ಈ ಸಿಂಪಲ್ ಅಭ್ಯಾಸದಿಂದ ಸುಂದರ ತ್ವಚೆ ನಿಮ್ಮದಾಗುತ್ತೆ

Published : May 26, 2018, 03:41 PM IST
ಈ ಸಿಂಪಲ್ ಅಭ್ಯಾಸದಿಂದ ಸುಂದರ ತ್ವಚೆ ನಿಮ್ಮದಾಗುತ್ತೆ

ಸಾರಾಂಶ

ಯಾಂತ್ರಿಕ ಬದುಕಿನಲ್ಲಿ ಆರೋಗ್ಯ ಹಾಗೂ ಆಹಾರವನ್ನು ಎಷ್ಟು ಸಾಧ್ಯವೋ ಅಷ್ಟು ನಿರ್ಲಕ್ಷಿಸಲಾಗುತ್ತಿದೆ. ಪರಿಸರ ಮಾಲಿನ್ಯದ ನಡುವೆ ತ್ವಚೆ ಹಾಗೂ ಕೇಶ ಆರೋಗ್ಯವನ್ನು ಸಂರಕ್ಷಿಸಿಕೊಳ್ಳುವುದೇ ಕಷ್ಟ. ಹಾಗಂತ ಇದರ ಆರೈಕೆಗೆ ಯಾವುದೇ ಬ್ಯೂಟಿ ಪಾರ್ಲರ್‌ನಲ್ಲಿ ಸಮಯ ಸ್ಪೆಂಡ್ ಮಾಡೋ ಅಗತ್ಯವಿಲ್ಲ. ಮಲಗೋ ಮುನ್ನ ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡರೆ, ಕಾಂತಿಯುತ ತ್ವಚೆ, ಕೇಶ ಹಾಗೂ ಹಲ್ಲು ನಿಮ್ಮದಾಗಲಿದೆ....

- ಮಲಗುವ ಮುನ್ನ ಮುಖವನ್ನು ತಣ್ಣಗಿನ ನೀರಿನಿಂದ ಸ್ವಚ್ಛಗೂಳಿಸಿಕೊಳ್ಳಬೇಕು. ಮುಖಕ್ಕೆ ಯಾವುದಾದರೂ ಸೌಂದರ್ಯ ವರ್ಧಕ ಬಳಸಿದರೆ, ನೀಟ್ ಆಗಿ ಎಣ್ಣೆ ಹಚ್ಚಿ, ತೊಳೆದುಕೊಳ್ಳಬೇಕು. ಇದರಿಂದ ಮುಖಕ್ಕೆ ಅಗತ್ಯ ಆಮ್ಲಜನಕ ಪೂರೈಸಿ, ತ್ವಚೆ ಆರೋಗ್ಯವಾಗಿರುವಂತೆ ಮಾಡುತ್ತದೆ. 

- ಜೇನು ತುಪ್ಪು ಹಚ್ಚಿ ತುಸು ಕಾಲದ ನಂತರ ಬೆಚ್ಚಿಗಿನ ನೀರಿನಲ್ಲಿ ತೊಳೆಯುವದುನ್ನೂ ರೂಢಿಸಿಕೊಳ್ಳಬೇಕು. 

-ಮಲಗುವ ಮುನ್ನ ಬೆಚ್ಚಗಿರುವ ನೀರಿನಿಂದ ಸ್ನಾನ ಮಾಡಿದರೆ, ದೇಹದ ಒತ್ತಡ ಕಡಿಮೆ ಮಾಡಿ, ನೆಮ್ಮದಿಯಾಗಿ ನಿದ್ರಿಸಬಹುದು.

- ವಾರಕ್ಕೊಮ್ಮೆ ಅಥವಾ ಏರಡು ಬಾರಿ ತಲೆಗೆ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಕೈ ಬೆರಳ ತುದಿಯಿಂದ ಮಾಡಿ ಕೊಳ್ಳುವ ಮಸಾಜ್ ಕೂದಲ ಬೆಳವಣಿಗೆಗೂ ಸಹಕಾರಿ. ಒತ್ತಡವನ್ನೂ ನಿವಾರಿಸುತ್ತದೆ.

- ಗಟ್ಟಿ ದಿಂಬಿನ ಮೇಲೆ ಕೂದಲು ಹರಡಿಕೊಂಡು ಮಲಗಬಾರದು. ಇದರಿಂದ ಕೂದಲು ಹೆಚ್ಚು ಉದುರುತ್ತದೆ. ಮೃದುವಾದ ದಿಂಬನ್ನು ಬಳಸಿ, ಕೂದಲನ್ನು ಕಟ್ಟಿಕೊಂಡು ಮಲಗಿದರೆ ಒಳ್ಳೆಯದು. 

- ಚಳಿಗಾಲದಲ್ಲಿ ಚರ್ಮ ಬಿರುಕು ಬಿಡುತ್ತದೆ. ಆದುದರಿಂದ ಮಲಗುವ ಮುನ್ನ ಮಾಯಶ್ಚರೈಸರ್ ಹಚ್ಚಿದರೆ, ಚರ್ಮ ನಯವಾಗುತ್ತದೆ.

-ಪಾದ ಬಿರುಕು ಬಿಟ್ಟರೆ, ಮಲಗುವ ಮುನ್ನ ಹೀಲಿಂಗ್  ಕ್ರೀಮ್ ಹಚ್ಚಿ, ಮಲಗಬೇಕು.  ಇದು ಪಾದವನ್ನು ಮೃದುವಾಗಿಸುತ್ತದೆ. 

-ಮಲಗುವಾಗ ಮಂದ ಬೆಳಕಿನಲ್ಲಿ ಇಂಪಾದ ಹಾಡು ಕೆಳುವುದು, ಧ್ಯಾನ ಅಥವಾ ಜಪ ಮಾಡುವುದರಿಂದ ನೆಮ್ಮದಿಯ ನಿದ್ರೆ ನಿಮ್ಮದಾಗುತ್ತದೆ. 

-ದಿನಕ್ಕೆ 6 ರಿಂದ 8 ತಾಸು ನಿದ್ರೆ ಮಾಡಬೇಕು.  ಇಲ್ಲವಾದಲ್ಲಿ ಮಹಿಳೆಯರ ಹಾರ್ಮೋನುಗಳ ಬದಲಾವಣೆಯಿಂದ ಮೊಡವೆ ಹೆಚ್ಚುತ್ತದೆ. ಮನೆಯಲ್ಲೇ ಜೇನು ಮತ್ತು ದಾಲ್ಚಿನ್ನಿ ಬೆರಸಿ ಮುಖಕ್ಕೆ ಹಚ್ಚಿದರೆ, ಮೊಡವೆ ತೊಲಗುತ್ತದೆ.

- ವಾರಕ್ಕೊಮ್ಮೆ ರಾತ್ರಿ ಮಲಗುವಾಗ ಬ್ರಷ್ ಮಾಡಿದ ನಂತರ, ಅಡಿಗೆ ಸೋಡಾ ಬಳಸಿ ಹಲ್ಲುಜ್ಜಿದರೆ ಹೊಳೆಯೋ ಹಲ್ಲು ನಿಮ್ಮದಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅತಿದೊಡ್ಡ QSR ಪ್ಲ್ಯಾನ್‌ ಪ್ರಕಟ, ಪಿಜಾ ಹಟ್‌ ಜೊತೆ ವಿಲೀನವಾಗಲಿದೆ ಕೆಎಫ್‌ಸಿ ರೆಸ್ಟೋರೆಂಟ್‌!
Savings Tips : ಕಪಲ್ಸ್ ಪ್ರತಿ ತಿಂಗಳು ಈ ರೀತಿ ಉಳಿತಾಯ ಮಾಡಿದ್ರೆ… ತಲೆ ಬಿಸಿನೇ ಇರೋದಿಲ್ಲ