300MP ಫ್ಲೈಯಿಂಗ್ ಕ್ಯಾಮೆರಾ ಜೊತೆ 7200mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್ ಮೇಲೆ ₹5000ಕ್ಕಿಂತಲೂ ಹೆಚ್ಚು ಡಿಸ್ಕೌಂಟ್ 

By Mahmad Rafik  |  First Published Nov 10, 2024, 3:00 PM IST

300MP ಫ್ಲೈಯಿಂಗ್ ಕ್ಯಾಮೆರಾ, 7200mAh ಬ್ಯಾಟರಿ ಮತ್ತು 5G ಸಂಪರ್ಕದೊಂದಿಗೆ ಹೊಸ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ. ₹5000 ಡಿಸ್ಕೌಂಟ್‌ನೊಂದಿಗೆ ಈ ಫೋನ್ ಲಭ್ಯವಾಗಲಿದೆ.


ಇಂದಿನ ದಿನಗಳಲ್ಲಿ ಟೆಕ್ನಾಲಾಜಿ ಮತ್ತು ಇನ್ವೋಷನ್‌ಗೆ ಯಾವುದೇ ಕಡಿಮೆ ಇಲ್ಲ. ದಿನದಿಂದ ದಿನಕ್ಕೆ ಹೊಸ ತಂತ್ರಜ್ಞಾನ ಮಾರುಕಟ್ಟೆ ಬರುತ್ತಿರುತ್ತದೆ. ಸ್ಮಾರ್ಟ್‌ಫೋನ್‌ ವಿಷಯದಲ್ಲಿಯೂ ಹೊಸ ಹೊಸ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುತ್ತವೆ. ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್ ಅತ್ಯಂತ ಹಳೆಯ ಕಂಪನಿಯಾಗಿದ್ದು, ತನ್ನದೇ ಆದ ಗ್ರಾಹಕರನ್ನು ಹೊಂದಿದೆ. ಯಾವುದೇ ಹೊಸ ಕಂಪನಿ ಮಾರುಕಟ್ಟೆಗೆ ಬಂದರೂ ಸ್ಯಾಮ್‌ಸಂಗ್‌ ತನ್ನ ಗ್ರಾಹಕರನ್ನು ಹಾಗೆಯೇ ಉಳಿಸಿಕೊಂಡಿದೆ. ಇದೀಗ ಫ್ಲೈಯಿಂಗ್ ಕ್ಯಾಮೆರಾ ಜೊತೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲಿದೆ. ಫ್ಲೈಯಿಂಗ್ ಸ್ಯಾಮ್‌ಸಂಗ್ 5G ಸ್ಪಾರ್ಟ್‌ಫೋನ್ ಬ್ಯಾಟರಿ 7200mAh  ಸಾಮರ್ಥ್ಯವನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದ್ರೆ 2 ದಿನ ಬರುತ್ತೆ ಎಂದು ಹೇಳಲಾಗಿದೆ. ಇದರ ಡ್ರೋನ್ ಕ್ಯಾಮೆರಾ ಹೆಚ್‌ಡಿ ಕ್ವಾಲಿಟಿಯನ್ನು ವಿಡಿಯೋ ರೆಕಾರ್ಡ್ ಮಾಡುತ್ತದೆ. 

ಕ್ಯಾಮೆರಾ: ಪ್ರೈಮರಿ ಕ್ಯಾಮೆರಾ 300 ಮೆಗಾಪಿಕ್ಸೆಲ್, ಸೆಕೆಂಡರಿ ಕ್ಯಾಮೆರಾ 64 ಮೆಗಾಪಿಕ್ಸೆಲ್ ಮತ್ತು, 8 ಮೆಗಾಪಿಕ್ಸೆಲ್ ಪೋಟ್ರೇಟ್ ಕ್ಯಾಮೆರಾ ಇರಲಿದೆ. ಇದರ ಜೊತೆಯಲ್ಲಿ ವಿಡಿಯೋ ಕಾಲ್ ಮತ್ತು ಸೆಲ್ಫಿಗಾಗಿ ಡಿವೈಸ್‌ನಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ. 
ಇಷ್ಟು ಮಾತ್ರವಲ್ಲದೇ 4K 60fps ವರೆಗೆ ವಿಡಿಯೋ ರೆಕಾರ್ಡ್ ಮಾಡಬಹುದು.

Tap to resize

Latest Videos

undefined

ಬ್ಯಾಟರಿ: ಫ್ಲೈಯಿಂಗ್ ಕ್ಯಾಮೆರಾ ಫೋನ್‌ಗೆ ಪವರ್ ನೀಡಲು 7200mAh ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. 230 ವ್ಯಾಟ್ ಸೂಪರ್ ಫಾಸ್ಟ್ ಚಾರ್ಜ್ ಲಭ್ಯವಿದೆ. 15 W ವೈರ್‌ಲೆಸ್ ಚಾರ್ಜಿಂಗ್ ಇರಲಿದೆ ಎಂದು ವರದಿಯಾಗಿದೆ. ಒಮ್ಮೆ ಚಾರ್ಜ್  ಮಾಡಿದ್ರೆ ಕನಿಷ್ಠ 30 ಗಂಟೆ, ಗರಿಷ್ಠ 48 ಗಂಟೆವರೆಗೆ ಚಾರ್ಜ್ ಬರುತ್ತದೆ. 

ಇದನ್ನೂ ಓದಿ:50 MP ಕ್ಯಾಮೆರಾ, 5000 mAh ಬ್ಯಾಟರಿಯುಳ್ಳ 5G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ 5 ಸಾವಿರ ರೂಪಾಯಿ ಇಳಿಕೆ

ರ‍್ಯಾಮ್ ಮತ್ತು ಸ್ಟೋರೇಜ್: ಈ ಸ್ಮಾರ್ಟ್‌ಫೋನ್‌ನಲ್ಲಿ ವೇರಿಯಂಟ್ ಸ್ಟೋರೇಜ್ ಲಭ್ಯವಿದೆ. 6GB RAM ಜೊತೆಗೆ 128GB ಇಂಟರ್‌ನಲ್ ಸ್ಟೋರೇಜ್, 8GB/12GB RAM ಜೊತೆಗೆ 128GB/256GB ಇಂಟರ್‌ನಲ್ ಸ್ಟೋರೇಜ್ ಗ್ರಾಹಕರಿಗೆ ಸಿಗಲಿದೆ. Exynos 2200 ಪ್ರೊಸೆಸರ್/Snapdragon 8 Gen 3 ಪ್ರೊಸೆಸರ್ ನೀಡಲಾಗಿದೆ. ಬಾಹ್ಯವಾಗಿ 12GB ವರೆಗೆ ಮೆಮೊರಿ ಕಾರ್ಡ್ ಸೇರಿಸಬಹುದು. 

ಡಿಸ್‌ಪ್ಲೇ: 7 ಪ್ರೊಟೆಕ್ಷನ್‌ವುಳ್ಳ ಗೊರಿಲ್ಲಾ ಗ್ಲಾಸ್ ಮತ್ತು IP68 ರೇಟಿಂಗ್‌ನೊಂದಿಗೆ ಬರುತ್ತದೆ. 6.9-ಇಂಚಿನ AMOLED ಡಿಸ್‌ಪ್ಲೇ ಹೊಂದಿದ್ದು, ಹೆಚ್‌ಡಿ ಕ್ವಾಲಿಟಿ ವಿಡಿಯೋ ವೀಕ್ಷಿಸಬಹುದು. 120Hz ರಿಫ್ರೆಶ್ ರೇಟ್‌ನಿಂದಾಗ ಸ್ಮಾರ್ಟ್‌ಫೋನ್ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಕೇವಲ 180 ಗ್ರಾಂ ತೂಕ ಇರಲಿದೆ. 

ಬೆಲೆ: ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ 28,000 ರೂ.ಗೆ ಲಭ್ಯವಿದೆ. ಇದರ ಬೇಸ್ ಮಾಡೆಲ್ ಬೆಲೆ 22,000 ರೂ. ಆಗಿದೆ. ಕೆಲ ಆನ್‌ಲೈನ್ ಸೇಲ್ ಪ್ಲಾಟ್‌ಫಾರಂಗಳು ಸ್ಮಾರ್ಟ್‌ಫೋನ್ ಮೇಲೆ 5,000 ರೂ.ವರೆಗೆ ಡಿಸ್ಕೌಂಟ್ ನೀಡುವ ಸಾಧ್ಯತೆಗಳಿವೆ. ಇದರ ಜೊತೆಗೆ ಗ್ರಾಹಕರು ಸೂಚಿಸಿದ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ ಹೆಚ್ಚುವರಿ ಆಫರ್‌ ನಿಮ್ಮದಾಗುತ್ತದೆ. ಅಂತಿಮವಾಗಿ 15,000 ರೂ. ದರದಲ್ಲಿ ಈ ಸ್ಮಾರ್ಟ್‌ಫೋನ್‌ ನಿಮ್ಮದಾಗಿಸಿಕೊಳ್ಳಬಹುದು.

ಇದನ್ನೂ ಓದಿ: 15 ಸಾವಿರಗಿಂತಲೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್; 5000 ರೂಪಾಯಿಗೂ ಅಧಿಕ ಡಿಸ್ಕೌಂಟ್

click me!