
ಸ್ಟಾಕ್ ಹೋಮ್[ಅ.01]: ಕ್ಯಾನ್ಸ್'ರ್ ರೋಗಾಣುಗಳಿಗೆ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ವೃದ್ಧಿಗೊಳಿಸುವ ಔಷಧ ಸಂಶೋಧಿಸಿದ ಅಮೆರಿಕಾದ ಜೇಮ್ಸ್ ಪಿ ಅಲ್ಲಿಸನ್ ಹಾಗೂ ಜಪಾನಿನ ತಸ್ಸಕು ಹೋಂಜೊ ಎಂಬುವವರಿಗೆ 2018ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲಭಿಸಿದೆ.
70 ವರ್ಷದ ಅಲ್ಲಿಸನ್ ಅಮೆರಿಕಾದ ಹೂಸ್ಟನ್ ನಲ್ಲಿನ ಎಂಡಿ ಆಂಡರ್ ಸನ್ ಕ್ಯಾನ್ಸ್'ರ್ ಕೇಂದ್ರ ವಿಭಾಗದ ಮುಖ್ಯಸ್ಥರಾಗಿದ್ದರೆ, ಹೋಂಜೋ [76] ಅವರು ಜಪಾನಿನ ಕ್ಯೋಟೊ ವಿವಿಯಲ್ಲಿ ರೋಗನಿರೋಧಕ ಮತ್ತು ಜೀನೋಮಿಕ್ ಔಷಧ ವಿಭಾಗದಲ್ಲಿ ವಿಶೇಷ ಪ್ರಾಧ್ಯಾಪಕರಾಗಿದ್ದಾರೆ.
ಇಬ್ಬರೂ ವೈದ್ಯರು ಕ್ಯಾನ್ಸ್'ರ್ ರೋಗಾಣುಗಳನ್ನು ನಿಯಂತ್ರಿಸಲು ಪ್ರತಿರೋಧಕ ರೋಗ ನಿರೋಧಕ ಶಕ್ತಿಯ ವೃದ್ಧಿಸುವಿಕೆಯ ಮೇಲೆ ಸಂಶೋಧನೆ ಕೈಗೊಂಡಿದ್ದರು. ಕ್ಯಾನ್ಸರ್ ವಿರುದ್ಧದ ಹೋರಾಟಕ್ಕೆ ಈ ಪ್ರಶಸ್ತಿಯು ಹೆಗ್ಗುರುತಾಗಿದೆ ಎಂದು ಪ್ರಶಸ್ತಿ ಸಮಿತಿ ತಿಳಿಸಿದೆ. ಇಬ್ಬರೂ ವೈದ್ಯರು ಕ್ಯಾನ್ಸರ್ ರೋಗಾಣುಗಳ ಬಗ್ಗೆ ಹಲವು ವರ್ಷಗಳ ಕಾಲ ಅಧ್ಯಯನ ಮಾಡಿ ಚಿಕಿತ್ಸೆಗೆ ಔಷಧ ಕಂಡು ಹಿಡಿದಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.