
ಅಮೆರಿಕಾ (America) ಅಂದ್ರೆ ಕಮ್ಮಿನಾ? ಮಕ್ಕಳು ಅಮೆರಿಕಾದಲ್ಲಿದ್ರೆ ಸೇಫ್. ಮಗಳಿಗೆ ಅಮೆರಿಕಾ ಹುಡುಗನನ್ನು ಹುಡುಕ್ತಿದ್ದೇವೆ. ಕೈತುಂಬಾ ಸಂಬಳ, ಸೇಫ್ಟಿ ಎಲ್ಲ ಮುಖ್ಯ ಅಲ್ವಾ ಎನ್ನುತ್ತಿದ್ದ ಪಾಲಕರು ಈಗ ತಮ್ಮ ವರಸೆ ಬದಲಿಸಿದ್ದಾರೆ. ಅಮೆರಿಕಾ ಬೇಡ, ಬೇರೆ ಎನ್ ಆರ್ ಐ ನೋಡೋಣ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಟ್ರಂಪ್ ಸಿಡಿಸಿದ ಬಾಂಬ್. ಟ್ರಂಪ್, ಎಚ್ 1 ಬಿ ವೀಸಾ ಬೆಲೆ ಏರಿಕೆ ಘೋಷಣೆ ಆಗ್ತಿದ್ದಂತೆ ಜನರ ಅಭಿಪ್ರಾಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ.
ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಎಚ್ 1 ಬಿ ವೀಸಾದಲ್ಲಿ ಬದಲಾವಣೆ ಮಾಡಿದ್ದಾರೆ. ಎಚ್ 1 ಬಿ ವೀಸಾ, ಅಮೆರಿಕದಲ್ಲಿ ಅನಿವಾಸಿ ವೀಸಾ ಆಗಿದೆ. ಅಮೆರಿಕದಲ್ಲಿ ಕಂಪನಿಗಳು ತಂತ್ರಜ್ಞಾನ, ಎಂಜಿನಿಯರಿಂಗ್, ಔಷಧ, ಹಣಕಾಸು ಮತ್ತು ಶಿಕ್ಷಣದಂತಹ ನಿರ್ದಿಷ್ಟ ವಲಯಗಳಲ್ಲಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡುತ್ತದೆ. ಟ್ರಂಪ್ ಹೊಸ ನಿಯಮದ ಪ್ರಕಾರ, ಅಮೆರಿಕಾ ಕಂಪನಿಗಳು ವಿದೇಶಿ ಉದ್ಯೋಗಿಯ ಪ್ರವೇಶ ಅಥವಾ ಮರು-ಪ್ರವೇಶಕ್ಕಾಗಿ ಪ್ರತಿ H-1B ಅರ್ಜಿಗೆ 100,000 ಡಾಲರ್ ಅಂದ್ರೆ ಸುಮಾರು 88.10 ಲಕ್ಷ ಶುಲ್ಕ ತೆರಬೇಕಾಗಿದೆ. ಈ ನಿರ್ಧಾರವು ಭಾರತಕ್ಕೆ ದೊಡ್ಡ ಹೊಡೆತ ನೀಡಿದೆ. ಯಾಕೆಂದೆ ಅಮೆರಿಕಾದಲ್ಲಿ ಅತಿ ಹೆಚ್ಚು H-1B ವೀಸಾ ಹೊಂದಿರುವವರು ಭಾರತೀಯರು. ಈ ಸಂಖ್ಯೆ ಆಗಾಗ ಬದಲಾಗ್ತಿರುತ್ತದೆ. ವರದ ಒಂದರ ಪ್ರಕಾರ FY24 ರಲ್ಲಿ ಅನುಮೋದಿಸಲಾದ ಒಟ್ಟು H-1B ವೀಸಾ ಫಲಾನುಭವಿಗಳಲ್ಲಿ ಶೇಕಡಾ 71 ರಷ್ಟು ಭಾರತೀಯರು.
ಎಮ್ಮೆಗಳಿಗೆ ಸೌಂದರ್ಯ ಸ್ಪರ್ಧೆ ಏರ್ಪಡಿಸಿದ ಥೈಲ್ಯಾಂಡ್: ಇದಕ್ಕೂ ಕರಾವಳಿಯ ಕಂಬಳಕ್ಕೂ ಇದೆ ಸಾಮ್ಯತೆ
ವೀಸಾ ಶುಲ್ಕ ಹೆಚ್ಚಳ ಆರಂಭದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ಆದ್ರೆ ಈ ನಿಯಮದ ಬಗ್ಗೆ ವೈಟ್ ಹೌಸ್ ಸ್ಪಷ್ಟನೆ ನೀಡಿದೆ. ಈ ಶುಲ್ಕ ಏರಿಕೆ ಹೊಸ ಅರ್ಜಿಗಳಿಗೆ ಮಾತ್ರ ಅನ್ವಯಿಸಲಿದೆ, ಈಗಾಗಲೇ ವೀಸಾ ಹೊಂದಿರುವ ಅಥವಾ ವೀಸಾ ನವೀಕರಣಗಳಿಗೆ ಅಲ್ಲ ಎಂದಿದೆ.
ವೀಸಾ ಬಗ್ಗೆ ಟ್ರಂಪ್ ಅದೇನೇ ಸ್ಪಷ್ಟನೆ ನೀಡಿದ್ರೂ ಭಾರತೀಯರ ಮನಸ್ಥಿತಿ ಬದಲಾಗ್ತಿದೆ. ಈ ಹಿಂದೆ ಅಮೆರಿಕಾ ಅತ್ಯಂತ ಸುರಕ್ಷಿತ ದೇಶವೆಂದೇ ಜನರು ಭಾವಿಸಿದ್ರು. ಇದೇ ಕಾರಣಕ್ಕೆ ಬಹುತೇಕ ಪಾಲಕರು, ಎನ್ ಆರ್ ಐ ವರನ ಹುಡುಕಾಟ ನಡೆಸುವಾಗ ಅಮೆರಿಕಾಕ್ಕೆ ಮೊದಲ ಆದ್ಯತೆ ನೀಡ್ತಾ ಇದ್ರು. ವೀಸಾ ಬೆಲೆ ಏರಿಕೆ ನಂತ್ರ ಜನರು ನಿರ್ಧಾರ ಬದಲಿಸಿದ್ದಾರೆ. ಆದ್ರೆ ಇದ್ರ ಬಗ್ಗೆ ಯಾವ್ದೆ ಸ್ಪಷ್ಟತೆ ಅಂಕಿ ಅಂಶವಿಲ್ಲ. ಓದು ಮುಗಿಸಿ ಅಮೆರಿಕಾದಲ್ಲಿ ಸೆಲಟ್ ಆಗ್ಬೇಕು ಅಂದ್ಕೊಂಡಿದ್ದ ಅನೇಕ ಹುಡುಗಿಯರು ವೀಸಾ ಬೆಲೆ ಏರಿಕೆ ನಂತ್ರ ತಮ್ಮ ತೀರ್ಮಾನ ಬದಲಿಸಿರೋದಾಗಿ ಹೇಳಿಕೊಂಡಿದ್ದಾರೆ.
ಚೀನಾದಲ್ಲಿ ಡ್ರೋನ್ ಚಾಲಿತ ಸುಡ್ಡುಮದ್ದು ಪ್ರದರ್ಶನದಲ್ಲಿ ಎಡವಟ್ಟು: ಪ್ರೇಕ್ಷಕರ ಮೇಲೆ ಬೆಂಕಿಮಳೆ
ಟ್ರಂಪ್ ವೀಸಾದಿಂದ ನಮ್ಮ ಅಮೆರಿಕಾ ಕನಸಿಗೆ ಬ್ರೇಕ್ ಬಿದ್ದಿದೆ ಎಂದು ಹರ್ಯಾಣ ಮೆಡಿಕಲ್ ಸ್ಟುಡೆಂಟ್ ಒಬ್ಬರು ಹೇಳಿದ್ದಾರೆ. ಟ್ರಂಪ್ ಬದಲಾವಣೆ ನಂತ್ರ ಮ್ಯಾರೇಜ್ ಬ್ರೋಕರ್ಸ್ ಕೂಡ ತಮ್ಮ ರೂಲ್ಸ್ ನಲ್ಲಿ ಬದಲಾವಣೆ ಮಾಡ್ಕೊಂಡಿದ್ದಾರೆ. ಪ್ರೀಮಿಯಂ ಮ್ಯಾಚ್ಮೇಕಿಂಗ್ ಅಪ್ಲಿಕೇಶನ್ ನಾಟ್.ಡೇಟಿಂಗ್ ಇತ್ತೀಚೆಗೆ ಯುಎಸ್ ವೀಸಾ ಫಿಲ್ಟರ್ ಫೀಚರ್ ಶುರು ಮಾಡಿದೆ. ಕುಟುಂಬಗಳು ವೀಸಾ ಸ್ಥಿತಿಯ ಆಧಾರದ ಮೇಲೆ ಸಂಭಾವ್ಯ ಎನ್ ಆರ್ ಐ ಪಾಲುದಾರರನ್ನು ಪರಿಶೀಲಿಸಬಹುದು. ಆ ನಂತ್ರ ಮಾತುಕತೆ ಮುಂದುವರಿಸ್ಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.