‘ಕನ್ನಡದ ಹೆಣ್ಣೇ ಪವಿತ್ರ ರಾಜಕಾರಣಕ್ಕೆ ಮುಂದಾಗು’ ರಾಜ್ಯವ್ಯಾಪಿ ಕೆಆರ್‌ಎಸ್‌ ಪಕ್ಷದಿಂದ ಅಭಿಯಾನ

Published : Dec 13, 2022, 10:35 PM IST
‘ಕನ್ನಡದ ಹೆಣ್ಣೇ ಪವಿತ್ರ ರಾಜಕಾರಣಕ್ಕೆ ಮುಂದಾಗು’ ರಾಜ್ಯವ್ಯಾಪಿ ಕೆಆರ್‌ಎಸ್‌ ಪಕ್ಷದಿಂದ ಅಭಿಯಾನ

ಸಾರಾಂಶ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ‘ಸ್ವಾಭಿಮಾನಿ ಕನ್ನಡದ ಹೆಣ್ಣೇಃ ಪವಿತ್ರ ರಾಜಕಾರಣಕ್ಕೆ ಮುಂದಾಗು’ ಎಂಬ ಘೋಷಣೆಯಡಿ ರಾಜ್ಯವ್ಯಾಪಿ ಅಭಿಯಾನ ಆರಂಭಿಸಿದೆ ಎಂದು ಪಕ್ಷದ ಬೆಂಗಳೂರು ಮಹಾನಗರ ವ್ಯಾಪ್ತಿಯ ಕಾರ್ಯದರ್ಶಿ ಜನನಿ ವತ್ಸಲ ಹೇಳಿದರು.

‘ ಕೆ.ಆರ್‌.ಪೇಟೆ (ಡಿ.13) : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ‘ಸ್ವಾಭಿಮಾನಿ ಕನ್ನಡದ ಹೆಣ್ಣೇಃ ಪವಿತ್ರ ರಾಜಕಾರಣಕ್ಕೆ ಮುಂದಾಗು’ ಎಂಬ ಘೋಷಣೆಯಡಿ ರಾಜ್ಯವ್ಯಾಪಿ ಅಭಿಯಾನ ಆರಂಭಿಸಿದೆ ಎಂದು ಪಕ್ಷದ ಬೆಂಗಳೂರು ಮಹಾನಗರ ವ್ಯಾಪ್ತಿಯ ಕಾರ್ಯದರ್ಶಿ ಜನನಿ ವತ್ಸಲ ಹೇಳಿದರು.

ಪಟ್ಟಣದ ವಿವಿಧೆಡೆ ಮಹಿಳಾ ಜಾಗೃತಿ ಯಾತ್ರೆ ನಡೆಸಿದ ನಂತರ ಪಕ್ಷದ ಮುಖಂಡರೊಂದಿಗೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯರ ಮೇಲೆ ಕೆಲಸದ ಸ್ಥಳದಲ್ಲಿ, ವಾಸಿಸುವ ಮನೆಗಳಲ್ಲಿ ಮತ್ತು ಇತರೆ ಕಡೆಗಳಲ್ಲಿ ತಾರತಮ್ಯ, ಅತ್ಯಾಚಾರ, ಕಿರುಕುಳ ಮತ್ತು ದೌರ್ಜನ್ಯಗಳು ನಡೆಯುತ್ತಿವೆ. ಇದಕ್ಕೆ ದೇಶದ ರಾಜಕಾರಣದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇರುವುದೇ ಕಾರಣ ಎಂದರು.

ಚಿಗಟೇರಿ ಜಿಲ್ಲಾಸ್ಪತ್ರೆ ಖಾಸಗಿಕರಣಕ್ಕೆ ವಿರೋಧ: ಕೆಆರ್ ಎಸ್ ಪ್ರತಿಭಟನೆ

ಜನಪರ ಕಾಳಜಿಯುಳ್ಳ ವಿದ್ಯಾವಂತ ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿದ್ದರೂ ಬಹುತೇಕರಿಗೆ ರಾಜಕೀಯ ಆಸಕ್ತಿಯಿಲ್ಲ. ರಾಜಕೀಯ ಪಕ್ಷಗಳು ಮಹಿಳಾ ಸಬಲೀಕರಣದ ಮಾತನಾಡಿದರೂ ಮಹಿಳೆಯರು ಘನತೆಯಿಂದ ರಾಜಕಾರಣ ಮಾಡುವ ಪೂರಕ ವಾತಾವರಣ ನಿರ್ಮಿಸದೆ ಕಾಲಹರಣ ಮಾಡುತ್ತಿವೆ ಎಂದು ದೂರಿದರು.

ಮಹಿಳೆಯರಿಗೆ ಸಿಗಬೇಕಾದ ರಾಜಕೀಯ ಅವಕಾಶಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಗ್ರಾಪಂ, ಜಿಲ್ಲಾ ಮತ್ತು ತಾಪಂ ಮತ್ತು ನಗರ ಸಭೆಗಳಂತಹ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿ ದಶಕಗಳೇ ಕಳೆದಿದ್ದರೂ ಅಲ್ಲಿಯೂ ಪುರುಷರದೇ ಪಾರಮ್ಯ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೆಸರಿಗೆ ಮಾತ್ರ ಮಹಿಳಾ ಪ್ರತಿನಿಧಿಗಳಿದ್ದು ನಿಜವಾದ ಅಧಿಕಾರ ಚುನಾಯಿತ ಮಹಿಳೆಯ ಪತಿ, ತಂದೆ ಅಥವಾ ಮಕ್ಕಳು ಚಲಾಯಿಸುತ್ತಿದ್ದಾರೆ. ಲೋಕಸಭೆ, ವಿಧಾನ ಸಭೆ, ರಾಜ್ಯ ಸಭೆ ಮತ್ತು ವಿಧಾನ ಪರಿಷತ್ತಿನ ಚುನಾವಣೆಗಳಲ್ಲೂ ಮಹಿಳೆಯರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಮೇಲ್ಮನೆಯ ನಾಮಿನಿಯಲ್ಲೂ ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಮಹಿಳೆಯರಿಗೆ ಸೂಕ್ತ ರಾಜಕೀಯ ಅವಕಾಶ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದರು.

ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವುದಕ್ಕೆ ನೀಡುವ ಆದ್ಯತೆಯನ್ನು ಈ ಮೂರು ಪಕ್ಷಗಳು ಮಹಿಳೆಯರ ಸಬಲೀಕರಣಕ್ಕೆ ನೀಡುತ್ತಿಲ್ಲ. ಮಹಿಳಾ ಸಬಲೀಕರಣ ಮತ್ತು ರಾಜಕಾರಣದಲ್ಲಿ ಮಹಿಳೆಯರಿಗೆ ಸಮಪಾಲು ಬಯಸಿ ಮಹಿಳಾ ಜಾಗೃತಿಗಾಗಿ ಕೆಆರ್‌ಎಸ್‌ ಪಕ್ಷ ಮಹಿಳಾ ಜನಜಾಗೃತಿ ಅಭಿಯಾನದ ಮೂಲಕ ಮಹಿಳೆಯರನ್ನು ರಾಜಕೀಯ ಕ್ಷೇತ್ರಕ್ಕೆ ಆಹ್ವಾನಿಸುತ್ತಿದೆ ಎಂದರು.

ಡಿ.12ರಿಂದ ಮೊದಲನೆ ಹಂತದ ಜಾಗೃತಿ ಅಭಿಯಾನ ರಾಮನಗರ ಜಿಲ್ಲೆಯಿಂದ ಆರಂಭವಾಗಿದೆ. ಮಂಡ್ಯ, ಮೈಸೂರು, ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಂಚರಿಸಿ ಡಿ.16ರಂದು ಅಂತ್ಯಗೊಳ್ಳಲಿದೆ ಎಂದರು.

ರಾಜ್ಯದ 224 ಕ್ಷೇತ್ರಗಳಲ್ಲೂ ಕೆಆರ್‌ಎಸ್‌ ಸ್ಪರ್ಧೆ

ಈ ವೇಳೆ ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೂರ್ಯಾನಿ, ಕೋಲಾರ ಜಿಲ್ಲಾ ಸಮಿತಿ ಅಧ್ಯಕ್ಷೆ ಇಂದಿರಾರೆಡ್ಡಿ, ಧಾರವಾಡ ಜಿಲ್ಲಾ ಸಮಿತಿ ಅಧ್ಯಕ್ಷೆ ಸುಮಿತ್ರಾ ಹಳ್ಳಕೇರಿ, ಬೆಂಗಳೂರು ಮಹಾನಗರ ಮಹಿಳಾ ಸಮಿತಿ ಪ್ರದಾನ ಕಾರ್ಯದರ್ಶಿ ಮಹಾಲಕ್ಷ್ಮಿ ಚೆನ್ನಕೇಶವ, ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗರಾಜು, ರಾಜ್ಯ ಜಂಟಿ ಕಾರ್ಯದರ್ಶಿ ಸೋಮಸುಂದರ್‌, ಜಿಲ್ಲಾ ಅಧ್ಯಕ್ಷ ರಮೇಶ್‌ಗೌಡ, ತಾಲೂಕು ಅಧ್ಯಕ್ಷ ಕರೆಮೇಗಳ ಕೊಪ್ಪಲು ಶಂಕರೇಗೌಡ, ಶ್ರೀರಂಗಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಅರುಣಕುಮಾರ್‌ ಸೇರಿದಂತೆ ಹಲವರಿದ್ದರು.

PREV
Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ