ವಾಹನ ಯಾವುದೇ ಬಣ್ಣದಲ್ಲಿದ್ದರೂ ಟೈರ್ ಮಾತ್ರ ಕಪ್ಪಾಗಿ ಇರೋದ್ಯಾಕೆ? ಇದರ ಹಿಂದಿದೆ ಜನರ ಪ್ರಾಣ ಉಳಿಸೋ ಬಿಗ್ ಸೀಕ್ರೆಟ್!

Published : Sep 18, 2026, 06:30 PM IST
Why tires are not colorful

ಸಾರಾಂಶ

Why tires are not colorful: ಕಾರು, ಬೈಕುಗಳು ನೂರಾರು ಆಕರ್ಷಕ ಬಣ್ಣಗಳಲ್ಲಿ ಸಿಗುತ್ತವೆ, ಆದರೆ ಅವುಗಳ ಟೈರ್‌ಗಳು ಮಾತ್ರ ಸದಾ ಕಪ್ಪು ಬಣ್ಣದಲ್ಲೇ ಇರುವುದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.

Why Are Vehicle Tires Always Black: ಸೈಕಲ್‌ನಿಂದ ಹಿಡಿದು ಆಗಸದಲ್ಲಿ ಹಾರುವ ವಿಮಾನಗಳವರೆಗೆ ಪ್ರತಿಯೊಂದು ವಾಹನದ ಟೈರ್‌ಗಳು ಕಪ್ಪು ಬಣ್ಣದಲ್ಲೇ ಇರುತ್ತವೆ. ಕಾರು, ಬೈಕುಗಳು ಕೆಂಪು, ಬಿಳಿ, ಹಳದಿ ಹೀಗೆ ನಾನಾ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದರೂ, ಅವುಗಳ ಟೈರ್‌ಗಳು ಮಾತ್ರ ಏಕೆ ಬೇರೆ ಬಣ್ಣದಲ್ಲಿರುವುದಿಲ್ಲ? "ಟೈರ್‌ಗಳು ಕಪ್ಪಾಗಿಯೇ ಏಕೆ ಇರುತ್ತವೆ?" ಎಂಬ ಅನುಮಾನ ನಿಮಗೂ ಎಂದಾದರೂ ಬಂದಿದೆಯೇ? ಇದರ ಹಿಂದೆ ಕೇವಲ ಬಣ್ಣ ಮಾತ್ರವಲ್ಲ, ಜನರ ಜೀವ ಉಳಿಸುವ ಅದ್ಭುತವಾದ ವೈಜ್ಞಾನಿಕ ಕಾರಣವಿದೆ!

ಬೆಳ್ಳಗಿರುವ ರಬ್ಬರ್ ಕಪ್ಪಾಗುವುದು ಹೇಗೆ?

ವಾಸ್ತವವಾಗಿ, ಟೈರ್ ತಯಾರಿಸಲು ಮರಗಳಿಂದ ತೆಗೆಯುವ ನೈಸರ್ಗಿಕ ರಬ್ಬರ್ (Natural Rubber) ತಿಳಿ ಬಿಳಿ ಅಥವಾ ಹಳದಿ ಬಣ್ಣದಲ್ಲಿರುತ್ತದೆ. ಆದರೆ ಆ ಬಿಳಿ ರಬ್ಬರ್‌ನಿಂದ ನೇರವಾಗಿ ಟೈರ್ ಮಾಡಿದರೆ ಅದು ಕೆಲವೇ ದಿನಗಳಲ್ಲಿ ಕರಗಿ ಅಥವಾ ಸವೆದು ಹಾಳಾಗಿಬಿಡುತ್ತದೆ. ಅದಕ್ಕಾಗಿ ಟೈರ್ ತಯಾರಕರು ಒಂದು ವಿಶೇಷ ತಂತ್ರಜ್ಞಾನವನ್ನು ಬಳಸುತ್ತಾರೆ. ರಬ್ಬರ್ ತಯಾರಿಕೆಯ ಸಮಯದಲ್ಲಿ ಅದಕ್ಕೆ 'ಕಾರ್ಬನ್ ಬ್ಲಾಕ್' (Carbon Black) ಎಂಬ ವಿಶೇಷ ರಾಸಾಯನಿಕ ವಸ್ತುವನ್ನು ಬೆರೆಸುತ್ತಾರೆ. ಈ ಕಾರ್ಬನ್ ಬ್ಲಾಕ್‌ನಿಂದಾಗಿಯೇ ಟೈರ್‌ಗಳು ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತವೆ.

ಕಪ್ಪು ಬಣ್ಣ ಕೇವಲ ಸ್ಟೈಲ್‌ಗಾಗಿ ಅಲ್ಲ, ಇದರ ಹಿಂದಿರುವ ವೈಜ್ಞಾನಿಕ ಕಾರಣಗಳಿವು..

1. ಉಕ್ಕಿನಂತಹ ಬಲ ಮತ್ತು ದೀರ್ಘಾಯುಷ್ಯ

ಕಾರ್ಬನ್ ಬ್ಲಾಕ್ ಬೆರೆಸುವುದರಿಂದ ಮೃದುವಾದ ರಬ್ಬರ್‌ಗೆ ಉಕ್ಕಿನಂತಹ ಶಕ್ತಿ ಬರುತ್ತದೆ. ಕೇವಲ ನೈಸರ್ಗಿಕ ರಬ್ಬರ್‌ನಿಂದ ಮಾಡಿದ ಟೈರ್ ಕೇವಲ 8,000 ಕಿ.ಮೀ ಓಡಿದರೆ ಸವೆದುಹೋಗುತ್ತದೆ. ಆದರೆ ಕಾರ್ಬನ್ ಬ್ಲಾಕ್ ಬೆರೆಸಿದ ಕಪ್ಪು ಟೈರ್ ಬರೋಬ್ಬರಿ 50,000 ದಿಂದ 1 ಲಕ್ಷ ಕಿ.ಮೀ ವರೆಗೂ ಸುಲಭವಾಗಿ ಬಾಳಿಕೆ ಬರುತ್ತದೆ!

2. ಅತಿಯಾದ ಶಾಖದಿಂದ ರಕ್ಷಣೆ (ಟೈರ್ ಬ್ಲಾಸ್ಟ್ ಆಗಲ್ಲ)

ವಾಹನಗಳು ರಸ್ತೆಯಲ್ಲಿ ಅತಿ ವೇಗವಾಗಿ ಚಲಿಸುವಾಗ ರಸ್ತೆ ಮತ್ತು ಟೈರ್ ನಡುವಿನ ಘರ್ಷಣೆಯಿಂದಾಗಿ (Friction) ವಿಪರೀತ ಶಾಖ ಹುಟ್ಟಿಕೊಳ್ಳುತ್ತದೆ. ಸಾಮಾನ್ಯ ರಬ್ಬರ್ ಆಗಿದ್ದರೆ ಆ ಶಾಖಕ್ಕೆ ಕರಗಿ ಅಥವಾ ಸಿಡಿದು (Burst) ಹೋಗುತ್ತಿತ್ತು. ಆದರೆ ಈ ಕಾರ್ಬನ್ ಬ್ಲಾಕ್ ಶಾಖವನ್ನು ಒಂದೇ ಕಡೆ ಉಳಿಯಲು ಬಿಡದೆ, ಟೈರ್‌ನಾದ್ಯಂತ ಸಮಾನವಾಗಿ ಹರಡುತ್ತದೆ. ಇದರಿಂದ ಟೈರ್ ಕರಗದೆ, ಬ್ಲಾಸ್ಟ್ ಆಗದಂತೆ ರಕ್ಷಣೆ ಸಿಗುತ್ತದೆ.

3. ಸೂರ್ಯನ ಯುವಿ ಕಿರಣಗಳಿಂದ ರಕ್ಷಣೆ (UV Protection)

ಬಿಸಿಲಿನಲ್ಲಿರುವ ಅಪಾಯಕಾರಿ ಯುವಿ ಕಿರಣಗಳು (UV Rays) ಮತ್ತು ಓಝೋನ್ ಅನಿಲವು ಸಾಮಾನ್ಯ ರಬ್ಬರ್ ಅನ್ನು ಬಿರುಕು ಬಿಡುವಂತೆ ಮಾಡುತ್ತವೆ. ಆದರೆ ಕಾರ್ಬನ್ ಬ್ಲಾಕ್ ಈ ಕಿರಣಗಳನ್ನು ಹಿಮ್ಮೆಟ್ಟಿಸಿ, ಟೈರ್ ಗಟ್ಟಿಯಾಗಿರುವಂತೆ ನೋಡಿಕೊಳ್ಳುತ್ತದೆ.

4. ರಸ್ತೆಯ ಸವೆತ ತಡೆಯಲು ಮತ್ತು ಸುರಕ್ಷಿತ ಪ್ರಯಾಣಕ್ಕೆ

ಗುಂಡಿ ಬಿದ್ದ ರಸ್ತೆಗಳು, ಹಠಾತ್ ಬ್ರೇಕ್ ಮತ್ತು ವಾಹನದ ಸಂಪೂರ್ಣ ತೂಕವನ್ನು ಹೊರುವ ಶಕ್ತಿ ಟೈರ್‌ಗಳಿಗೆ ಇರಬೇಕು. ಕಾರ್ಬನ್ ಬ್ಲಾಕ್ ಟೈರ್‌ಗೆ ಅತ್ಯುತ್ತಮ ರೋಡ್ ಗ್ರಿಪ್ (Grip) ನೀಡಿ, ಜಾರದಂತೆ ನಿಯಂತ್ರಣ ನೀಡುತ್ತದೆ.

ಆಧುನಿಕ ಟೈರ್‌ಗಳು ತಂತ್ರಜ್ಞಾನದ ಅದ್ಭುತ

ಇಂದಿನ ಕಾಲದ ಟೈರ್‌ಗಳನ್ನು ಕೇವಲ ರಬ್ಬರ್ ಮತ್ತು ಕಾರ್ಬನ್ ಬ್ಲಾಕ್‌ನಿಂದ ಮಾತ್ರ ಮಾಡುತ್ತಿಲ್ಲ. ಇದರಲ್ಲಿ ಸಿಂಥೆಟಿಕ್ ರಬ್ಬರ್, ಸ್ಟೀಲ್ ವೈರ್‌ಗಳು, ಪಾಲಿಯೆಸ್ಟರ್ ನೂಲುಗಳು ಮತ್ತು ಸಿಲಿಕಾದಂತಹ ಹಲವು ಅತ್ಯಾಧುನಿಕ ವಸ್ತುಗಳನ್ನು ಬಳಸಿ ಸಂಪೂರ್ಣ ಸುರಕ್ಷಿತವಾಗಿ ತಯಾರಿಸಲಾಗುತ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೊಟ್ಟೆ 100% ಸಸ್ಯಾಹಾರಿಯೇ? ಮೊಟ್ಟೆ ತಿನ್ನುವವರು ಈ ಸತ್ಯ ತಿಳಿದಿರಲೇಬೇಕು
ಏಲಕ್ಕಿಯನ್ನು ಕುಂಡದಲ್ಲೇ ಸುಲಭವಾಗಿ ಬೆಳೆಯೋದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ