Success Story: ಸಚಿನ ಹೆಸರು ಬಿಟ್ಟು ಮುಂದೆ ನಡೆದ ಸಾರಾ; ಯಶಸ್ವಿ ಉದ್ಯಮಿ ಹಾದಿಯಲ್ಲಿ ತೆಂಡಲ್ಕೂರ್ ಪುತ್ರಿ!

Published : Oct 12, 2026, 05:03 PM IST
Sara Tendulkar

ಸಾರಾಂಶ

ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತಮ್ಮ ತಂದೆಯ ಖ್ಯಾತಿಯನ್ನು ಬಳಸಿಕೊಳ್ಳದೆ ಸ್ವಂತವಾಗಿ ಯಶಸ್ವಿ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ. ಅವರು ಪ್ರಮುಖ ಬ್ರ್ಯಾಂಡ್‌ಗಳಿಗೆ ರಾಯಭಾರಿಯಾಗಿದ್ದು, ಮುಂಬೈನಲ್ಲಿ ಪೈಲೇಟ್ಸ್ ಅಕಾಡೆಮಿಯನ್ನು ಪ್ರಾರಂಭಿಸುವ ಮೂಲಕ ತಮ್ಮದೇ ಆದ ಹೊಸ ಗುರುತನ್ನು ರೂಪಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ನಾನು ನಿನಗೆ ದಾರಿ ತೋರಿಸುತ್ತಿದ್ದೆ. ಈಗ, ಎಲ್ಲಿಗೆ ಹೋಗಬೇಕೆಂದು ನೀವೇ ಆಯ್ಕೆಮಾಡಿಕೊಂಡಿರುವೆ ಎಂದು ನೋಡಿ ನನಗೆ ಸಂತೋಷವಾಗುತ್ತದೆ ಎಂದು ಸಚಿನ್ ತೆಂಡೂಲ್ಕರ್ ಸೋಮವಾರ ತಮ್ಮ ಮಗಳು ಸಾರಾ ಅವರ 29 ನೇ ಹುಟ್ಟುಹಬ್ಬಕ್ಕೆ ಶುಭ ಹಾರೈಸುತ್ತಾ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ಸಚಿನ ಖ್ಯಾತಿ ಬಳಸಿಕೊಳ್ಳುವ ಬದಲು ಸಾರಾ ಹೇಗೆ ಕ್ರಮೇಣ ತನ್ನದೇ ಆದ ಗುರುತನ್ನು ಹೇಗೆ ರೂಪಿಸಿಕೊಂಡಿದ್ದಾರೆ ಎನ್ನುವುದನ್ನು ಅವರ ಪೋಸ್ಟ್ ಸಾರಿ-ಸಾರಿ ಹೇಳುವಂತಿತ್ತು.

ಉದ್ಯಮಿಯಾಗಿ ರೂಪಗೊಳ್ಳುತ್ತಿರುವ ಸಾರಾ!

ಸಾರಾ ಇನ್ಸ್ಟಾದಲ್ಲಿ 9.8 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ, ಇದು ಪ್ರಮುಖ ಬ್ರ್ಯಾಂಡ್ ಅನುಮೋದನೆ ಮತ್ತು ಕೊಲಾಬರೇಷನ್‌ಗೆ ಕಾರಣವಾಗಿದೆ. ಬಯೋಮೆಡಿಕಲ್ ವಿಜ್ಞಾನಿಯಾಗಿರುವ ಸಾರಾ ಒಬ್ಬ ಉದ್ಯಮಿಯೂ ಹೌದು. ನಾನು ನನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸಬೇಕೆಂದು ಅಂದುಕೊಂಡಿದ್ದೇನೆ ಎಂದು ಸಾರಾ ಈ ವರ್ಷದ ಆರಂಭದಲ್ಲಿ ಎಂಟ್ರಪ್ರೆನ್ಯೂರ್ ಇಂಡಿಯಾಕ್ಕೆ ತಮ್ಮ ಕನಸನ್ನು ಹಂಚಿಕೊಂಡಿದ್ದರು .

ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿದ ಪ್ರಭಾವ!

ವ್ಯವಹಾರ ಮಾಲೀಕತ್ವಕ್ಕೆ ಕಾಲಿಡುವ ಮೊದಲು, ಸಾರಾ ಅವರ ವಾಣಿಜ್ಯ ಮೌಲ್ಯವು ಹೆಚ್ಚಾಗಿ ಸಾಮಾಜಿಕ ಮಾಧ್ಯಮ ಪ್ರಭಾವದಿಂದ ಪಡೆಯಲ್ಪಟ್ಟಿತು. ಮೇ 2024 ರಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ , ಜನಪ್ರಿಯ ಕೊರಿಯನ್ ಬ್ಯುಟಿ ಬ್ರ್ಯಾಂಡ್ ಆಗಿರುವ ಲನೀಜ್, ಅವರನ್ನು ಭಾರತದಲ್ಲಿ ತನ್ನ ಬ್ರಾಂಡ್ ರಾಯಭಾರಿಯಾಗಿ ನೇಮಿಸಿಕೊಂಡಿದೆ. PNG ಜ್ಯುವೆಲ್ಲರ್ಸ್‌ನ ಸೂಕ್ಷ್ಮ ಆಭರಣ ಬ್ರ್ಯಾಂಡ್ ಆದ PNG ನಿಂದ ಲೈಫ್‌ಸ್ಟೈಲ್ ಕೂಡ ಡಿಸೆಂಬರ್ 2025 ರಲ್ಲಿ ಅವರನ್ನು ತನ್ನ ಬ್ರಾಂಡ್ ರಾಯಭಾರಿಯಾಗಿ ನೇಮಿಸಿಕೊಂಡಿದೆ. ಸೆಟಾಫಿಲ್, ಫರ್ನ್ಸ್ ಎನ್ ಪೆಟಲ್ಸ್, ILEM ಜಪಾನ್ ಸೇರಿ ಅನೇಕ ಇತರ ಬ್ರ್ಯಾಂಡ್‌ಗಳು ಅವರೊಂದಿಗೆ ಸಂಪರ್ಕ ಹೊಂದಿದ್ದು, ಫ್ಯಾಷನ್, ಬ್ಯುಟಿ ಮತ್ತು ಲೈಪಸ್ಟೈಲ್ ಪ್ರಭಾವ ಮಾರುಕಟ್ಟೆಯಲ್ಲಿ ಅವರು ಹೊಂದಿರುವ ಬೇಡಿಕೆ ತೋರಿಸುತ್ತದೆ.

ವ್ಯಾಪಾರ ಮಾಲೀಕತ್ವ!

ಆಗಸ್ಟ್ 2025 ರಲ್ಲಿ, ಸಾರಾ ಮುಂಬೈನ ಅಂಧೇರಿಯಲ್ಲಿ ಪೈಲೇಟ್ಸ್ ಅಕಾಡೆಮಿ ಪ್ರಾರಂಭಿಸಿದರು, ಇದು ಅವರ ಮೊದಲ ವ್ಯವಹಾರ ಉದ್ಯಮವಾಗಿದೆ. ಕಾಲೇಜಿನ ನಂತರ 9ರಿಂದ5 ರವರೆಗಿನ ಅದರ ಕಾರ್ಯವನ್ನು ಕೈಗೆತ್ತಿಕೊಂಡೆ. ಆ ಅನುಭವ ನನಗೆ ನನಗೆ ರಚನೆ ಮತ್ತು ಪ್ರಮಾಣ ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಆದ್ದರಿಂದ ಉದ್ಯಮಶೀಲತೆ ನಾನು ಮುಂದುವರಿಸಲು ಬಯಸುವ ವಿಷಯ ಎಂದು ನನಗೆ ತಿಳಿದಿತ್ತು ಎಂದು ಎಂಟ್ರಪ್ರೆನ್ಯೂರ್ ಇಂಡಿಯಾಗೆ ತಿಳಿಸಿದ್ದಾರೆ. ಸಾರಾ ಅವರ ಈ ಜರ್ನಿ ಕ್ರಿಕೆಟ್ ದೇವರು ಸಚಿನ ಹೆಸರಿನ ಆಚೆಗೂ ಸದ್ದು ಮಾಡುತ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀಮಂತರ ಮನೆ ಬಣ್ಣ ಲೈಟ್, ಬಡವರ ಮನೆ ಪೇಂಟ್ಸ್ ಬ್ರೈಟ್ ಯಾಕೆ? ಇದ್ರ ಹಿಂದಿದೆ ರೋಚಕ ಕಾರಣ
ಕೆಎಸ್‌ಆರ್‌ಟಿಸಿ 'ಬೆಂಗಳೂರು-ಶ್ರೀರಂಗಪಟ್ಟಣ-ಮೈಸೂರು' ಟೂರ್ ಪ್ಯಾಕೇಜ್; ಟಿಕೆಟ್ ದರ-ವೇಳಾಪಟ್ಟಿ ಇಲ್ಲಿದೆ