
ಮಹಿಳೆಯೊಬ್ಬಳು ರಾತ್ರಿ ಹೊತ್ತು ವಾಕಿಂಗ್ ಮಾಡಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಗೇಟ್ ಎದುರು ಬಿದ್ದಿದ್ದ ಹಾವನ್ನು ಆಟದ ಸಾಮಾನೆಂದು ಕೈಯ್ಯಲ್ಲಿ ಹಿಡಿದು ಬಳಿಕ ಗಾಬರಿಗೊಂಡು ಓಡಿದ ಪ್ರಸಂಗ ಅಮೆರಿಕಾದಲ್ಲಿ ನಡೆದಿದೆ. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ. ನೋಡುಗರಲ್ಲಿ ಕೆಲವರು ಈ ವಿಡಿಯೋ ನೋಡಿ ಹಾಸ್ಯದ ಕಡಲಲ್ಲಿ ತೇಲಿದರೆ ಇನ್ನು ಕೆಲವರು ಅಬ್ಬಾ... ಎಂದು ತಾವೂ ಗಾಬರಿಗೊಂಡಿದ್ದಾರೆ.
12 ಸೆಕೆಂಡ್'ಗಳ ಈ ವಿಡಿಯೋದಲ್ಲಿ ರಾತ್ರಿ ವೇಳೆ ಮಹಿಳೆಯೊಬ್ಬಳು ವಾಕಿಂಗ್ ಮಾಡಿ ತನ್ನ ನಾಯಿಯೊಂದಿಗೆ ವಾಪಾಸಾಗುತ್ತಿದ್ದಳು. ಈ ಸಂದರ್ಭದಲ್ಲಿ ಮನೆಯ ಗೇಟ್ ಬಳಿ ತಲುಪಿದ ಆಕೆಗೆ ನೆಲದ ಮೇಲೆ ನಾಯಿಯ ಕತ್ತಿಗೆ ಹಾಕುವ ರೋಪ್'ನಂತಹ ವಸ್ತು ಕಣ್ಣಿಗೆ ಬೀಳುತ್ತದೆ. ಆದರೆ ಅದು ರೋಪ್ ಆಗಿರದೆ ಜೀವಂತ ಹಾವಾಗಿತ್ತು. ಇದನ್ನು ತಿಳಿಯದ ಆಕೆ ಅದನ್ನು ಕೈಯ್ಯಲ್ಲೆತ್ತುತ್ತಾಳೆ. ಅಷ್ಟರಲ್ಲಿ ಅದು ಹಾವೆಂದು ತಿಳಿದ ಆಕೆ ಭಯಬಿದ್ದು ಮರುಕ್ಷಣವೇ ಹಾವನ್ನು ಬಿಸಾಡಿ ಅಲ್ಲಿಂದ ಓಡಿ ಪರಾರಿಯಾಗುತ್ತಾಳೆ.
ಮಹಿಳೆಯ ಈ ವರ್ತನೆ ನೋಡುಗರನ್ನು ನಗುವಂತೆ ಮಾಡಿದರೂ ಆ ಸಮಯದಲ್ಲಾದ ಭಯ ಆಕೆಗಷ್ಟೇ ಗೊತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.