲೂ ಕಡಿಮೆ ಬೆಲೆಗೆ ಸಿಗುತ್ತಿದೆ. ಬ್ಯಾಂಕ್ ಆಫರ್ ಮತ್ತು ಎಕ್ಸ್‌ಚೇಂಜ್ ಆಯ್ಕೆಗಳೊಂದಿಗೆ, ಫೋನ್ ಅನ್ನು ಕಡಿಮೆ ಬೆಲೆಗೆ ಪಡೆಯಬಹುದು.
ಅಮೆಜಾನ್ ಹೈ ಎಂಡ್ ಮೊಬೈಲ್‌ನಿಂದ ಹಿಡಿದು ಕಡಿಮೆ ಬೆಲೆಯ ಮೊಬೈಲ್‌ಗಳವರೆಗೂ ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ನೀವು ಒಳ್ಳೆಯ ಆಪ್ಸ್ ಮತ್ತು ಮಲ್ಟಿಟಾಸ್ಕಿಂಗ್ ಮಾಡುವಂತಹ ಫೋನ್ ಹುಡುಕುತ್ತಿದ್ದರೆ ಇದು ಬೆಸ್ಟ್ ಟೈಮ್. ಕಳೆದ ಮೇ ತಿಂಗಳಲ್ಲಿ ಅಮೆಜಾನ್ Realme GT 6T ಬಿಡುಗಡೆ ಮಾಡಿತ್ತು. ಇದು ಗೇಮಿಂಗ್‌ಗೆ ಹೇಳಿ ಮಾಡಿಸಿದ ಫೋನ್. ಅಮೆಜಾನ್‌ನಲ್ಲಿ ಇದರ ಮೂಲ ಬೆಲೆಗಿಂತಲೂ ಬಹಳ ಕಡಿಮೆ ಬೆಲೆಗೆ ಲಭ್ಯವಿದೆ.
Realme GT 6T ಪ್ಲಾಸ್ಟಿಕ್ ಫ್ರೇಮ್ ಹೊಂದಿದ್ದರೂ, ಇದು ಗ್ಲಾಸ್‌ನ ಲುಕ್ ನೀಡುತ್ತದೆ. Realme GT 6T ಮೇಲೆ ಲಭ್ಯವಿರುವ ಆಫರ್‌ಗಳ ಬಗ್ಗೆ ತಿಳಿಯೋಣ.
Realme GT 6T: ಆಫರ್ ಡೀಟೇಲ್ಸ್: Realme GT 6T ಬಿಡುಗಡೆಯಾದಾಗ ಇದರ ಬೆಲೆ 32,999 ರೂ ಇತ್ತು. ಆದರೆ, ಅಮೆಜಾನ್ 19% ಡಿಸ್ಕೌಂಟ್ ನೀಡುತ್ತಿದ್ದು, ಇದರ ಬೆಲೆ 28,998 ರೂ ಆಗಿದೆ. ಈ ಆಫರ್ 256GB ಸ್ಟೋರೇಜ್ ಮತ್ತು 8GB RAM ಹೊಂದಿರುವ ಮೊಬೈಲ್‌ಗೆ ಮಾತ್ರ ಅನ್ವಯಿಸುತ್ತದೆ. ಇದರ ಜೊತೆಗೆ ಬ್ಯಾಂಕ್ ಆಫರ್ ಕೂಡ ಇದೆ. ಎಲ್ಲಾ ಗ್ರಾಹಕರಿಗೆ 5,000 ರೂ ಕೂಪನ್ ಡಿಸ್ಕೌಂಟ್ ಮತ್ತು 1,500 ರೂ ಕ್ರೆಡಿಟ್ ಕಾರ್ಡ್ ಲಿಮಿಟ್ ಇದೆ. ಎಲ್ಲಾ ರಿಯಾಯಿತಿಗಳನ್ನು ಅನ್ವಯಿಸಿದರೆ, ಈ ಫೋನ್ ಅನ್ನು ಸುಮಾರು 22,498 ರೂಗಳಿಗೆ ಪಡೆಯಬಹುದು.
ಇದರ ಜೊತೆಗೆ, ಅಮೆಜಾನ್ ಹಳೆಯ ಮೊಬೈಲ್ ಎಕ್ಸ್‌ಚೇಂಜ್ ಮಾಡುವ ಅವಕಾಶವನ್ನು ನೀಡುತ್ತಿದೆ. ಅದರ ಮೂಲಕ 27,350 ರೂ ವರೆಗೆ ಉಳಿತಾಯ ಮಾಡಬಹುದು. ನಿಮ್ಮ ಹಳೆಯ ಫೋನ್‌ಗೆ 15,000 ರೂ ಸಿಕ್ಕರೆ, Realme GT 6T ಅನ್ನು ನೀವು 12,350 ರೂಗಳಿಗೆ ಪಡೆಯಬಹುದು. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಸ್ಥಿತಿಯನ್ನು ಅವಲಂಬಿಸಿ ನಿಖರವಾದ ಬೆಲೆ ನಿರ್ಧಾರವಾಗುತ್ತದೆ.
Realme GT 6T: ಫೀಚರ್ಸ್ ಮತ್ತು ಸ್ಪೆಸಿಫಿಕೇಷನ್ಸ್
Realme GT 6T ಪ್ಲಾಸ್ಟಿಕ್ ಫ್ರೇಮ್ ಮತ್ತು ಹಿಂಭಾಗದ ಪ್ಯಾನೆಲ್ ಅನ್ನು ಹೊಂದಿದ್ದರೂ, ಇದು ಹೈ ಎಂಡ್ ಲುಕ್ ನೀಡುತ್ತದೆ. IP65 ಪ್ರಮಾಣೀಕರಣವನ್ನು ಹೊಂದಿದ್ದು, ಇದು ನೀರು ಮತ್ತು ಧೂಳಿನಿಂದ ರಕ್ಷಿಸುತ್ತದೆ. ಈ ಸ್ಮಾರ್ಟ್‌ಫೋನ್‌ನ 6.78-ಇಂಚಿನ AMOLED ಪರದೆಯು 6000 ನಿಟ್ಸ್ ಗರಿಷ್ಠ ಬ್ರೈಟ್ನೆಸ್, 120 Hz ರಿಫ್ರೆಶ್ ರೇಟ್ ಮತ್ತು HDR ಅನ್ನು ಬೆಂಬಲಿಸುತ್ತದೆ. ಡ್ಯುರಾಬಿಲಿಟಿಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು ಒಳಗೊಂಡಿದೆ.
15,000 ರೂ.ಗಿಂತ ಕಡಿಮೆ ಬೆಲೆಯ ಟಾಪ್ 7 ಸೂಪರ್ 5G ಫೋನ್‌ಗಳು!
ಇದು 12GB RAM ಮತ್ತು 512GB ಸ್ಟೋರೇಜ್ ಅನ್ನು ಹೊಂದಿದೆ. Snapdragon 7+ Gen 3 CPU ಸಹಾಯದಿಂದ, ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. 32-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗೆ ಹೇಳಿ ಮಾಡಿಸಿದಂತಿದೆ. ಡ್ಯುಯಲ್-ಕ್ಯಾಮೆರಾ ಸೆಟಪ್ 50 ಮತ್ತು 8-ಮೆಗಾಪಿಕ್ಸೆಲ್ ಸೆನ್ಸಾರ್‌ಗಳನ್ನು ಒಳಗೊಂಡಿದೆ. Realme GT 6T ನಲ್ಲಿ 5500mAh ಬ್ಯಾಟರಿ ಇದ್ದು, 120W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಮಾರ್ಚ್ 11ಕ್ಕೆ ಬರ್ತಿದೆ iQOO Neo 10R! ಏನೇನು ಫೀಚರ್ಸ್, ಬೆಲೆ ಎಷ್ಟು ಅಂತಾ ನೋಡಿ..