
ಕೆಲವರಿಗೆ ವಂಶವಾಹಿಯಿಂದಲೇ ಕೂದಲು ಉದುರುವಿಕೆ ಬಂದಿರುತ್ತೆ. ಅಪ್ಪ ಅಥವಾ ತಾತ, ಮುತ್ತಾತಂಗೆ ಸಮಸ್ಯೆ ಇದ್ದರೂ ಮೊಮ್ಮಗನಿಗೆ ತಲೆ ಬಾಲ್ಡಿಯಾಗಬಹುದು. ಹೆಣ್ಮಕ್ಕಳಿಗೆ ಕಳಪೆ ಗುಣಮಟ್ಟದ ಶ್ಯಾಂಪೂ, ಎಣ್ಣೆಗಳ ಕಾರಣಕ್ಕೆ ಕೂದಲು ಉದುರಬಹುದು. ಇಂದಿನ ಜೀವನ ಶೈಲಿಯಲ್ಲಿ ಸಾಮಾನ್ಯವಾಗಿರುವ ಒತ್ತಡ ಅರ್ಥಾತ್ ಸ್ಟ್ರೆಸ್ ಕೂಡ ಕೂದಲು ಉದುರುವಿಕೆಗೊಂದು ಕಾರಣ.
ತಲೆಯಲ್ಲಿ ಫಂಗಲ್ ಇನ್‌ಫೆಕ್ಷನ್ ಯಾಕಾಗುತ್ತೆ? ಹಾಗಾದಾಗ ಏನು ಮಾಡ್ಬೇಕು?
ಫಂಗಲ್ ಇನ್‌ಫೆಕ್ಷನ್ ಹೆಚ್ಚಾಗಿ ಹರಡೋದು ಇನ್ನೊಬ್ಬರ ಹೆಲ್ಮೆಟ್‌ನ್ನು ಧರಿಸೋದರಿಂದ! ಇದಲ್ಲದೇ ಅತಿಯಾದ ಧೂಳು ತಲೆಯಲ್ಲಿ ಸೇರಿಕೊಳ್ಳುವುದು, ಸರಿಯಾಗಿ ತಲೆ ಸ್ನಾನ ಮಾಡದಿರುವುದೂ ಇದಕ್ಕೆ ಕಾರಣ. ನಿಮಗೆ ಫಂಗಲ್ ಇನ್‌ಫೆಕ್ಷನ್ ಆಗಿದೆ ಅಂತ ಗೊತ್ತಾದ ಕೂಡಲೇ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ. ಇಲ್ಲವಾದರೆ ಅದು ತಲೆಯಿಡೀ ಹಬ್ಬುವ ಸಾಧ್ಯತೆ ಇರುತ್ತೆ.
ದಿನಕ್ಕೊಮ್ಮೆ ಶ್ಯಾಂಪೂ ಹಾಕಿ ತಲೆಸ್ನಾನ ಮಾಡಬಹುದಾ?
ಖಂಡಿತಾ, ಮಾಡಬೇಕು. ಉದ್ದ ಕೂದಲಿದ್ದವರಿಗೆ ಕೂದಲನ್ನು ಒಣಗಿಸಿಕೊಳ್ಳೋದೇ ಸಮಸ್ಯೆ. ಅದಕ್ಕೆ ಅಂಥವರು ಎರಡು ದಿನಕ್ಕೊಮ್ಮೆ ಶ್ಯಾಂಪೂ ಮಾಡ್ಕೊಳ್ಳಿ. ಕೂದಲನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕು. ಇಲ್ಲವಾದರೆ ಬೇರೆ ಸಮಸ್ಯೆಗಳು ಶುರುವಾಗುತ್ತವೆ. ಗಿಡ್ಡ ಕೂದಲಿದ್ದವರಿಗೆ ಇಂಥ ಸಮಸ್ಯೆ ಇರಲ್ಲ.
ಮೆಹೆಂದಿ ಅಥವಾ ಹೇರ್ ಡೈ ಹಚ್ಕೊಳ್ಳೋದು ಎಷ್ಟು ಸೇಫ್?
ಮೆಹೆಂದಿ ಸಂಪೂರ್ಣ ಆರ್ಗ್ಯಾನಿಕ್ ಆಗಿರುವ ಕಾರಣ ಅದರಿಂದ ಸೈಡ್ ಎಫೆಕ್ಟ್ಸ್ ಏನೂ ಇರಲ್ಲ. ಅದೇ ಹೇರ್‌ಡೈ ಹಚ್ಕೊಳ್ಳೋದು ಅಷ್ಟು ಸೇಫ್ ಅಲ್ಲ. ಯಾಕೆಂದರೆ ಕೂದಲ ಬಣ್ಣವನ್ನು ಸಹಜವಾಗಿ ಬಿಳಿಯಿಂದ ಕಪ್ಪಿಗೆ ಮಾರ್ಪಾಡಿಸುವುದು ವೈದ್ಯಕೀಯದಲ್ಲಿ ಇಲ್ಲವೇ ಇಲ್ಲ. ಆದರೂ ಇಂದಿನ ಲೈಫ್‌ಸ್ಟೈಲ್‌ನಲ್ಲಿ ಅದು ಅನಿವಾರ್ಯ ಆಗಿರೋ ಕಾರಣ ಹೇರ್‌ಡೈ ಮಾಡ್ಕೊಳ್ಳುವಾಗ ಗುಣ ಮಟ್ಟ ಇರುವ ಹೇರ್‌ಡೈಗಳನ್ನೇ ಬಳಸಿ. ಅಗ್ಗದ ಸಿಕ್ಕಾಪಟ್ಟೆ ಕೆಮಿಕಲ್ ಮಿಕ್ಸ್ ಇರುವ ಹೇರ್‌ಡೈ ಅಪಾಯಕಾರಿ.
ಕೂದಲಿನ ಸೀಳು ಅರ್ಥಾತ್ ಸ್ಪ್ಲಿಟ್‌ಎಂಡ್ಸ್‌ಗೆ ತುದಿ ಕತ್ತರಿಸೋದೇ ಪರಿಹಾರವಾ?
ಹೌದು, ಅದು ಸರಳ ಪರಿಹಾರ. ಸಾಮಾನ್ಯ ಸ್ಪ್ಲಿಟ್ ಎಂಡ್ಸ್ ಕೂದಲ ತುದಿಯಲ್ಲಿ ಬರುತ್ತೆ. ಹಾಗಾಗಿ ಬರೀ ತುದಿ ಕಟ್ ಮಾಡೋದು ಕಷ್ಟ ಅಲ್ಲ. ಕೂದಲಿಗೆ ಎಣ್ಣೆ ಹಾಕೋದು ಕಡಿಮೆ ಮಾಡಿದ್ರೆ ಈ ಸಮಸ್ಯೆ ಬರುತ್ತೆ. ಎಷ್ಟು ದಿನಕ್ಕೊಮ್ಮೆ ತಲೆಗೆ ಆಯಿಲ್ ಮಸಾಜ್ ಮಾಡಿದ್ರೆ ಬೆಸ್ಟು? ಎರಡು ದಿನಕ್ಕೊಮ್ಮೆ. ರಾತ್ರಿ ತಲೆಗೆ ಎಣ್ಣೆ ಹಚ್ಕೊಂಡು ಬೆಳಗ್ಗೆ ಹೇರ್‌ವಾಶ್ ಮಾಡಬೇಕು. ತಲೆಗೆ ಎಣ್ಣೆ ಹಾಕ್ಕೊಂಡು ಹಾಗೇ ಓಡಾಡಿದ್ರೆ ಧೂಳನ್ನ ಕೂದಲು ಬಹಳ ಬೇಗ ಹೀರಿ ಕೊಳ್ಳುತ್ತೆ. ಇದರಿಂದ ಕೂದಲು ಉದುರೋದು ಸೇರಿದಂತೆ ಅನೇಕ ಸಮಸ್ಯೆ ಬರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.