
ವಯಸ್ಸು 41. ಸಾಫ್ಟ್‌ವೇರ್ ಇಂಜಿನಿಯರ್. ಆಫೀಸ್‌ನಲ್ಲೂ, ಮನೆಗೆ ಬಂದ್ರೂ, ರಾತ್ರಿ ಮಲಗುವಾಗಲೂ ಲ್ಯಾಪ್‌ಟಾಪ್ ಜೊತೆಗಿರಲೇಬೇಕು, ಇದು ಅಲಿಖಿತ ನಿಯಮ. ಕನಸಿನಲ್ಲೂ ಬರುವ ಟಾರ್ಗೆಟ್ ಭೂತ! ಇಂತಿಪ್ಪ ಬ್ಯುಸಿಮ್ಯಾನ್ ಇತ್ತೀಚೆಗೆ ಫ್ಯಾಮಿಲಿ ಡಾಕ್ಟರ್ ಶಾಪ್‌ನಲ್ಲಿ ಲ್ಯಾಪ್‌ಟಾಪ್ ಹಿಡಿದು ಕೂತಿರುವ ದೃಶ್ಯ ಹೆಚ್ಚೆಚ್ಚು ಕಾಣ್ತಿದೆ.
‘ಎಕ್ಸರ್‌ಸೈಸ್ ಮಾಡಿ, ಯೋಗ ಕ್ಲಾಸ್‌ಗೆ ಹೋಗಿ’ ಅಂತ ಡಾಕ್ಟರೇನೋ ಹೇಳ್ತಾರೆ, ಆದರೆ ಅದಕ್ಕೆಲ್ಲ ಸಮಯವಿರಬೇಕಲ್ಲ, ಒಂದು ಗುಳಿಗೆ ನುಂಗಿದ್ರೆ ವಾಸಿಯಾಗೋ ರೋಗಕ್ಕೆ ಅಷ್ಟೆಲ್ಲ ತಲೆಕೆಡಿಸಿಕೊಳ್ಳಬೇಕಾ?
ಹೌದು, ತಲೆಕೆಡಿಸಿಕೊಳ್ಳಲೇಬೇಕು. ಇಲ್ಲವಾದರೆ ಬೇಗ ಈ ಲೋಕಕ್ಕೇ ಗುಡ್‌ಬೈ ಹೇಳೋ ಕಾಲ ಬಹಳ ಬೇಗ ಬರಬಹುದು. ಯಾಕೆಂದರೆ ಹೀಗೆ ಕುಳಿತೇ ಕೆಲಸ ಮಾಡುವುದರಿಂದ ಬೊಜ್ಜು ಹೆಚ್ಚಾಗುತ್ತೆ. ಇದರಿಂದ ಹೃದಯ ಸಂಬಂಧಿ ಗಂಭೀರ ರೋಗಗಳು ಬರುವ ಸಾಧ್ಯತೆ ಅಧಿಕವಾಗಿರೋದು ಇತ್ತೀಚಿನ ಸಂಶೋಧನೆಯಿಂದ ದೃಢಪಟ್ಟಿದೆ.
ಇತ್ತೀಚೆಗೆ ವಿದೇಶಿ ಮೂಲದ ಸಂಸ್ಥೆಯೊಂದು 1 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನಿಟ್ಟು ಸಮೀಕ್ಷೆ ನಡೆಸಿತು. ಈ ಅಧ್ಯಯನದಲ್ಲಿ ಬೆಳಕಿಗೆ ಬಂದ ವಿಷಯಗಳು ಹೀಗಿವೆ
ತುತ್ತಾಗಿದ್ದರು. ಇದರಿಂದ ನಾನಾ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು ಪದೇ ಪದೇ ರಜೆ ಹಾಕುವ ಅನಿವಾರ್ಯತೆಗೆ ಸಿಲುಕಿದ್ದರು. ೩ಇಂಥವರಿಗೆ ಕೆಲವೇ ವರ್ಷಗಳಲ್ಲಿ ಡಯಾಬಿಟೀಸ್, ಹೈಪರ್ ಟೆನ್ಶನ್, ಹೃದಯ ಸಂಬಂಧಿ ರೋಗಗಳ ಸಾಧ್ಯತೆ ಹೆಚ್ಚಿತ್ತು. ೪ಕೆಲಸದ ಮೇಲೆ ಏಕಾಗ್ರತೆ ಕಡಿಮೆಯಾಗ್ತಿತ್ತು, ಫ್ರೆಶ್ ನೆಸ್ ಇಲ್ಲದೇ ತೂಕಡಿಸುವಂತಿರುತ್ತಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.