ಮದುವೆಗೆ ನೀಡುವ ಗಿಫ್ಟ್‌ ಕವರ್‌ನಲ್ಲಿ 1 ರೂ. ನಾಣ್ಯ ಯಾಕೆ ಸೇರಿಸುತ್ತಾರೆ ?

Published : Mar 27, 2022, 07:55 PM ISTUpdated : Mar 27, 2022, 07:57 PM IST
ಮದುವೆಗೆ ನೀಡುವ ಗಿಫ್ಟ್‌ ಕವರ್‌ನಲ್ಲಿ 1 ರೂ. ನಾಣ್ಯ ಯಾಕೆ ಸೇರಿಸುತ್ತಾರೆ ?

ಸಾರಾಂಶ

ಮದುವೆ (Marriage)ಯಲ್ಲಿ ಸಂಪ್ರದಾಯಬದ್ಧವಾಗಿ ನಡೆಯುವ ಕೆಲವೊಂದು ಆಚರಣೆಗಳನ್ನು ಗಮನಿಸಿದ್ದೀರಾ ? ಆಮಂತ್ರಣ ಪತ್ರಿಕೆಗೆ ಅರಿಶಿನ ಹಚ್ಚುವುದು, ಮದುಮಕ್ಕಳಿಗೆ ಅಕ್ಕಿ ಎಸೆಯುವುದು ಹೀಗೆ ಹಲವು. ಅದೇ ರೀತಿ ನೂತನ ದಂಪತಿಗೆ ಗಿಫ್ಟ್ (Gift) ನೀಡುವಾಗ ಕವರ್‌ (Envelope)ನಲ್ಲಿ ನಿರ್ಧಿಷ್ಟ ಮೊತ್ತದ ಜತೆ ಒಂದು ರೂಪಾಯಿ (One Rupee)ಯನ್ನೂ ಸೇರಿಸುತ್ತಾರೆ. ಅದ್ಯಾಕೆಂತ ನಿಮ್ಗೆ ಗೊತ್ತಾ ? 

ಮದುವೆ (Marriage)ಯೆಂಬುದು ಒಂದು ಸುಂದರ ಅನುಬಂಧ. ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಎರಡು ಕುಟುಂಬಗಳನ್ನು ಒಗ್ಗೂಡಿಸುವ ಮದುವೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇದನ್ನು ಕ್ರಮಬದ್ಧವಾಗಿ ಶಾಸ್ತ್ರಪ್ರಕಾರ ಮಾಡಲಾಗುತ್ತದೆ. ಮದುವೆಯ ಆಮಂತ್ರಣ ಪತ್ರಿಕೆಯಿಂದ ಹಿಡಿದು ಚಪ್ಪರ, ತೋರಣ, ಅಲಂಕಾರ, ವರ-ವಧುವಿಗೆ ಮಾಡುವ ಶಾಸ್ತ್ರಗಳು ಎಲ್ಲವನ್ನು ಸಂಪ್ರದಾಯದಂತೆ ಮಾಡಲಾಗುತ್ತದೆ. ಕೆಲವೊಂದು ಆಚರಣೆಯ ಅರ್ಥ ತಿಳಿದಿದ್ದರೂ ಇನ್ನೂ ಕೆಲವೊಂದು ಆಚರಣೆಯ ಅರ್ಥ ಹಲವರಿಗೆ ತಿಳಿದಿರುವುದಿಲ್ಲ. ಆದರೂ ಜನರು ಇಂಥಾ ಆಚರಣೆಗಳನ್ನು ಬಹಳ ನಂಬಿಕೆಯಿಂದ ಪಾಲಿಸುತ್ತಾರೆ. ಅಂಥಾ ಸಂಪ್ರದಾಯದಲ್ಲೊಂದು ಮದುವೆಯಲ್ಲಿ ನಗದನ್ನು ಉಡುಗೊರೆಯಾಗಿ ನೀಡುವಾಗ 1 ರೂ. ನಾಣ್ಯ  ಸೇರಿಸುವುದು.

ಗಿಫ್ಟ್ ಕೊಡುವರರು ಅದೆಷ್ಟೇ ಬಡವರಾಗಿದ್ದರೂ, ಶ್ರೀಮಂತರಾಗಿದ್ದರೂ ಸಹ ಗಿಫ್ಟ್‌ ಕಾರ್ಡ್‌ಗೆ 1 ರೂ. ನಾಣ್ಯವನ್ನು ಸೇರಿಸುತ್ತಾರೆ. ಹಾಗಿದ್ರೆ ಗಿಫ್ಟ್ ಕವರ್‌ನಲ್ಲಿ ಒಂದು ರೂಪಾಯಿ ಇಡುವುದು ಯಾವುದಕ್ಕಾಗಿ? ಇದರ ಬದಲು ನಾವು 100, 500 ಅಥವಾ 1,000 ರೂಗಳನ್ನು ಏಕೆ ನೀಡಬಾರದು ? ಹೀಗೆ ಹಲವು ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುವುದು ಸಹಜ.

ಅಷ್ಟೇ ಅಲ್ಲ ನಾವು ಬೆಸ ಸಂಖ್ಯೆಯಲ್ಲಿ ನಗದು ಉಡುಗೊರೆಗಳನ್ನು ಏಕೆ ನೀಡುತ್ತೇವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಾವು 100, 500 ಅಥವಾ 1,000 ರೂಗಳನ್ನು ನೀಡುವ ಬದಲು 101, ರೂ 501, ರೂ 1,001 ಇತ್ಯಾದಿಗಳನ್ನು ನೀಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಮದುವೆ ಮಕ್ಕಳಾಟವಲ್ಲ, ಜೊತೆಯಾಗಿ ಆಡಿದರೆ ಜಯ ನಿಮ್ಮದೇ !

ಗಿಫ್ಟ್ ಕವರ್‌ನಲ್ಲಿ ಒಂದು ರೂಪಾಯಿ ನಾಣ್ಯವನ್ನು ಏಕೆ ಸೇರಿಸುತ್ತಾರೆ ?

ನಿಮ್ಮ ಪ್ರೀತಿಪಾತ್ರರಿಗೆ ಅವರ ಮದುವೆ, ಜನ್ಮದಿನ ಅಥವಾ ಯಾವುದೇ ವಿಶೇಷ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡುವಾಗ ಲಕೋಟೆಯೊಳಗೆ ನೀವು ಇರಿಸುವ ಹಣವನ್ನು ಹೊರತುಪಡಿಸಿ ಒಂದು ರೂಪಾಯಿ ನಾಣ್ಯವನ್ನು ಏಕೆ ಸೇರಿಸುತ್ತಾರೆ ತಿಳಿಯೋಣ. ಮದುವೆ ಸಂದರ್ಭದಲ್ಲಿ ಹೆಚ್ಚುವರಿ ಒಂದು ರೂಪಾಯಿ ನಾಣ್ಯವನ್ನು ಸೇರಿಸಲು ಕೆಲವು ಕಾರಣಗಳು ಇಲ್ಲಿವೆ.

* 1 ರೂ. ನಾಣ್ಯ ಆಶೀರ್ವಾದ, ಬೆಳವಣಿಗೆ ಮತ್ತು ಸಮೃದ್ಧಿಯನ್ನು ಅರ್ಥೈಸುತ್ತದೆ, ಇದು ಇತರರಿಗೆ ಜೀವನದ ಹೊಸ ಹಂತದ ಆರಂಭವನ್ನು ಸೂಚಿಸುತ್ತದೆ.

* '0' ಸಂಖ್ಯೆಯು ಅಂತ್ಯವನ್ನು ಸೂಚಿಸಿದರೆ '1' ಆರಂಭವನ್ನು ಸೂಚಿಸುತ್ತದೆ. ಹೀಗಾಗಿ ಮದುವೆ ಉಡುಗೊರೆಯಲ್ಲಿ ಒಂದು ರೂಪಾಯಿಯ ನಾಣ್ಯವನ್ನು ಸೇರಿಸಲಾಗುತ್ತದೆ. ಆದ್ದರಿಂದ ಸ್ವೀಕರಿಸುವವರಿಗೆ ಶೂನ್ಯವೆಂಬ ಸಮಸ್ಯೆ ಬರುವುದೇ ಇಲ್ಲ ಎಂಬ ಅರ್ಥವಿದೆ.

* ಒಂದು ರೂಪಾಯಿ ವರದಾನವಾಗಿದೆ. 101, 251, 501, ಇತ್ಯಾದಿ ಮೊತ್ತಗಳು ಅವಿಭಾಜ್ಯವಾಗಿವೆ. ಇದರರ್ಥ ನೀವು ನೀಡುವ ಶುಭ ಹಾರೈಕೆಗಳು, ಅದೃಷ್ಟ ಮತ್ತು ಆಶೀರ್ವಾದಗಳು ಅವಿಭಾಜ್ಯವಾಗಿ ಉಳಿಯುತ್ತವೆ.

Relationship Tips : ಈ ವಯಸ್ಸಿನಲ್ಲಿ ಸಂಗಾತಿಗೆ ಮೋಸ ಮಾಡ್ತಾರೆ ಹುಡುಗಿಯರು

* ಆ ಹೆಚ್ಚುವರಿ ಒಂದು ರೂಪಾಯಿ ಸಾಲ ಎಂದು ನಂಬಲಾಗಿದೆ. ಆ ಒಂದು ರೂಪಾಯಿ ಕೊಟ್ಟರೆ ನಿಜವಾದ ಋಣವು ಸ್ವೀಕರಿಸುವವರ ಮೇಲೆ ಇರುತ್ತದೆ, ಅವರು ಮತ್ತೆ ಬಂದು ಕೊಡುವವರನ್ನು ಭೇಟಿ ಮಾಡಬೇಕಾಗುತ್ತದೆ. ಒಂದು ರೂಪಾಯಿ ನಿರಂತರತೆಯ ಸಂಕೇತವಾಗಿದೆ. ಇದು ಅವರ ಬಾಂಧವ್ಯವನ್ನು ಬಲಪಡಿಸುತ್ತದೆ. ಇದರ ಅರ್ಥ, 'ನಾವು ಮತ್ತೆ ಭೇಟಿಯಾಗುತ್ತೇವೆ' ಎಂಬುದಾಗಿದೆ.

* ಇನ್ನೊಂದು ನಂಬಿಕೆಯೆಂದರೆ ಲೋಹವು ಭೂಮಿಯಿಂದ ಬರುತ್ತದೆ ಮತ್ತು ಅದನ್ನು ಲಕ್ಷ್ಮಿ ದೇವಿಯ ಭಾಗವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇದನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಶಗುನ್ ನೀಡುವಾಗ, ನಾವು ನೀಡುವ ಹಣವು ಹೆಚ್ಚಾಗುತ್ತದೆ ಮತ್ತು ನಮ್ಮ ಪ್ರೀತಿಪಾತ್ರರಿಗೆ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗುತ್ತದೆ. ಶಗುನ್‌ನ ದೊಡ್ಡ ಮೊತ್ತವು ಖರ್ಚು ಮಾಡಲು ಆಗಿದ್ದರೆ, ಆ ಒಂದು ರೂಪಾಯಿ ಸಮೃದ್ಧಿಯನ್ನು ಸೂಚಿಸುತ್ತದೆ. ನಗದು ಅಥವಾ ವಸ್ತು ಅಥವಾ ಕರ್ಮದಲ್ಲಿ ಹೆಚ್ಚಾಗಲು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಅಥವಾ ದಾನದಲ್ಲಿ ನೀಡುವುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಿನಕ್ಕೆರಡೇ ಸಿಗರೇಟ್ ಸೇದೋದು ಮಗಾ, ಇಷ್ಟು ಧಮ್ಮೆಳೆದ್ರೆನಾಗುತ್ತೆ ಅನ್ನೋರಿಗೆ ಉತ್ತರ ಇಲ್ಲಿದೆ
ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌