
ರಕ್ತ ಸಂಬಂಧದಲ್ಲಿಯೇ ಮದುವೆ ಮಾಡುವುದರಿಂದ ಉಂಟಾಗುವ ಅನಾಹುತಗಳ ಬಗ್ಗೆ ಹಲವು ದಶಕಗಳಿಂದ ವೈದ್ಯರು ಹೇಳುತ್ತಲೇ ಬಂದಿದ್ದಾರೆ. ಇದರ ಹೊರತಾಗಿಯೂ ಕೆಲವು ಕಡೆಗಳಲ್ಲಿ ತಾಯಿ ಮತ್ತು ತಂದೆಯ ಸಹೋದರ, ಸಹೋದರಿ ಹೀಗೆ ಮದುವೆಯಾಗುವುದು ನಡೆದೇ ಇದೆ. ಅಂಥವರಿಗೆ ಹುಟ್ಟುವ ಮಕ್ಕಳಲ್ಲಿ ಹಲವರು ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುತ್ತಲೂ ಇದ್ದಾರೆ. ತಂದೆ-ತಾಯಿಯ ಸಹೋದರ- ಸಹೋದರಿ ಮಾತು ಬಿಡಿ. ಇಲ್ಲೊಬ್ಬ ಅಜ್ಜ ತನ್ನ ಸ್ವಂತ ಮೊಮ್ಮಗಳನ್ನೇ ಮದುವೆಯಾಗಿದ್ದಾನೆ. ಇತ್ತೀಚಿನ ದಿನಗಳಲ್ಲಿ ವೃದ್ಧರನ್ನು ಚಿಕ್ಕ ವಯಸ್ಸಿನವರು ಮದುವೆಯಾಗುತ್ತಿರುವುದು ಸುದ್ದಿಯಾಗುತ್ತಲೇ ಇರುತ್ತದೆ. ದುಡ್ಡಿನ ಆಸೆಗೋ, ಆಸ್ತಿಗಾಗಿಯೋ ಅಥವಾ ಇನ್ನಾವುದೋ ಕಾರಣಕ್ಕೆ ಈ ಮದುವೆಗಳು ನಡೆಯುತ್ತವೆ. ಆದರೆ ಇಲ್ಲಿ ಈ ಅಜ್ಜ ತನ್ನ ಸ್ವಂತ ಮೊಮ್ಮಗಳನ್ನೇ ಮದುವೆಯಾಗುವ ಮೂಲಕ ಭಾರಿ ಸದ್ದು ಮಾಡುತ್ತಿದ್ದಾನೆ.
ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅವಳಿಗೆ ಈಗ 25 ವರ್ಷ ವಯಸ್ಸಾದರೆ, ಅಜ್ಜನಿಗೆ 70. ಅವಳು ಹುಟ್ಟುತ್ತಲೇ ನನಗೆ ಲವ್ ಆಗೋಗಿತ್ತು. ಅವಳನ್ನೇ ಮದುವೆಯಾಗುವುದು ಎಂದು ಡಿಸೈಡ್ ಮಾಡಿದ್ದೆ. ಈಗ ಅಲ್ಲಾನ ಕೃಪೆಯಿಂದ ಮದುವೆಯಾಗಿದ್ದೇನೆ ಎಂದು ಅಜ್ಜ ಹೇಳಿದ್ರೆ, ಇವರು ತುಂಬಾ ಒಳ್ಳೆಯ ಮನುಷ್ಯ. ತುಂಬಾ ಕೇರ್ ಮಾಡುತ್ತಾರೆ. ಅದಕ್ಕಾಗಿಯೇ ಬೇರೆಯವರ ಜೊತೆ ಮದುವೆಯಾಗುವ ಯೋಚನೆ ಮಾಡಲಿಲ್ಲ. ಅಜ್ಜನ ಜೊತೆನೇ ಮದುವೆಯಾದೆ. ಅಲ್ಲಾನ ದಯೆಯಿಂದ ಈ ಮದುವೆ ನೆರವೇರಿದೆ ಎಂದು ತುಂಬಾ ಖುಷಿಯಿಂದ ಯುವತಿ ಹೇಳಿಕೊಂಡಿದ್ದಾಳೆ.
ಇದರ ವಿಡಿಯೋ ವೈರಲ್ ಆಗುತ್ತಲೇ ಸಂಬಂಧಗಳ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಕೆಲವು ಕಡೆಗಳಲ್ಲಿ ಹೆಣ್ಣು ಎನ್ನುವುದು ಒಂದು ವಸ್ತು ಅಷ್ಟೇ. ಆಕೆ ಮಕ್ಕಳನ್ನು ಹೇರುವ ಯಂತ್ರ. ಗಂಡಸರಿಗೆ ತಮ್ಮ ಕಾಮದ ಆಸೆಯನ್ನು ನೆರವೇರಿಸಿಕೊಳ್ಳಲು ಚಿಕ್ಕವರು ಬೇಕು. ಅಂಥ ಸಂದರ್ಭಗಳಲ್ಲಿ ಈ ರೀತಿ ಆಗುತ್ತದೆ ಎಂದಿರುವ ನೆಟ್ಟಿಗರು, ಆ ಯುವತಿಯ ಮಾತನ್ನು ಕೇಳಿ ಆಕೆಗೆ ಚಿಕ್ಕಂದಿನಿಂದ ಅದೆಷ್ಟರ ಮಟ್ಟಿಗೆ ಬ್ರೇನ್ವಾಷ್ ಮಾಡಿರಬೇಕು ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ನಿಜವಾದ ಮನುಷ್ಯರು ಹೀಗೆ ಮಾಡಲು ಸಾಧ್ಯವಿಲ್ಲ, ಇದೇನೋ ಎಐ ವಿಡಿಯೋ ಇದ್ದಿರಬಹುದು ಎಂದೂ ಹೇಳುತ್ತಾರೆ.
ಈ ವಿಡಿಯೋದ ಅಸಲಿಯತ್ತು ಆ ದೇವರೇ ಬಲ್ಲ. ಆದರೆ ವಿಡಿಯೋ ಮಾತ್ರ ಸಕತ್ ವೈರಲ್ ಆಗುತ್ತಿದ್ದು, ಇಂಥ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ, ಇದೇನೂ ಹೊಸತಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಮತ್ತೆ ಕೆಲವರು ಈ ಕಣ್ಣಿನಿಂದ ಇನ್ನೇನೇನು ನೋಡಬೇಕೋ ಎಂದು ಹೇಳುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.