
Fountain Idea: ಮನೆ ಕಟ್ಟುವಾಗ ಅಥವಾ ರಿಪೇರಿ ಮಾಡುವಾಗ ಟೈಲ್ಸ್, ಮಾರ್ಬಲ್ ಅಥವಾ ಸೆರಾಮಿಕ್ ತುಂಡುಗಳು ಉಳಿಯುವುದು ಕಾಮನ್. ಇವು ವೇಸ್ಟ್ ಅಂತಾ ಹೆಚ್ಚಿನವರು ಬಿಸಾಡುತ್ತಾರೆ. ಆದರೆ, ಇದೇ ಒಡೆದ ಟೈಲ್ಸ್ ತುಂಡುಗಳಿಂದ ನೀವು ಒಂದು ಸುಂದರವಾದ ಫೌಂಟೇನ್ (ಕಾರಂಜಿ) ಮಾಡಬಹುದು. ಈ DIY ಐಡಿಯಾ ನಿಮ್ಮ ಗಾರ್ಡನ್, ಬಾಲ್ಕನಿ, ಅಂಗಳ ಅಥವಾ ಮನೆಯ ಎಂಟ್ರೆನ್ಸ್‌ಗೆ ಒಂದು ಸ್ಟೈಲಿಶ್ ಮತ್ತು ಲಕ್ಷುರಿ ಲುಕ್ ಕೊಡುತ್ತದೆ. ಅಷ್ಟೇ ಅಲ್ಲ, ಇದು ಕಡಿಮೆ ಖರ್ಚಿನಲ್ಲಿ ಆಗುವುದರಿಂದ ನಿಮ್ಮ ಜೇಬಿಗೂ ಹೊರೆಯಾಗಲ್ಲ. ನೋಡೋಕೆ ಯಾವುದೇ ದುಬಾರಿ ಗಾರ್ಡನ್ ಡೆಕೋರ್‌ಗಿಂತ ಕಡಿಮೆ ಏನೂ ಕಾಣಿಸಲ್ಲ.
ಬ್ರೋಕನ್ ಟೈಲ್ ಫೌಂಟೇನ್ ಮಾಡಲು, ಮೊದಲು ಒಂದು ದೊಡ್ಡ ಪಾಟ್, ಸಿಮೆಂಟ್ ಟಬ್, ಹಳೆ ಪ್ಲಾಂಟರ್ ಅಥವಾ ಅಗಲವಾದ ಬೌಲ್ ತೆಗೆದುಕೊಳ್ಳಿ. ಇದೇ ನಿಮ್ಮ ಫೌಂಟೇನ್‌ನ ಬೇಸ್ ಆಗಿರುತ್ತದೆ. ಇದರಲ್ಲಿ ನೀರು ತುಂಬಿಸಲು ಮತ್ತು ಒಂದು ಸಣ್ಣ ಮೋಟಾರ್ ಇಡಲು ಸಾಕಷ್ಟು ಜಾಗ ಇರಬೇಕು ಅನ್ನೋದನ್ನು ಗಮನದಲ್ಲಿಡಿ.
ಇದನ್ನೂ ಓದಿ- ಫ್ರಿಡ್ಜ್‌ನಲ್ಲಿ ಒಂದು ಬಟ್ಟಲು ಉಪ್ಪನ್ನ ಏಕಿಡಬೇಕು? ಹಿರಿಯರು ಹೇಳಿದ ಈ ಟ್ರಿಕ್ ಸಾವಿರಾರು ರೂಪಾಯಿ ಉಳಿಸುತ್ತೆ!
ಈಗ, ಉಳಿದಿರೋ ಟೈಲ್ಸ್, ಹಳೆ ಕಪ್, ಪ್ಲೇಟ್ ಅಥವಾ ಸೆರಾಮಿಕ್ ತುಂಡುಗಳನ್ನು ಸುತ್ತಿಗೆಯಿಂದ ಸಣ್ಣ ಸಣ್ಣ ಪೀಸ್ ಮಾಡಿ. ಈ ಸಣ್ಣ ತುಂಡುಗಳು ಮೊಸಾಯಿಕ್ ಡಿಸೈನ್‌ಗೆ ಪರ್ಫೆಕ್ಟ್ ಆಗಿರುತ್ತವೆ. ತುಂಡುಗಳು ತುಂಬಾ ಚೂಪಾಗಿದ್ದರೆ, ಕೈಗೆ ತಾಗದಂತೆ ಅದರ ಅಂಚುಗಳನ್ನು ಸ್ವಲ್ಪ ಉಜ್ಜಿ ನಯವಾಗಿಸಿ. ನಂತರ, ಪಾಟ್ ಅಥವಾ ಬೇಸ್‌ನ ಹೊರಭಾಗಕ್ಕೆ ಟೈಲ್ ಅಂಟಿಸೋ ಗಮ್ ಅಥವಾ ಸಿಮೆಂಟ್ ಹಚ್ಚಿ, ಈ ಒಡೆದ ಟೈಲ್ಸ್ ತುಂಡುಗಳನ್ನು ಒಂದೊಂದಾಗಿ ಅಂಟಿಸುತ್ತಾ ಬನ್ನಿ. ನೀವು ಹೂವು, ಎಲೆ, ಜಿಯೋಮೆಟ್ರಿಕ್ ಅಥವಾ ಬಣ್ಣಬಣ್ಣದ ಮೊಸಾಯಿಕ್ ಪ್ಯಾಟರ್ನ್ ರಚಿಸಬಹುದು. ಇನ್ನೂ ಚೆನ್ನಾಗಿ ಕಾಣಲು ಪಾಟ್‌ನ ಒಳಗೆ ಮತ್ತು ಹೊರಗೆ, ಎರಡೂ ಕಡೆ ಟೈಲ್ಸ್ ಅಂಟಿಸಿ.
ಟೈಲ್ಸ್ ಚೆನ್ನಾಗಿ ಒಣಗಿದ ಮೇಲೆ, ಅವುಗಳ ನಡುವಿನ ಖಾಲಿ ಜಾಗಕ್ಕೆ ಗ್ರೌಟ್ ತುಂಬಿ. ಇದರಿಂದ ಫೌಂಟೇನ್‌ನ ಫಿನಿಶಿಂಗ್ ನೀಟಾಗಿ, ಸುಂದರವಾಗಿ ಮತ್ತು ಪ್ರೊಫೆಷನಲ್ ಆಗಿ ಕಾಣುತ್ತದೆ. ಈಗ ಫೌಂಟೇನ್ ಬೇಸ್ ಒಳಗೆ ಒಂದು ಸಣ್ಣ ಸಬ್‌ಮರ್ಸಿಬಲ್ ಮೋಟಾರ್ ಇಡಿ. ಮೋಟಾರ್‌ಗೆ ಪೈಪ್ ಜೋಡಿಸಿ ಮತ್ತು ಪೈಪನ್ನು ಮೇಲಕ್ಕೆ ತನ್ನಿ. ಪೈಪ್ ತುದಿಯಲ್ಲಿ ಕಲ್ಲುಗಳು, ಸಣ್ಣ ಪಾಟ್ ಅಥವಾ ಯಾವುದಾದರೂ ಶೋಪೀಸ್ ಇಟ್ಟರೆ, ನೀರು ಅದರ ಮೇಲಿಂದ ಹರಿದು ಬರುವಾಗ ನೋಡಲು ಇನ್ನಷ್ಟು ಸುಂದರವಾಗಿ ಕಾಣುತ್ತದೆ.
ಈ ಸುಂದರವಾದ ಬ್ರೋಕನ್ ಟೈಲ್ ಫೌಂಟೇನ್ ಅನ್ನು ನೀವು ಗಾರ್ಡನ್‌ನ ಮೂಲೆ, ಬಾಲ್ಕನಿ, ಅಂಗಳ, ಮನೆಯ ಎಂಟ್ರೆನ್ಸ್ ಅಥವಾ ಇಂಡೋರ್ ಪ್ಲಾಂಟರ್ ಪಕ್ಕ ಇಡಬಹುದು. ಇದು ಎಲ್ಲಾ ಕಡೆ ತುಂಬಾ ಚೆನ್ನಾಗಿ ಕಾಣುತ್ತದೆ ಮತ್ತು ನಿಮ್ಮ ಜಾಗಕ್ಕೆ ಒಂದು ರಾಯಲ್ ಲುಕ್ ಕೊಡುತ್ತದೆ. ಒಟ್ಟಿನಲ್ಲಿ, ಈ ಟೈಲ್ ಫೌಂಟೇನ್ ಕಡಿಮೆ ಖರ್ಚಿನ, ಪರಿಸರ ಸ್ನೇಹಿ ಮತ್ತು ಸ್ಟೈಲಿಶ್ ಆದ ಹೋಮ್ ಡೆಕೋರ್ ಐಡಿಯಾ ಆಗಿದೆ. ಇದು ವೇಸ್ಟ್ ಎಂದು ಬಿಸಾಡುವ ಟೈಲ್ಸ್ ತುಂಡುಗಳನ್ನು ಒಂದು ಲಕ್ಷುರಿ ಡೆಕೋರ್ ವಸ್ತುವಾಗಿ ಬದಲಾಯಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.