ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಶೋಷಣೆ ಪ್ರಕರಣಗಳು ಏರುಗತಿಯಲ್ಲೇ ಸಾಗಿರುವುದು ದೇಶದ ಮತ್ತು ಮಾನವ ಕುಲದ ದುರ್ದೈವ. ಇಲ್ಲೊಬ್ಬರು ಲೇಡಿ ಐಪಿಎಸ್ ಆಫಿಸರ್ ಕಾಮಾಂಧರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದ್ದಾರೆ. ಅವರು ಹೇಗೆ ತರಬೇತಿ ನೀಡಿದ್ದಾರೆ ಎಂಬುದನ್ನು ನೋಡಿಕೊಂಡು ಬನ್ನಿ...
ನವದೆಹಲಿ[ಜೂ. 20] ಕಾಮಾಂಧರಿಂದ ಹೇಗೆ ರಕ್ಷಣೆ ಪಡೆದುಕೊಂಡು ಅವರಿಗೆ ಯಾವ ರೀತಿ ಬುದ್ಧಿ ಕಲಿಸಬೇಕು ಎಂಬುದನ್ನು ಈ ಮಹಿಳಾ ಐಪಿಎಸ್ ಅಧಿಕಾರಿ ವಿದ್ಯಾರ್ಥಿನಿಯರಿಗೆ ಪ್ರಾತಕ್ಷಿಕೆ ಮೂಲಕ ತಿಳಿಸಿಕೊಟ್ಟಿದ್ದಾರೆ.
ಶಾಲೆ, ಕಾಲೇಜು, ಕೆಲಸದ ಸ್ಥಳ , ರಸ್ತೆ ಇನ್ನು ಮುಂತಾದ ಕಡೆ ಕಾಮಾಂಧರಿಂದ ಅಪಾಯ ಎದುರಾದಾಗ ಏನು ಮಾಡಬೇಕು ಎಂಬುದನ್ನು ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.
undefined
ಕಾಮಾಂಧರಿಂದ ರಕ್ಷಣೆ ಪಡೆದುಕೊಳ್ಳಲು ಅನೇಕ ಸಾಧನಗಳು ಮಾರುಕಟ್ಟೆಗೆ ಬಂದಿವೆ. ಆದರೆ ಅವೆಲ್ಲವೂ ತುಂಬಾ ದುಬಾರಿ. ಹಾಗಾದರೆ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ರಕ್ಷಣಾ ಕವಚವೊಂದನ್ನು ನಿರ್ಮಾಣ ಮಾಡಿಕೊಳ್ಳಬಹುದಲ್ಲವೇ?
ಮೆಣಸಿನ ಪುಡಿ, ಕಾಳು ಮೆಣಸಿನ ಪುಡಿ, ರಿಫೈಂಡ್ ಆಯಿಲ್ ಬಳಸಿ ಸ್ಪ್ರೇ ಒಂದನ್ನು ಸಿದ್ಧ ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೈದರಾಬಾದ್ ನ ಮಹಿಳಾ ಅಧಿಕಾರಿಯೊಬ್ಬರು ಹಾಡುಗಳ ಮುಖಾಂತರವೂ ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ.