ಲವ್, ಪ್ರಪೋಸಲ್ ಇಂಥ ವೀಡಿಯೋಗಳ ಬಗ್ಗೆ ಇಲ್ಲೊಂದಿಷ್ಟು ಮಾತು...

By Suvarna NewsFirst Published Dec 16, 2018, 3:26 PM IST
Highlights

ನರ್ಸರಿ ಇರೋ ಮಗು ಸ್ಕೂಲ್ ಡೇಗೆ ಮಾಡುವ ಡ್ಯಾನ್ಸ್ ಆ ಕ್ಷಣಕ್ಕೆ ಮುಖ್ಯ ಎನಿಸುವುದಿಲ್ಲ. ಆದರೆ, ಬೆಳೆದು ದೊಡ್ಡವನಾದ ಮೇಲೆ ಅದೇ ಒಂದು ಮಹತ್ವದ ಉಡುಗೊರೆಯಾಗುತ್ತದೆ. ಆದರೆ, ಜೀವನದ ಮತ್ತೊಂದು ಘಟ್ಟವಾದ ಲವ್, ಪ್ರಪೋಸಲ್ ಇಂಥ ವೀಡಿಯೋಗಳ ಬಗ್ಗೆ ಇಲ್ಲೊಂದಿಷ್ಟು ಮಾತು....

ಇಷ್ಟವಾದವರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದರೆ ಸಾಕು, ಹತ್ತು ಹಲವು ಮಂದಿ ಲೈಕ್ ಮಾಡುತ್ತಾರೆ, ಕಮೆಂಟ್ ಹಾಕುತ್ತಾರೆ. ಅಕಸ್ಮಾತ್ ಪ್ರಪೋಸ್ ಮಾಡುವ ವಿಡಿಯೋ ಅಥವಾ ಫೋಟೋ ಹಾಕಿ ಬಿಟ್ಟರೆ? ಅಷ್ಟೇ ಕಥೆ, ಲೈಕ್, ಕಮೆಂಟ್ ಸಿಗೋ ಜತೆಗೆ ಮಾನವೂ ಹರಾಜು ಹಾಕಲ್ಪಡುತ್ತದೆ. ಇದರಲ್ಲಿ ಡೌಟೇ ಇಲ್ಲ. 

ಪರ್ಸನಲ್ ಲೈಫ್‌ನಲ್ಲಿ ಪ್ರೈವಸಿ ಅಗತ್ಯ. ಜೀವನದಲ್ಲಿ ಎಲ್ಲವೂ ಹೇಗಿರಬೇಕೋ, ಹಾಗಿದ್ದರೆ ಚೆಂದ. ಆದರೆ, ಪ್ರಪೋಸ್ ಮಾಡಿದ ವೀಡಿಯೋವನ್ನು ಶೇರ್ ಮಾಡಿಕೊಂಡರೆ ತಾವೇ ತಮ್ಮ ತಲೆಯ ಮೇಲೆ ಕಲ್ಲು ಚಪ್ಪಡಿಯನ್ನು ಎಳೆದು ಹಾಕಿ ಕೊಂಡಂತೆ. 

ಶಬ್ನನ್ ಜೊತೆ ತೆಂಡೂಲ್ಕರ್ ಮಗಳ ಅಫೇರ್!

ಇಂಡಿಯಾ- ಇಂಗ್ಲೆಂಡ್ ಒಡಿಐ ಮ್ಯಾಚ್‌ ನಡೆಯುವಾಗ ಒಬ್ಬ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಿದ್ದಾನೆ. ಅವರ ಸುತ್ತ ಇದ್ದವರು ಆ ವಿಡಿಯೋ ಮಾಡಿಕೊಂಡು, ಕಂಡ್ ಕಂಡಲ್ಲಿ ಶೇರ್ ಮಾಡಿದ್ದು, ವೈರಲ್ ಆಗಿದೆ. ಜನಜಂಗುಳಿ ಇರುವಲ್ಲೇ ಆತ ಪ್ರಪೋಸ್ ಮಾಡುವಂಥ ಕಾರ್ಯಕ್ಕೆ ಮುಂದಾಗಿದ್ದು ಸರೀನಾ? 

ಫ್ರೆಂಡ್ಸ್ ಜತೆ ಇರೋ ವೀಡಿಯೋ ಅಥವಾ ಫೋಟೋ ಶೇರ್ ಮಾಡಿಕೊಂಡರೆ ಒಂದರ್ಥವಿರುತ್ತದೆ. ಆದರೆ, ಬಾಳ ಸಂಗಾತಿ ಮಾಡಿ ಕೊಳ್ಳಬೇಕೆಂದುಕೊಳ್ಳುವವರೊಟ್ಟಿಗೆ ಇರೋ ವೀಡಿಯೋ ಅಥವಾ ಫೇಟೋ ಶೇರ್ ಮಾಡಿಕೊಳ್ಳುವಾಗ ತುಸು ಎಚ್ಚರದಿಂದ ಇರಬೇಕು. ಅಕಸ್ಮಾತ್ ನಿಮ್ಮ ಫೋಟೋವನ್ನು ಹೀಗೆ ಶೇರ್ ಮಾಡಿಕೊಳ್ಳುತ್ತೇನೆ ಎಂದರೆ ನೇರವಾಗಿಯೇ ಬೇಡವೆಂದು ಬಿಡಿ. ಇದೊಂದು ಕೆಟ್ಟ ಚಾಳಿ.

11 ವರ್ಷ ಹಿರಿಯ ಆಯೇಷಾ ಪ್ರೀತಿಯಲ್ಲಿ ಶಿಖರ್ ಬಿದ್ದಿದ್ದು ಹೇಗೆ?

ಪ್ರಪೋಸ್ ಮಾಡುವಾಗ ಏಕೆ ಮೂರನೇ ವ್ಯಕ್ತಿ?

ನೀವು ಪ್ರಪೋಸ್ ಮಾಡುವಾಗ ಮೂರನೇ ವ್ಯಕ್ತಿ ಇದ್ದರೆ ಓಕೆನಾ? 'ಶಿವಪೂಜೆ ಮದ್ಯ ಕರಡಿಗೆ ಬಿಟ್ಟಂತೆ...' ಎನ್ನುವಂತೆ ನಿಮ್ಮಿಬ್ಬರ ಬಾಳಿನ ಅದ್ಭುತವಾದ ನಿರ್ಧಾರ ತೆಗೆದುಕೊಳ್ಳುವಾಗ ಅನ್ಯರನ್ನು ಹತ್ತಿರ ಸೇರಿಸಿಕೊಳ್ಳದಿದ್ದರೆ ಒಳಿತು. ತೀರಾ ಕಂಫರ್ಟ್ ಫೀಲ್ ನೀಡುವವರಾದರೆ ಓಕೆ. ಬಾಂಧವ್ಯ ಬೆಸೆಯುವ ಅದ್ಭತ ಕ್ಷಣಗಳಲ್ಲಿ ಬೇರೆಯವರ ಅಗತ್ಯವೇ ಇಲ್ಲ. 

ಇರಲಿ ಒಪ್ಪಿಗೆ...
ಸಂಗಾತಿಯನ್ನು ಅಪ್ಪಿಕೊಂಡಿದ್ದೋ, ಮುತ್ತಿಕೊಂಡಿದ್ದೋ...ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುಕೊಳ್ಳುವ ಇರಾದೆ ಇದ್ದರೆ ಇಬ್ಬರೂ ಒಪ್ಪಿ ನಿರ್ಧಾರಕ್ಕೆ ಬರಬೇಕು. ಒಬ್ಬರು ಮಾಡಿದ್ದು, ಇನ್ನೊಬ್ಬರಿಗೆ ಸಹ್ಯವಾಗದಿರಬಹುದು. ಈ ಸಂಬಂಧ ಬೆಳೆದು ಮರವಾಗುವ ಸಮಯದಲ್ಲಿ ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಗೌರವಿಸುವುದು ಅಗತ್ಯ. 

ಮೊದಲ ಭೇಟಿಯಲ್ಲೇ ಪಿಗ್ಗಿಗೆ ನಿರಾಸೆಗೊಳಿಸಿದ್ದ ನಿಕ್

ಒಟ್ಟಿನಲ್ಲಿ ಬಾಳಿನಲ್ಲಿ ಅತ್ಯದ್ಭುತ ನಿರ್ಧಾರ ತೆಗೆದುಕೊಳ್ಳುವಾಗ ಸಾಕಷ್ಟು ಯೋಚಿಸಿಯೇ ಅಡಿ ಇಟ್ಟಿರುತ್ತೀರಿ. ಹಾಗೆಯೇ ಅಂಥ ಅದ್ಭುತ ಕ್ಷಣಗಳನ್ನು ಸೆರೆಯಾಗಿಟ್ಟುಕೊಳ್ಳುವುದೂ ತಪ್ಪಲ್ಲ. ಆದರೆ, ನಾಲ್ಕು ಜನರು ನೋಡುವ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು, ಸುಖಾ ಸುಮ್ಮನೆ ನಿಮ್ ಏಕಾಂತಕ್ಕೆ ಧಕ್ಕೆ ತಂದುಕೊಳ್ಳುವಂಥ ಕೆಲಸಕ್ಕೆ ಕೈ ಹಾಕದಿದ್ದರೆ ಒಳಿತು. ಇಂಥ ದುಸ್ಸಾಹಸಕ್ಕೆ ಕೈ ಹಾಕಿ ಬಾಳನ್ನು ಹಾಳು ಮಾಡಿಕೊಳ್ಳದಿರೋ ಹುಚ್ಚಪ್ಪಗಳಿರಾ.....

click me!