Bengaluru: ಥಿಯೇಟರ್‌ನಲ್ಲಿ ‘ವರ್ಕ್‌ ಫ್ರಂ ಹೋಮ್‌’ ಮಾಡ್ತಿರೋ ಭೂಪ: ಐಟಿ ಸಿಟಿಯಲ್ಲಿ ಮಾತ್ರ ಸಾಧ್ಯ ಅಂತಾರೆ ನೆಟ್ಟಿಗರು!

By BK Ashwin  |  First Published Apr 27, 2023, 3:07 PM IST

ಬೆಂಗಳೂರಿನ ಈ ವ್ಯಕ್ತಿ ಥಿಯೇಟರ್‌ನಲ್ಲಿ ಇರುವಾಗ ತನ್ನ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವುದನ್ನು ಸೆರೆ ಹಿಡಿಯಲಾಗಿದೆ. ಈ ವಿಡಿಯೋ ವೈರಲ್‌ ಆಗಿದೆ. 


ಬೆಂಗಳೂರು (ಏಪ್ರಿಲ್ 27, 2023): ಕಳೆದ 3 ವರ್ಷಗಳಿಂದ ಕೋವಿಡ್ - 19 ಬಂದಾಗಿನಿಂದ ಹಲವರಿಗೆ ವರ್ಕ್‌ ಫ್ರಂ ಹೋಮ್‌ ಮುಂದುವರಿದಿದೆ. ಈ ಹಿನ್ನೆಲೆ ಕೆಲವರು ಬಾಸ್‌ ಕಿರಿಕಿರಿ ಇಲ್ಲದೆ ತಮಗೆ ಇಷ್ಟ ಬಂದ ಸಮಯದಲ್ಲಿ ಕೆಲಸ ಮಾಡ್ತಿರುತ್ತಾರೆ. ಮಿಕ್ಕಿದ ಟೈಮಲ್ಲಿ ಆರಾಮಾಗಿ ಓಡಾಡ್ತಾ ಇರ್ತಾರೆ. ಆದರೆ, ಹಲವರು ಕೆಲಸವನ್ನು ತುಂಬಾ ಸೀರಿಯಸ್ಸಾಗೇ ತಗೊಂಡಿರ್ತಾರೆ. ಅದು ಯಾವ ಹಂತಕ್ಕೆ ಅಂತೀರಾ..? ಅದಕ್ಕೆ ಈ ಕೆಳಗಿನ ಸ್ಟೋರಿ ನೋಡಿ..

ಬೆಂಗಳೂರಿನ ಈ ವ್ಯಕ್ತಿ ಥಿಯೇಟರ್‌ನಲ್ಲಿ ಇರುವಾಗ ತನ್ನ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವುದನ್ನು ಸೆರೆ ಹಿಡಿಯಲಾಗಿದೆ. ಹೌದು, ಸಿನಿಮಾ ನೋಡುವ ಟೈಮಲ್ಲೂ ಕೆಲಸ ಮಾಡ್ತಿದ್ದಾನೆ! ಐಟಿ ಹಬ್‌, ಐಟಿ ರಾಜಧಾನಿ, ಸಿಲಿಕಾನ್ ವ್ಯಾಲಿ - ಹೀಗೆ ನಾನಾ ಹೆಸರುಗಳಿಂದ ಬೆಂಗಳೂರಲ್ಲಿ ಕರೆಯಲಾಗುತ್ತದೆ. ಈ ಹಿನ್ನೆಲೆ ರಾಜ್ಯ ರಾಜಧಾನಿಯಲ್ಲಿ ಅನೇಕ ಸ್ಟಾರ್ಟಪ್‌ಗಳಿಗೆ ಹಾಗೂ ಐಟಿ ಕಂಪನಿಗಳಿಗೆ ನೆಲೆಯಾಗಿದೆ. ಅನೇಕರಿಗೆ ವರ್ಕ್‌ ಫ್ರಂ ಹೋಮ್‌ ಈಗಲೂ ಮುಂದುವರಿದಿದೆ.

Tap to resize

Latest Videos

ಇದನ್ನು ಓದಿ: ಬೆಂಗಳೂರಿನಲ್ಲಿ ಬ್ಯಾಚುಲರ್ ಬಿಟ್ಟು ಹೋದ ಫ್ಲಾಟ್ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ನೋಡಿ!

ಈ ಹಿನ್ನೆಲೆ, ಈ ವ್ಯಕ್ತಿಯ ವರ್ತನೆಗಳನ್ನು ಬೆಂಗಳೂರಿನ ಅನೇಕ ವೃತ್ತಿಪರರು ಅಚ್ಚರಿ ಏನಲ್ಲ ಎಂದು ಪರಿಗಣಿಸಿದ್ದಾರೆ. ಇನ್ನು, ಅನೇಕರು ಆತನಿಗೆ ಟ್ರೋಲ್‌ ಮಾಡಿದ್ದಾರೆ. ಒಟ್ಟಾರೆ, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. "ನೀವು ಬೆಂಗಳೂರಿನಲ್ಲಿ ಇದ್ದೀರಿ ಎಂದು ಹೇಳದೆ ಬೆಂಗಳೂರಿನಲ್ಲಿ ಇದ್ದೀರಿ ಎಂದು ಹೇಳಿ" ಎಂದು ಈ ವೈರಲ್ ವಿಡಿಯೋಗೆ ನೀಡಿರುವ ಟೆಕ್ಷ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ.

ಸಿನಿಮಾ ಥಿಯೇಟರ್‌ನಲ್ಲಿ ಕತ್ತಲಿರುತ್ತದ ಅಲ್ವೇ.. ಈ ಡಾರ್ಕ್‌ ಹಾಲ್‌ನಲ್ಲಿ ಆತ ಥಿಯೇಟರ್‌ನಲ್ಲಿ ಜಾಹೀರಾತು ಬರುತ್ತಿರುವಾಗ ಲ್ಯಾಪ್‌ಟಾಪ್‌ನಲ್ಲಿ ಕೆಲಸದಲ್ಲಿ ಬ್ಯುಸಿಯಾಗಿರುತ್ತಾನೆ. ಡಾರ್ಕ್ ಹಾಲ್‌ನಲ್ಲಿರುವ ವ್ಯಕ್ತಿಗೆ ಕ್ಯಾಮರಾ ಪ್ಯಾನ್ ಮಾಡುವ ಮೊದಲು ಥಿಯೇಟರ್ ಪರದೆಯ ಮೇಲೆ ಪ್ಲೇ ಆಗುವ ಜಾಹೀರಾತಿನೊಂದಿಗೆ ಈ ವಿಡಿಯೋ ಕ್ಲಿಪ್‌ ಓಪನ್‌ ಆಗುತ್ತದೆ. ನಂತರ ಆ ವ್ಯಕ್ತಿಯು ತನ್ನ ಸೀಟ್‌ನಲ್ಲಿ ಲ್ಯಾಪ್‌ಟಾಪ್‌ ಆನ್‌ ಮಾಡಿದ್ದು, ಅದರ ಪರದೆಯ ಬೆಳಕಿನಿಂದ ಪ್ರಕಾಶಿಸಲ್ಪಟ್ಟಿದೆ ಮತ್ತು ಜನರು ಥಿಯೇಟರ್‌ ಸ್ಕ್ರೀನ್‌ ನೋಡುತ್ತಿರುವಾಗ ಆತ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾನೆ.

ಇದನ್ನೂ ಓದಿ: ಬೆಂಗಳೂರು ನಿವಾಸಿಗಳೇ ಎಚ್ಚರ!: ಅಂಜನಾಪುರದಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಪತ್ತೆ!

ಇನ್ನು, "ನೀವು ಎಲ್ಲವನ್ನೂ ನೋಡಿದ್ದೀರಿ ಎಂದು ನೀವು ಭಾವಿಸಿದಾಗ, ಬೆಂಗಳೂರಿಗೆ ಹೊಸತೊಂದು ಸಿಕ್ಕಿದೆ" ಎಂದು ವೈರಲ್ ವಿಡಿಯೋದ ಕ್ಯಾಪ್ಷನ್‌ ಹೇಳುತ್ತದೆ. ಇನ್ನು, ಈ ವಿಡಿಯೋ ಸಾಕಷ್ಟು ವೀಕ್ಷಣೆ ಹಾಗೂ ಲೈಕ್ಸ್‌ ಸಿಗುತ್ತಿದ್ದು, ಕಾಮೆಂಟ್‌ ವಿಭಾಗದಲ್ಲಿ ಅನೇಕ ಆನ್‌ಲೈನ್‌ ಬಳಕೆದಾರರು ನಾನಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

 ರಸ್ತೆಯಲ್ಲಿ ಹೋಗುತ್ತಿರುವಾಗ ಅಥವಾ ಪ್ರಯಾಣಿಸುತ್ತಿರುವಾಗ ಕೆಲಸ ಮಾಡುವ ವೃತ್ತಿಪರರನ್ನು ಬೆಂಗಳೂರು ನಗರದಲ್ಲಿ ಪತ್ತೆಹಚ್ಚಬಹುದು ಎಂದು ಅನೇಕರು ಹೇಳಿದ್ದಾರೆ.

ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

."ಪ್ರತಿಯೊಬ್ಬ ಟೆಕ್ಕಿಯು ನನ್ನ ಅನುಮತಿಯಿಲ್ಲದೆ ನನ್ನ ವಿಡಿಯೋವನ್ನು ಸೆರೆಹಿಡಿದವರಂತೆ ಇರುತ್ತಾರೆ" ಎಂದು ಒಬ್ಬ ಬಳಕೆದಾರ ತಮಾಷೆ ಮಾಡಿದ್ದಾರೆ, "ಅವನು ಕೇವಲ 'ಮನೆಯಿಂದ ಕೆಲಸ ಮಾಡುತ್ತಿದ್ದಾನೆ' ಮತ್ತು ಲಾಗ್ ಇನ್ ಆಗಿದ್ದಾನೆ" ಎಂದು ಇನ್ನು ಕೆಲವರು ಹೇಳಿದ್ದಾರೆ. ಮತ್ತೊಬ್ಬರು ಹೇಳಿಕೊಂಡಿದ್ದಾರೆ, “ನೀವು ರಸ್ತೆಗಳಲ್ಲಿ ಲ್ಯಾಪ್‌ಟಾಪ್ ಹೊಂದಿರುವ ಬಹುತೇಕ ಎಲ್ಲರನ್ನೂ ನೋಡುತ್ತೀರಿ. ನಮ್ಮ ಬೆಂಗಳೂರು." ಎಂದೂ ಕೆಲವರು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರ "ಡೆಡ್‌ಲೈನ್ ಹತ್ತಿರದಲ್ಲಿರಬೇಕು’’ ಎಂದೂ ಕಾಮೆಂಟ್‌ ಮಾಡಿದ್ದಾರೆ.  

ಇನ್ನು ಕೆಲವರು, ಈ ವ್ಯಕ್ತಿಯು ಥಿಯೇಟರ್‌ನಲ್ಲಿ ಲ್ಯಾಪ್‌ಟಾಪ್ ಬಳಸಿದ್ದಕ್ಕಾಗಿ ಆತನನ್ನು ಟೀಕಿಸಿದ್ದಾರೆ. “ಚಿತ್ರ ಪ್ರದರ್ಶನದ ಸಮಯದಲ್ಲಿ ಅವನು ಕೆಲಸ ಮಾಡಲಿಲ್ಲ ಎಂದು ಭಾವಿಸುತ್ತೇನೆ. ಚಿತ್ರದ ಸಮಯದಲ್ಲಿ ಮುಂದೆ ಕೂತಿರೋ ವ್ಯಕ್ತಿ ಮೊಬೈಲ್ ಬಳಸುತ್ತಿದ್ದರೂ ಅದು ಕೆಟ್ಟದು. ಬಹಳಷ್ಟು ವಿಚಲಿತಗೊಳಿಸುತ್ತದೆ’’ ಎಂದಿದ್ದಾರೆ. ಮತ್ತೊಬ್ಬರು ಅವರಿಗೆ ಲ್ಯಾಪ್‌ಟಾಪ್‌ ತೆಗೆದುಕೊಂಡು ಹೋಗಲು ಹೇಗೆ ಬಿಟ್ಟರು ಎಂದೂ ಆಶ್ಚರ್ಯಪಟ್ಟರು.

click me!