ನೊರೆ ನೊರೆ ಮೂತ್ರಕ್ಕೇನು ಕಾರಣ?

By Web Desk  |  First Published Aug 9, 2018, 5:14 PM IST

ಮೂತ್ರದ ಬಣ್ಣ, ಕ್ವಾಂಟಿಟಿ ಮತ್ತು ಇತರೆ ಅಂಶಗಳಿಂದ ನಮ್ಮ ಆರೋಗ್ಯ ಹೇಗಿದೆ ಎಂದು ತಿಳಿಯಬಹುದು. ಮೂತ್ರ ತಿಳಿಯಾಗಿರಬಹುದು. ಇಲ್ಲವೇ, ಕಂದು, ಹಳದಿ ಮತ್ತು ಕೆಂಪು ಬಣ್ಣವೂ ಆಗಬಹುದು. ನಮ್ಮ ದೇಹದಿಂದ ಹೊರ ಬರುವ ನೀರು ಮತ್ತು ಉಪ್ಪಿನಂಶದ ಮೇಲೆ ಈ ಮೂತ್ರದ ಬಣ್ಣ ಅವಲಂಬಿತವಾಗಿರುತ್ತದೆ.


ಅಷ್ಟಕ್ಕೂ ಮೂತ್ರದ ಬಣ್ಣ ಬದಲಾಗುವುದೇಕೆ?

  • ಸೇವಿಸುವ ಆಹಾರದಿಂದ.
  • ವಿಪರೀತ ಮಾತ್ರೆಗಳನ್ನು ಸೇವಿಸಿದರೆ.
  • ಮೂತ್ರ ಪಿಂಡದಲ್ಲಿ ಸೋಂಕಾದರೆ.
  • ಯೋನಿ ಸೋಂಕಾದರೆ.

ಈ ಬಣ್ಣದ ಅರ್ಥವೇನು?

  • ಮೂತ್ರ ಸ್ಪಷ್ಟವಾಗಿದ್ದರೆ, ದೇಹದಲ್ಲಿ ನೀರಿನಂಶ ಹೆಚ್ಚಿದ್ದು, ಲವಣಾಂಶ ಕಡಿಮೆ ಇದೆ ಎಂದರ್ಥ.
  • ಕಂದು ಬಣ್ಣ -  ಯಕೃತ್ತಿನಲ್ಲಿರುವ ಉಪ್ಪು, ಶುದ್ಧವಾಗಿ ರಕ್ತದ ಮೂಲಕ ಹೊರ ಹೋಗುತ್ತಿದೆ ಎಂದರ್ಥ. ಅಂದರೆ ಯಕೃತ್‌ ಸಮಸ್ಯೆಯಲ್ಲಿದೆ.
  • ಹಳದಿ - ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ ಎಂದಾದಲ್ಲಿ ಮೂತ್ರದ ಬಣ್ಣ ಹಳದಿಯಾಗುತ್ತದೆ.
  • ಕೆಂಪು - ಬೀಟ್ ರೂಟ್ ಮತ್ತು ನೇರಲೆ ಹಣ್ಣು ತಿನ್ನುವುದರಿಂದ ಮೂತ್ರದ ಬಣ್ಣ ಬದಲಾಗೋ ಸಾಧ್ಯತೆ ಇರುತ್ತದೆ. ಅಕಸ್ಮಾತ್ ಏನನ್ನೂ ತಿನ್ನದೆಯೂ ಈ ಬಣ್ಣ ಬಂದರೆ, ಸಮ್‌ಥಿಂಗ್ ವೆಂಟ್ ರಾಂಗ್ ಎಂದರ್ಥ. ಕೂಡಲೇ ಅಲರ್ಟ್ ಆಗಬೇಕು.

Tap to resize

Latest Videos

ನೊರೆ ಬರಲೇನು ಕಾರಣ?

  • ಆತಂಕ ಹೆಚ್ಚಾದಾಗ ಮೂತ್ರದಲ್ಲಿ ಪ್ರೋಟಿನ್ ಆಂಶ ಹೆಚ್ಚಾಗಿ, ಮೂತ್ರದಲ್ಲಿ ನೊರೆ ಹಾಗೂ ವಾಸನೆ ಉಂಟಾಗುತ್ತದೆ.
  • ದೇಹ ನಿರ್ಜಲೀಕರಣವಾದಾಗಲೂ ಹೀಗಾಗಬಹುದು.
  • ಮೂತ್ರ ಲೂಪ್ಸ್ ಎಂದರೆ ಮೂತ್ರದಲ್ಲಿ ನೊರೆ ಉಂಟಾದಾಗ ನಮ್ಮ ದೇಹದ ಭಾಗವಾದ ಚರ್ಮ, ಸ್ತನ, ಮೂತ್ರಪಿಂಡ  ಮತ್ತು ಹೃದಯದಲ್ಲಿ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
  • ತಾಯಿ ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ನ ಬದಲಾವಣೆಯಾದಾಗಲೂ ಮೂತ್ರ ನೊರೆಯಾಗುತ್ತದೆ.
  • ಮೂತ್ರನಾಳದ ಸೋಂಕಿದ್ದಾಗಲೂ ಇದು ಕಾಣಿಸಿಕೊಳ್ಳಬಹುದು.
click me!