
ಲ್ಯುಕೆಮಿಯಾ ಎಂಬ ಭಯಾನಕ ಖಾಯಿಲೆ ಬಗ್ಗೆ ನಿಮಗೆ ತಿಳಿದಿರಬಹುದು. ಇದೊಂದು ಡೆಡ್ಲೀ ಬ್ಲಡ್ ಕ್ಯಾನ್ಸರ್. ಹೆಚ್ಚಾಗಿ ಕ್ಯಾನ್ಸರ್ ನಮಗಿದೆ ಅಂತ ಗೊತ್ತಾಗೋದೇ ನಾಲ್ಕನೇ ಸ್ಟೇಜ್‌ಗೆ ಹೋದ ಬಳಿಕ. ಲ್ಯುಕೆಮಿಯವೂ ಇದಕ್ಕಿಂತ ಹೊರತಲ್ಲ. ಈಗ ಸ್ವಲ್ಪ ನಿರಾಳವಾಗುವ ಸುದ್ದಿಯೊಂದು ಬಂದಿದೆ.
'ವಿಟಮಿನ್ ಸಿ'ಯ ಅಂಶ ಹೆಚ್ಚಿರುವ ಕಿತ್ತಳೆ ಹಣ್ಣು, ನಿಂಬೆಹಣ್ಣಿನ ಸೇವನೆ ಹೆಚ್ಚೆಚ್ಚು ಮಾಡುತ್ತಿದ್ದರೆ ಈ ಲ್ಯುಕೆಮಿಯದಿಂದ ದೂರವಿರಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳುತ್ತಿದೆ. ಇದಕ್ಕೊಂದು ಕಾರಣವೂ ಇದೆ. ಲ್ಯುಕೆಮಿಯ ತೊಂದರೆಯಿಂದ ಬಳಲುತ್ತಿದ್ದ ಹೆಚ್ಚಿನವರಲ್ಲಿ ವಿಟಮಿನ್ ಸಿ ಕೊರತೆಯಿತ್ತು.
ಹಾಗಾಗಿ ಲ್ಯುಕೆಮಿಯಾಗೆ 'ಮಿಟಮಿನ್ ಸಿ' ಕೊರತೆಯೂ ಒಂದು ಕಾರಣ ಇರಬಹುದು ಎಂದು ವೈದ್ಯ ವಿಜ್ಞಾನ ಅಂದಾಜಿಸಿದೆ.ಹಾಗಾಗಿ 'ಮಿಟಮಿನ್ ಸಿ' ಅಂಶ ಹೆಚ್ಚಿರುವ ನಿಂಬೆ, ಕಿತ್ತಳೆಯನ್ನು ಹೆಚ್ಚೆಚ್ಚು ಸೇವಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.