ನಿಮ್ಮ ಪಾಲಿಗೆ ಈ ವಾರವು ಹೇಗಿರಲಿದೆ

First Published May 13, 2018, 7:08 AM IST
Highlights

ನಿಮ್ಮ ಪಾಲಿಗೆ ಈ ವಾರವು ಹೇಗಿರಲಿದೆ. ವಾರ ಭವಿಷ್ಯದ ಮೂಲಕ ತಿಳಿದುಕೊಳ್ಳಿ

ಮೇಷ
ನೆಮ್ಮದಿಯ ನಾಳೆಗಾಗಿ ಇಂದಿನಿಂದಲೇ ತಯಾರಿ
ಮಾಡಿಕೊಳ್ಳಿ. ಒತ್ತಡದಿಂದ ಹೊರಗೆ ಬರುವಿರಿ.
ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳ
ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಸಿಕ್ಕ ಅವಕಾಶಗಳನ್ನು
ಸರಿಯಾಗಿ ಬಳಕೆ ಮಾಡಿಕೊಳ್ಳಿ. ಅಸಕ್ತರಿಗೆ ನೆರವಾಗುವಿರಿ. ರೈತಾಪಿ
ವರ್ಗಕ್ಕೆ ಲಾಭವಾಗಲಿದೆ. ಕೆಲಸದಲ್ಲಿ ಪ್ರಗತಿ.

ವೃಷಭ
ಎಲ್ಲರೊಂದಿಗೂ ಅತಿಯಾದ ಸಲುಗೆ ಬೇಡ. ದೂರದ
ಪ್ರಯಾಣ ದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ಅತಿ ಭಾವುಕತೆ ಒಳ್ಳೆಯದಲ್ಲ. ಜಗತ್ತು ನೀವಂದು
ಕೊಂಡ ಹಾಗೆ ಇಲ್ಲ. ತಂದೆ ತಾಯಿ ಆರೋಗ್ಯದಲ್ಲಿ ಸುಧಾರಣೆ.
ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಅವಕಾಶಗಳು
ಸಿಗಲಿವೆ. ಕೆಲಸದಲ್ಲಿ ನಿರೀಕ್ಷಿತ ಪ್ರಗತಿಯಾಗಲಿದೆ.

ಮಿಥುನ
ವ್ಯಾಪಾರಕ್ಕೆ ಸಂಬಂಧಿಸಿದಂತೆ ದುಡುಕ ಬೇಡ.
ಮನೆಯಲ್ಲಿ ಮುನಿಸು ಬೇಡ. ಮಕ್ಕಳ ಪ್ರೀತಿಯಿಂದ
ಹೆಚ್ಚು ಸಂತೋಷಪಡುವಿರಿ. ಅಂದುಕೊಂಡಂತೆ
ಮಹತ್ವದ ಘಟನೆಗಳು ನೆರವೇರಲಿವೆ. ನಿಧಾನವಾಗಿ ಮುಂದಡಿ
ಇಡಿ. ಖರ್ಚಿನಲ್ಲಿ ಮಿತ ಸಾಧಿಸಿ. ಮನೆಯ ವಾಸ್ತು ದೋಷ
ನಿವಾರಣೆಗಾಗಿ ಸರಿಯಾದ ಮಾರ್ಗ ಕಂಡುಕೊಳ್ಳಿ. 

ಕಟಕ
ಏನೋ ಅಂದುಕೊಂಡಿದ್ದರೂ ಆ ಕಡೆಗೆ ಗಮನ
ಹರಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಹತ್ತಿರದವ
ರೊಂದಿಗೆ ಮೃದುವಾಗಿ ವರ್ತಿಸಿ, ಆರ್ಥಿಕವಾಗಿ
ಲಾಭವಾಗಲಿದೆ. ಕೋಪ ಬಂದಾಗ ಹೆಚ್ಚು ಮಾತನಾಡಲು
ಹೋಗಬೇಡಿ. ಮಾಡುವ ಕೆಲಸದಲ್ಲಿ ಹೆಚ್ಚು ಶ್ರದ್ಧೆ ಮುಖ್ಯ. ಹೊಸ
ವಸ್ತು ಕೊಳ್ಳುವ ಅನಿವಾರ್ಯ ಎದುರಾಗಲಿದೆ

ಸಿಂಹ
ದೊಡ್ಡ ದೊಡ್ಡ ನಿರ್ಧಾರಗಳನ್ನು ಹೆಚ್ಚು ಸಮಯ
ಮುಂದೂಡಬೇಡಿ. ಮದುವೆ ಮೊದಲಾದ ಶುಭ
ಸಂದರ್ಭಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಿರಿ. ಕೆಲಸ
ಕಾರ್ಯಗಳಲ್ಲಿ ಒತ್ತಡ ಹೆಚ್ಚಾಗಲಿದೆ. ಅನಿರೀಕ್ಷಿತ ಘಟನೆಗಳು
ಎದುರಾಗಲಿವೆ. ಎಲ್ಲವನ್ನೂ ಶಾಂತ ಚಿತ್ತದಿಂದ ಎದುರಿಸಿದರೆ
ಒಳ್ಳೆಯ ಫಲ ದೊರಕಲಿದೆ. ಸ್ವಂತ ಮನೆ ಕನಸು ಕೈಗೂಡಲಿದೆ

ಕನ್ಯಾ
ಲಕ್ಷ್ಮೀ ಮನೆಗೆ ಬರುತ್ತಾಳೆ. ಖುಷಿಯ ವಿಷಯ
ವಾದರೂ ಜಾಸ್ತಿ ಸಂಭ್ರಮ ಬೇಡ. ಆರೋಗ್ಯದ ಮೇಲೆ
ಜಾಸ್ತಿ ನಿಗಾ ಇರಲಿ. ಕೆಲಸದ ಒತ್ತಡ ನಿಭಾಯಿಸುವ
ಶಕ್ತಿಯನ್ನು ಒಟ್ಟು ಮಾಡಿಟ್ಟುಕೊಳ್ಳಿ. ಅಗತ್ಯವಾದ ವಿಚಾರಗಳ
ಕಡೆಗೆ ಮಾತ್ರ ನಿಮ್ಮ ಗಮನವಿರಲಿ. ಖರ್ಚು ಕಡಿಮೆ ಮಾಡಿಕೊಳ್ಳಿ.
ವಾಸಸ್ಥಳವನ್ನು ಬದಲಾಯಿಸಬೇಕಾಗುತ್ತದೆ.

ತುಲಾ
ನಿರ್ಧಿಷ್ಟ ಕಾಲಮಿತಿಯಲ್ಲಿ ಅಂದುಕೊಂಡ
ಕಾರ್ಯಗಳನ್ನು ಮಾಡಿ ಮುಗಿಸುವಿರಿ. ನೀವು
ಕೈಹಾಕಿದ ಕೆಲಸಗಳೆಲ್ಲಕ್ಕೂ ಒಳ್ಳೆಯ ಫಲಿತಾಂಶ
ಸಿಗಲಿದೆ. ಹೆಚ್ಚು ಮೊಬೈಲ್ ಬಳಕೆ ಒಳ್ಳೆಯದಲ್ಲ. ಕೆಲಸದ ಸ್ಥಳದಲ್ಲಿ
ಅನಾವಶ್ಯಕ ಕಿರಿಕಿರಿಗಳಿಂದ ಮುಕ್ತಿ ದೊರಕಲಿದೆ. ನಿಮ್ಮ
ಕೆಲಸಗಳಿಂದ ಹೆತ್ತವರು ಹೆಮ್ಮೆ ಪಡಲಿದ್ದಾರೆ.

ವೃಶ್ಚಿಕ
ಒಂದೇ ವಿಚಾರದ ಬಗ್ಗೆ ಹೆಚ್ಚು ಯೋಚನೆ
ಮಾಡುವುದು ಬೇಡ. ನಿಮ್ಮ ಶಕ್ತಿಗೆ ಅನುಗುಣವಾದ
ಕೆಲಸ ಆಯ್ಕೆ ಮಾಡಿಕೊಳ್ಳಿ. ಹೆಚ್ಚಿನ ಭಾರವನ್ನು
ಹೊತ್ತು ಒದ್ದಾಡುವುದು ತರವಲ್ಲ. ತುಂಬಾ ಹಿಂದೆ ಮಾಡಿದ
ಕೆಲಸಕ್ಕೆ ಒಳ್ಳೆಯ ಫಲ ದೊರಕಲಿದೆ. ನಾಳೆಗಳಿಗಾಗಿ ಒಂದಷ್ಟು
ಪೂರ್ವ ತಯಾರಿಯನ್ನು ಮಾಡಿಕೊಳ್ಳಿ. ಶುಭವಾರ್ತೆ ಕೇಳುವಿರಿ.

ಧನಸ್ಸು
ಸ್ವಲ್ಪ ಯೋಚಿಸಿ ಮುಂದಡಿಯಿಟ್ಟರೆ ಧನಲಾಭ. ವಾರ
ಪೂರ್ತಿ ಸಂತಸದಿಂದ ಇರುವಿರಿ. ಜಾಣತನದ ಮಾತು
ಲಾಭ ತಂದುಕೊಡಲಿದೆ. ನಿಧಾನವಾಗಿ ಯೋಚಿಸಿ
ಸಂಬಂಧ ಬೆಸೆಯಲು ಮುಂದಾಗಿ. ಆಗುವುದೆಲ್ಲಾ ಒಳ್ಳೆಯದಕ್ಕೆ
ಅನ್ನುವುದರಲ್ಲಿ ನಂಬಿಕೆ ಇರಲಿ. ಮದುವೆಯ ಯೋಗವಿದೆ.

ಮಕರ
ಮೊದಲು ನಿಮ್ಮ ಕೆಲಸಗಳ ಕಡೆಗೆ ಗಮನವಿಡಿ.
ತದನಂತರ ಸ್ನೇಹಿತರಿಗೆ ನೆರವಾಗಿ. ಔದ್ಯೋಗಿಕವಾಗಿ
ಇನ್ನಷ್ಟು ವೇಗ ಹೆಚ್ಚಿಸಿಕೊಳ್ಳುವತ್ತ ಗಮನಹರಿಸುವಿರಿ.
ಸುಂದರವಾದ ಕ್ಷೇತ್ರಗಳಿಗೆ ಗೆಳೆಯರೊಂದಿಗೆ ಪ್ರವಾಸ ಮಾಡುವ
ಯೋಗ ಬರಲಿದೆ. ಆರೋಗ್ಯದಲ್ಲಿ ಸ್ಥಿರತೆ

ಕುಂಭ
ಸಂಬಂಧದಲ್ಲಿ ಸಣ್ಣ ಕೋಲಾಹಲ. ನಿಮ್ಮ
ಹತ್ತಿರದವರಿಗೆ ಸಿಟ್ಟು ಬರಿಸದೇ ಇರುವುದು
ಒಳ್ಳೆಯದು. ದುಡ್ಡಿನ ವಿಷಯದಲ್ಲಿ ಅಗತ್ಯಕ್ಕಿಂತ
ಜಾಸ್ತಿಯೇ ಹುಷಾರಾಗಿರಿ. ಗೆಳೆಯರ ಮಾತಿಗೆ ಹೆಚ್ಚು ಬೆಲೆ
ನೀಡುವಿರಿ. ಆರೋಗ್ಯದ ಕಡೆ ಗಮನವಿರಲಿ. ಹತ್ತಿರದ
ಬಂಧುಗಳಿಗೆ ಆರ್ಥಿಕ ಸಹಾಯ ಮಾಡುವಿರಿ.

ಮೀನ
ಅತಿಯಾದ ದುಂದು ವೆಚ್ಚ ಬೇಡ. ಹೊಸ ವಾಹನ
ಕೊಳ್ಳುವ ಯೋಜನೆಯನ್ನು ಕೊಂಚ ಮುಂದಕ್ಕೆ ಹಾಕಿ.
ದಾಯಾದಿಗಳೊಂದಿಗೆ ಕಲಹ ಬೇಡ. ಮನಸ್ಸು ನಿಮ್ಮ
ಹಿಡಿತದಲ್ಲಿರಲಿ. ಹೊಸ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುವಾಗ
ಎಚ್ಚರದಿಂದಿರಿ. ಹಿರಿಯರ ಸಲಹೆ ಅಗತ್ಯ.

click me!