9999 ರೂಪಾಯಿಗೆ ಸಿಗ್ತಿವೆ 4 ಸ್ಮಾರ್ಟ್‌ಫೋನ್; ಸೇಲ್‌ ಮುಗಿಯುವ ಮುನ್ನವೇ ಖರೀದಿಸಿ

By Mahmad Rafik  |  First Published Nov 11, 2024, 3:29 PM IST

ಫ್ಲಿಪ್‌ಕಾರ್ಟ್‌ನ ಬಿಗ್ ಬಚತ್ ಡೇಸ್ ಸೇಲ್‌ನಲ್ಲಿ ₹9,999ಗೆ ನಾಲ್ಕು 5G ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಸೇಲ್ ಮುಕ್ತಾಯದ ದಿನಾಂಕ ಸಮೀಪಿಸುತ್ತಿದ್ದು, ಖರೀದಿಸುವ ಪ್ಲಾನ್ ಇದ್ರೆ ಈ ಸುದ್ದಿ ನಿಮಗೆ ಸಹಾಯಕವಾಗಲಿದೆ.


ನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರಂ Flipkartನಲ್ಲಿ ಶುರುವಾಗಿರುವ Big Bachat Days Sale ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ನೀವು 10 ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಸ್ಮಾರ್ಟ್‌ಫೋನ್ ಖರೀದಿಗೆ ಪ್ಲಾನ್ ಮಾಡಿಕೊಂಡಿದ್ದರೆ, ನಿಮಗಾಗಿ 9,999 ರೂಪಾಯಿಯಲ್ಲಿ ಲಭ್ಯವಿರುವ ನಾಲ್ಕು 5ಜಿ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಈ ಲೇಖನದಲ್ಲಿದೆ. ಸ್ಮಾರ್ಟ್‌ಫೋನ್ ಖರೀದಿಗಾಗಿ 10 ಸಾವಿರ ರೂಪಾಯಿ ಬಜೆಟ್ ಮೀಸಲಿಟ್ಟುಕೊಂಡಿದ್ರೆ ಈ ಲೇಖನ ನಿಮಗೆ ಉಪಯುಕ್ತವಾಗಲಿದೆ.

Vivo T3 Lite 5G
ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ Vivo T3 Lite 5G ಸ್ಮಾರ್ಟ್‌ಫೋನ್ 9,999 ರೂ.ಗೆ ಲಭ್ಯವಿದೆ. 4-128GB ವೇರಿಯಂಟ್‌ನಲ್ಲಿ ಸ್ಮಾರ್ಟ್‌ಫೋನ್ ಸಿಗಲಿದ್ದು, 6.56 ಇಂಚು ಡಿಸ್‌ಪ್ಲೇ, ಪ್ರೈಮರಿ ಕ್ಯಾಮೆರಾ 50 ಮೆಗಾಪಿಕ್ಸೆಲ್, 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. 

Tap to resize

Latest Videos

undefined

Samsung Galaxy A14 5G
ಸ್ಯಾಮ್‌ಸಂಗ್ ಕಂಪನಿಯ Galaxy A14 5G ಸ್ಮಾರ್ಟ್‌ಫೋನ್ ಪ್ರೈಮರಿ ಕ್ಯಾಮೆರಾ 50MP + 2MP ಫ್ರಂಟ್ ಕ್ಯಾಮೆರಾ 8 ಮೆಗಾಪಿಕ್ಸೆಲ್ ಹೊಂದಿದೆ. 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ Mediatek Helio G85 ಪ್ರೊಸೆಸರ್ ಒಳಗೊಂಡಿದೆ. Samsung Galaxy A14 5G ಸ್ಮಾರ್ಟ್‌ಫೋನ್ ಮೂಲಬೆಲೆ 11,499 ರೂ.ಗಳಾಗಿದ್ದು, ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 9,999 ರೂ.ಗೆ ಸಿಗಲಿದೆ. ಶೇ.13ರಷ್ಟು ರಿಯಾಯ್ತಿ ಗ್ರಾಹಕರಿಗೆ ಸಿಗಲಿದೆ.

ಇದನ್ನೂ ಓದಿ: 50 MP ಕ್ಯಾಮೆರಾ, 5000 mAh ಬ್ಯಾಟರಿಯುಳ್ಳ 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 5 ಸಾವಿರ ರೂಪಾಯಿ ಇಳಿಕೆ

Infinix note 40X 5G (12/256GB)
ಇದೇ ಸೇಲ್‌ನಲ್ಲಿ Infinix note 40X 5G ಸ್ಮಾರ್ಟ್‌ಫೋನ್‌ 9,999 ರೂಪಾಯಿಗೆ ಸಿಗುತ್ತಿವೆ. 7.8mm ಸ್ಲಿಮ್, 48 ಮೆಗಾಪಿಕ್ಸೆಲ್ ಕ್ಯಾಮೆರಾ, 8GB Ram ಮತ್ತು 128GB ಇಂಟರಲ್‌ ಸ್ಟೋರೇಜ್ ಒಳಗೊಂಡಿದೆ. 108 ಮೆಗಾಪಿಕ್ಸಲ್ ರಿಯಲ್ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

Samsung Galaxy A06
ಸ್ಯಾಮ್‌ಸಂಗ್‌ನ ಮತ್ತೊಂದು ಸ್ಮಾರ್ಟ್‌ಫೋನ್ ಸಹ 9,999 ರೂಪಾಯಿಯಲ್ಲಿ ಸಿಗಲಿದೆ. ಫ್ಲಿಪ್‌ಕಾರ್ಟ್ ಬಿಗ್ ಬಚತ್ ಡೇ ಸೇಲ್‌ನಲ್ಲಿ ಇಎಂಐ ರೂಪದಲ್ಲಿಯೂ ಖರೀದಿಸಬಹುದು. 4 GB RAM ಮತ್ತು 64GB ಇಂಟರ್‌ನಲ್ ಸ್ಟೋರೇಜ್ ಹೊಂದಿದೆ. 50MP + 2MP ಪ್ರೈಮರಿ ಕ್ಯಾಮೆರಾ, 8MP ಸೆಲ್ಫಿ ಕ್ಯಾಮೆರಾ ಹೊಂದಿದ್ದು,  5000 mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಇದನ್ನೂ ಓದಿ: 300MP ಫ್ಲೈಯಿಂಗ್ ಕ್ಯಾಮೆರಾ ಜೊತೆ 7200mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್ ಮೇಲೆ ₹5000ಕ್ಕಿಂತಲೂ ಹೆಚ್ಚು ಡಿಸ್ಕೌಂಟ್ 

click me!