ಪಕ್ಷೇತರ ಅಭ್ಯರ್ಥಿ ಜೊತೆ ತಿರುಗಾಡ್ತಿರುವ ಡ್ರೋಣ್ ಪ್ರತಾಪ್‌.... ರಾಜಕೀಯಕ್ಕೆ ಬರ್ತಾರಾ?

By Anusha Kb  |  First Published Feb 10, 2023, 3:20 PM IST

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಟ್ರೋಲ್‌ಗೆ ಗುರಿಯಾಗಿರುವ ಡ್ರೋಣ್ ಪ್ರತಾಪ್ ರಾಜಕೀಯಕ್ಕೆ ಬರ್ತಾರಾ ಎಂಬ ಊಹಾಪೋಹಾಗಳು ಕೇಳಿ ಬರುತ್ತಿವೆ.


ಮಂಡ್ಯ: ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಟ್ರೋಲ್‌ಗೆ ಗುರಿಯಾಗಿರುವ ಡ್ರೋಣ್ ಪ್ರತಾಪ್ ರಾಜಕೀಯಕ್ಕೆ ಬರ್ತಾರಾ ಎಂಬ ಊಹಾಪೋಹಾಗಳು ಕೇಳಿ ಬರುತ್ತಿವೆ. ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಘೋಷಣೆಯಷ್ಟೇ ಬಾಕಿ ಇದ್ದು, ರಾಜ್ಯದಲ್ಲಿ ವಿವಿಧ ಪಕ್ಷಗಳ ನಾಯಕರು, ಟಿಕೆಟ್ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗಿರುವಾಗ ಈ ಡ್ರೋಣ್ ಪ್ರತಾಪ್‌ ಮಂಡ್ಯದ ಮಳವಳ್ಳಿಯ ಪಕ್ಷೇತರ ಅಭ್ಯರ್ಥಿ ಜೊತೆ ತಿರುಗಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಹೀಗಾಗಿ ಡ್ರೋಣ್ ಪ್ರತಾಪ್ ರಾಜಕೀಯಕ್ಕೆ ಬರಬಹುದು ಎಂಬ ಊಹಾಪೋಹಾ ಹರಿದಾಡುತ್ತಿದೆ. 

ಮಳವಳ್ಳಿ ವಿಧಾನಸಭಾ ಕ್ಷೇತ್ರದ (Malavalli Assembly Constituency) ಪಕ್ಷೇತರ ಅಭ್ಯರ್ಥಿ ಮಾಧವ್ ಕಿರಣ್‌ ಜೊತೆ ಡ್ರೋಣ್ ಪ್ರತಾಪ್ (Drone Pratap) ಕಾಣಿಸಿಕೊಂಡಿದ್ದಾರೆ. ಇಂದು ಪಕ್ಷೇತರ ಅಭ್ಯರ್ಥಿ ಮಾಧವ್ ಕಿರಣ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ದೆಹಲಿಯಿಂದ ಆಗಮಿಸಿದ ಮಾಧವ್ ಕಿರಣ್‌ಗೆ (Madhav Kiran) ಡ್ರೋಣ್ ಪ್ರತಾಪ್ ಶುಭಕೋರಿದ್ದಾರೆ.  ದೆಹಲಿಯಿಂದ ವಿಮಾನದಲ್ಲಿ ಆಗಮಿಸಿದ ಮಾಧವ್ ಕಿರಣ್ ಅವರಿಗೆ  ಡ್ರೋಣ್ ಪ್ರತಾಪ್ ಏರ್‌ಪೋರ್ಟ್‌ನಲ್ಲೆ ಕೇಕ್ ಕತ್ತರಿಸಿ ಶುಭಾಶಯ ಕೋರಿದ್ದಾರೆ. 

Tap to resize

Latest Videos

ಟಿವಿ ಸ್ಟುಡಿಯೋ ಅಲ್ಲ; ಅಧಿಕಾರಿಗಳ ಖಡಕ್ ಪ್ರಶ್ನೆಗೆ ಪ್ರತಾಪ್ ಬಾಯಿ ಬಂದ್!

ಅಲ್ಲದೇ ಒಳ್ಳೆ ಕೆಲಸ ಮಾಡಲು ಹೊರಟಿರುವ ಮಾಧವ್ ಕಿರಣ್ ಜೊತೆ ನಾನು ಇರ್ತಿನಿ ಎಂದ ಡ್ರೋಣ್ ಪ್ರತಾಪ್ ಹೇಳಿದ್ದು, ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ  ಹಂಚಿಕೊಂಡಿದ್ದಾರೆ. ಮಾಧವ್ ಕಿರಣ್ ಪರ  ಡ್ರೋಣ್ ಪ್ರತಾಪ್ ಪ್ರಚಾರಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದ್ದು, ಇದು ಮಳವಳ್ಳಿ ಕ್ಷೇತ್ರದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. 

ಕ್ವಾರಂಟೈನ್ ಮುಗಿಸಿದ 'ಯುವ ವಿಜ್ಞಾನಿ'ಗೆ ಪೊಲೀಸರ ಭರ್ಜರಿ ವೆಲ್‌ ಕಂ!

click me!