ಮಹಿಳೆಯರನ್ನು ಎದುರಿಸಲಾಗದೇ ಪುರುಷರು ನೌಕರಿ ತ್ಯಜಿಸುತ್ತಾರೆ!

By Web DeskFirst Published May 5, 2019, 5:02 PM IST
Highlights

ದೊಡ್ಡ ದೊಡ್ಡ ಜಾಬ್‌ನಲ್ಲಿ ಇರಬೇಕು, ಕೈ ತುಂಬ ಸಂಬಳ ಪಡೆಯಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಆದರೆ ಅಲ್ಲಿ ಸ್ಪರ್ಧಿಗಳು ಹೆಚ್ಚು. ವಿಶೇಷ ಎಂದರೆ ಇಂತಹ ಹುದ್ದೆಗಳನ್ನು ಇತ್ತೀಚೆಗೆ ಹೆಣ್ಣು ಮಕ್ಕಳು ಹೆಚ್ಚು ಪಡೆಯುತ್ತಿದ್ದು, ಗಂಡು ಮಕ್ಕಳು ಈ ಪೋಸ್ಟ್‌ಗೆ ಹೋಗಲು ಹಿಂದೇಟು ಹಾಕುತ್ತಿದ್ದಾರಂತೆ! ಯಾಕೆ ಗೊತ್ತಾ? ಈ ಸುದ್ದಿ ಓದಿ. 

ದೊಡ್ಡ ದೊಡ್ಡ ಜಾಬ್‌ನಲ್ಲಿ ಇರಬೇಕು, ಕೈ ತುಂಬ ಸಂಬಳ ಪಡೆಯಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಆದರೆ ಅಲ್ಲಿ ಸ್ಪರ್ಧಿಗಳು ಹೆಚ್ಚು. ವಿಶೇಷ ಎಂದರೆ ಇಂತಹ ಹುದ್ದೆಗಳನ್ನು ಇತ್ತೀಚೆಗೆ ಹೆಣ್ಣು ಮಕ್ಕಳು ಹೆಚ್ಚು ಪಡೆಯುತ್ತಿದ್ದು, ಗಂಡು ಮಕ್ಕಳು ಈ ಪೋಸ್ಟ್‌ಗೆ ಹೋಗಲು ಹಿಂದೇಟು ಹಾಕುತ್ತಿದ್ದಾರಂತೆ.

ಏಕೆಂದರೆ ಪುರುಷರಿಗೆ ಮಹಿಳೆಯರ ‘ವಾಚಾಳಿ’ತನದೆದುರು ಸ್ಪರ್ಧೆ ಮಾಡಲಾಗದೆ ಅತ್ಯುನ್ನತ ಹುದ್ದೆಗಳಿಗೆ ಹೋಗಲು ಮನಸ್ಸು ಮಾಡುತ್ತಿಲ್ಲವಂತೆ. ಅಥವಾ ಕೆಲವೊಮ್ಮೆ ಇದೇ ಕಾರಣಕ್ಕಾಗಿ ರಾಜೀನಾಮೆ ಕೊಟ್ಟು ಬರುತ್ತಿದ್ದಾರಂತೆ. ಅಲ್ಲದೆ ಸಂಸ್ಥೆಗಳು ಕೂಡ ಮಹಿಳೆಯರನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿವೆಯಂತೆ. ಏಕೆಂದರೆ ಮಹಿಳಾ ಬಾಸ್‌ ತಮ್ಮ ಸಹೋದ್ಯೋಗಿಗಳೊಂದಿಗೆ, ಕ್ಲೈಂಟ್‌ಗಳೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಂಡು ಸಂಸ್ಥೆಯನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತಾರಂತೆ.

20 ವರ್ಷಗಳ ಕಾಲ ಈ ಸಮೀಕ್ಷೆ ಮಾಡಲಾಗಿದ್ದು, ಈ ಅವಧಿಯಲ್ಲಿ ಅತಿ ಕಡಿಮೆ ಸಂಖ್ಯೆಯ ಪುರುಷರು ಅತ್ಯುನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದರೆ ಸಮೀಕ್ಷೆ ಬಹಿರಂಗಪಡಿಸಿದೆ. ಯುಬಿಎಸ್‌ ಸೆಂಟರ್‌ ಆಫ್‌ ಎಕನಾಮಿಕ್ಸ್‌ ಇನ್‌ ಸೊಸೈಟಿ ಈ ಸಮೀಕ್ಷೆಯನ್ನು ಪ್ರಕಟಿಸಿದೆ. ಸಂವಹನ, ಪರಾನುಭೂತಿ, ಭಾವನೆಗಳ ಅರ್ಥೈಸಿಕೊಳ್ಳುವಿಕೆ ಇತ್ಯಾದಿ ಸಾಮಾಜಿಕ ಕೌಶಲ್ಯಗಳು ಮಹಿಳೆಯರೇ ಆಯ್ಕೆಯಾಗಲು ಪ್ರಮುಖ ಕಾರಣ.

ಈ ಬಗ್ಗೆ ಮಾತನಾಡಿದ ಪ್ರೊ.ನಿರ್‌ ಜೈಮ್‌ವಿಚ್‌, ‘ಯೂನಿವರ್ಸಿಟಿಗಳು, ಜಾಬ್‌ ತರಬೇತಿ ಕೋರ್ಸ್‌ ಮತ್ತು ಶಾಲೆಗಳಲ್ಲಿ ತಂತ್ರಜ್ಞಾನ ಬಳಕೆಯ ಕೌಶಲ್ಯದೊಂದಿಗೆ, ವಾಕತ್ಚಾತುರ್ಯ ಹೊಂದಿದ, ಪ್ರತಿಯೊಬ್ಬರನ್ನೂ ಅರ್ಥ ಮಾಡಿಕೊಳ್ಳುವವರನ್ನು ಬಯಸುತ್ತವೆ. ಸಾಮಾಜಿಕ ಕೌಶಲ್ಯಕ್ಕೆ ಪ್ರಮುಖ್ಯತೆ ಹೆಚ್ಚಾದಂತೆ ಕಳೆದ 40 ವರ್ಷಗಳಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಮಹಿಳೆಯರ ಪಾಲೂ ಹೆಚ್ಚಾಗಿದೆ.

 

click me!