
- ಬೀಜ-ಹಣ್ಣನ್ನೂ ಬಳಸಬಹುದಾಗಿದ್ದುಬೇಸಿಗೆಯಲ್ಲಿ ಸಿಗೋ ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ ಬಿ2, ಪೊಟ್ಯಾಷಿಯಮ್, ಮೆಗ್ನಿಷಿಯಮ್ ಹಾಗೂ ಕಾಪರ್ ದೇಹಕ್ಕೆ ಅಗತ್ಯದಷ್ಟಿರುತ್ತದೆ.
- ಚರ್ಮ ಸುಕ್ಕುಗಟ್ಟದಂತೆ ತಡೆಯಬಲ್ಲದು ಹಲಸು.
- ಹಲಸಿನ ಬೀಜವನ್ನು ಬೆಚ್ಚಗಿನ ಹಾಲು ಮತ್ತು ಜೇನಿನಲ್ಲಿ ಬೆರಸಿ, ಕೆಲವು ಸಮಯದ ನಂತರ ಸುಕ್ಕಿರುವ ಚರ್ಮಕ್ಕೆ ಹಚ್ಚಿದರೆ 6 ವಾರಗಳಲ್ಲಿ ಸುಕ್ಕು ನಿವಾರಣೆ ಆಗಿ, ಚರ್ಮದ ಕಾಂತಿ ಹೆಚ್ಚುತ್ತದೆ.
- ಸೂರ್ಯನ ಕಿರಣಗಳಿಂದ ಚರ್ಮ ಟ್ಯಾನ್ ಆಗಬಹುದು. ಆಗ ಹಲಸಿನ ರಸ ಮತ್ತು ನಿಂಬೆ ರಸ ಕಲಸಿ ಚರ್ಮಕ್ಕೆ ಹಚ್ಚಿ. ವಾರದಲ್ಲೊಮ್ಮೆ ಈ ರೀತಿ ಮಾಡಿದರೆ ತಿಂಗಳೊಳಗೆ ಫಲಿತಾಂಶ ತಿಳಿಯುತ್ತದೆ.
- ಪ್ರೊಟೀನ್ ಅಧಿಕವಾಗಿರುವ ಹಲಸಿನ ಬೀಜವನ್ನು ಅಡುಗೆಗೂ ಬಳಸಬಹುದು. ಇದರ ಹಲ್ವಾವೂ ಬಾದಾಮಿ ಹಲ್ವಾದಂತೆ ರುಚಿಕರವಾಗಿರುತ್ತದೆ. ಬೀಜದ ಗೊಜ್ಜೂ ರುಚಿ ರುಚಿಯಾಗಿರುತ್ತದೆ.
-ಹಲಸಿನ ಬೀಜ ಕೂದಲು ದಟ್ಟವಾಗಿ ಬೆಳೆಯಲು ಸಹಾಯಮಾಡುತ್ತದೆ. ಹಲಸು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ನಿರ್ಜೀವ ಕೂದಲು ಉದುರಿ ಆರೋಗ್ಯಕರ ಕೂದಲು ಬೆಳೆಯುತ್ತದೆ.
-ಹಲಸು ಕರಗಬಲ್ಲ ಫೈಬರ್ ಹೊಂದಿದ್ದು, ಜ್ರೀರ್ಣಕ್ರಿಯೆಗೆ ಸಹಕರಿಸುತ್ತದೆ. ದೊಡ್ಡ ಕರುಳಿನಲ್ಲಿ ಕರಗದೇ ಉಳಿದುರವ ಆಹಾರ ಪದಾರ್ಥವೂ ಹಲಸು ತಿಂದರೆ ಹೊರ ಬರುತ್ತದೆ.
-ಮಧುಮೇಹದಿಂದ ಬಳಲುವವರು ದಿನಕ್ಕೊಂದು ಬಟ್ಟಲು ಹಲಸು ಸೇವಿಸಿದರೆ, ಸಕ್ಕರೆಯ ಸಮತೋಲನ ಕಾಪಾಡಿಕೊಳ್ಳಬಹುದು. ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ.
-ಗರ್ಭಾವಸ್ಥೆಯಲ್ಲಿರುವಾಗ ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡುತ್ತದೆ.
-ಹಲಸು ತಿನ್ನುವುದರಿಂದ ನಿದ್ರಾಹೀನತೆಯಿಂದ ಬಳಲುವುದು ನಿವಾರಣೆಯಾಗುತ್ತದೆ. ನರ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ.
- ಬಾಯಿ ಹುಣ್ಣಿಗೂ ಹಲಸು ರಾಮಬಾಣ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.