
ಬೆಂಗಳೂರು: ದೇಶದ ಪ್ರತಿಷ್ಠಿತ ರಾಷ್ಟ್ರೀಯ ಬ್ಯಾಂಕಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಉನ್ನತ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 119 ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 7 ಕಡೆಯ ದಿನಾಂಕವಾಗಿರುತ್ತದೆ.
ಹುದ್ದೆ ವಿವರಗಳು ಕೆಳಗಿನಂತಿವೆ...
1. ಸ್ಪೆಷಲ್ ಮ್ಯಾನೇಜ್‌ಮೆಂಟ್ ಎಕ್ಸ್‌ಕ್ಯೂಟಿವ್: 35 ಹುದ್ದೆಗಳು
ವಿದ್ಯಾರ್ಹತೆ: ಸಿಎ, ಐಸಿಡಬ್ಲ್ಯೂ, ಎಸಿಎಸ್ ಅಥವಾ ಎಂಬಿಎ ಅಥವಾ ಆರ್ಥಿಕ ವಿಷಯದಲ್ಲಿ ಎರಡು ವರ್ಷದ ಡಿಪ್ಲೋಮಾ.
ಅನುಭವ: ಶಿಕ್ಷಣ ಮುಗಿಸಿದ ನಂತರ ಐದು ವರ್ಷಗಳ ಅರ್ಹ ಅನುಭವ ಪಡೆದಿರಬೇಕು.
2.ಡೆಪ್ಯೂಟಿ ಜನರಲ್ ಮ್ಯಾನೇಜರ್ (ಕಾನೂನು): 02 ಹುದ್ದೆಗಳು
ವಿದ್ಯಾರ್ಹತೆ: 17 ವರ್ಷಗಳ ಅನುಭವದೊಂದಿಗೆ ಕಾನೂನು ಪದವಿ.
3. ಡೆಪ್ಯೂಟಿ ಮ್ಯಾನೇಜರ್ (ಕಾನೂನು): 82 ಹುದ್ದೆಗಳು
ಅರ್ಹತೆ: ನಾಲ್ಕು ವರ್ಷಗಳ ಕಾಲ ವಕೀಲಿಕೆ ಅನುಭವದೊಂದಿಗೆ ಕಾನೂನು ಪದವಿ.
ವಯೋಮಿತಿ (31, ಡಿಸೆಂಬರ್,2017ಕ್ಕೆ)
ಕನಿಷ್ಠ ವಯೋಮಿತಿ: 25 ವರ್ಷ
ಗರಿಷ್ಠ: 52 ವರ್ಷ (ಕಾನೂನಿನಂತೆ ವಯೋಮಿತಿ ಸಡಿಲಿಕೆ ಇರುತ್ತದೆ)
ಹೆಚ್ಚಿನ ಮಾಹಿತಿಗಾಗಿ: ಎಸ್‌ಬಿಐ ವೆಬ್‌ಸೈಟ್ https://www.sbi.co.in/careers/ongoing-recruitment.htmlಗೆ ಭೇಟಿ ನೀಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.