ಸೈಫ್ ಮಗಳು ಸಾರಾ ಮೊದಲು 90 ಕೆಜಿ ತೂಗುತ್ತಿದ್ದಳು. ಬಳಕುವ ಬಳ್ಳಿಯಂತಾಗಲು ಅವಳು ತ್ಯಜಿಸಿದ್ದು ಒಂದೆರಡಲ್ಲ.
ಒಂದಿಷ್ಟು ವರ್ಷಗಳ ಹಿಂದೆ ಪಟೌಡಿ ಖಾನ್‌ದಾನ್‌ನ ಈ ರಾಜಕುಮಾರಿಯನ್ನು ಕಂಡವರು ಈಕೆ ಮುಂದೊಮ್ಮೆ ಸಿನಿಮಾ ಹೀರೋಯಿನ್ ಆಗಬಹುದು ಅನ್ನೋದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಸಾರಾ ಆಲಿ ಖಾನ್ ಎಂಬ ಹುಡುಗಿ ಆಗ ಬರೋಬ್ಬರಿ 96 ಕೆಜಿ ತೂಗುತ್ತಿದ್ದರು. ಇದಕ್ಕೆ ಕಾರಣ ಇಂದು ಪಿಸಿಓಡಿ ಅಥವಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್. ಅದರ ವಿರುದ್ಧ ಹೋರಾಡಿ ‘ಕೇದಾರ್‌ನಾಥ್’ ಸಿನಿಮಾದಲ್ಲಿ ಏಳು ಮಲ್ಲಿಗೆ ತೂಕದ ಹುಡುಗಿ ಯಾಗಿದ್ದಾರೆ. ಏನಿದರ ಹಿಂದಿನ ರಹಸ್ಯ..
ಡ್ರಗೆ ಕೇಸಲ್ಲಿ ಹೆಸರು ಕೇಳಿ ಬಂದ ನಟಿಯರು ಇವರು
ಸಾಮಾನ್ಯ ಡಯೆಟ್
ತಿಂಡಿ, ಊಟ ಬಹಳ ಸಿಂಪಲ್. ಬೆಳಗ್ಗೆ ಇಡ್ಲಿ ತಿನ್ನೋದಿಷ್ಟ. ಇಲ್ಲದಿದ್ರೆ ಎಗ್‌ವೈಟ್, ಬ್ರೆಡ್ ಟೋಸ್ಟ್ ಆದರೂ ನಡಿಯುತ್ತೆ. ಮಧ್ಯಾಹ್ನ ತರಕಾರಿ, ಹಣ್ಣು, ದಾಲ್, ಚಪಾತಿ. ಸಂಜೆ ಒಂದು ಬೌಲ್ ಉಪ್ಮಾ ತಿಂದರೆ ಖುಷಿ. ರಾತ್ರಿ ಬಹಳ ಲೈಟ್‌ಫುಡ್. 96 ಕೆಜಿ ತೂಕವನ್ನು 52 ಕೆಜಿಗೆ ಇಳಿಸಿದ್ದೂ ಈ ಡಯೆಟ್‌ನಲ್ಲೇ. ವರ್ಕೌಟ್‌ನ ಬಳಿಕ ಓಟ್ಸ್, ಮುಸ್ಲಿ, ಹಣ್ಣು ತಿನ್ನುತ್ತಿದ್ದರು ಅಷ್ಟೇ.
ಅಸಾಮಾನ್ಯ ವರ್ಕೌಟ್
ಸಾರಾಳಲ್ಲಿ ಒಂದು ಛಲವಿತ್ತು. ಅವರ ಫ್ಯಾಮಿಲಿಯ ಅಷ್ಟೂ ಜನ ಬಾಲಿವುಡ್‌ನಲ್ಲಿ ಮಿಂಚಿದವರೇ. ಅವರ ಹಾಗೇ ತಾನೂ ಸಿನಿಮಾಗಳಲ್ಲಿ ಅಭಿನಯಿಸಬೇಕು ಅಂತ. ಆದರೆ 96 ಕೆಜಿ ತೂಗುವ ಹುಡುಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕಷ್ಟೇ. ಅದು ಈಕೆಗೆ ಬೇಕಿರಲಿಲ್ಲ. ಛಲವಂತ ಹುಡುಗಿ ವರ್ಕೌಟ್ ಶುರುಮಾಡಿದರು. ಅದ್ಯಾವ ಥರ ವರ್ಕೌಟ್ ಅನ್ನೋದನ್ನು ನೀವು ಆಕೆಯ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲೇ ನೋಡಬೇಕು. ಪಿಲಾಟೆಸ್ ದೇಹದ ಶೇಪ್, ಆರೋಗ್ಯಕರ ತೂಕ ಮೈಂಟೇನ್ ಮಾಡಲು ಸಹಕಾರಿಯಾಯ್ತು. ಸ್ನಾಯುಗಳಿಗೂ ಇದು ಅತ್ಯುತ್ತಮ. ಜೊತೆಗೆ ಬೂಟ್‌ಕ್ಯಾಂಪ್ ವರ್ಕೌಟ್, ಏರೋಬಿಕ್ಸ್, ಸ್ಟ್ರೆಂಥ್ ಟ್ರೈನಿಂಗ್ ಹೀಗೆ ಅಸಂಖ್ಯಾತ ಎಕ್ಸರ್‌ಸೈಸ್‌ಗಳನ್ನು ಮಾಡಿ ದೇಹವನ್ನು ಹಗುರಾಗಿಸಿದ್ದಾರೆ. ನಾನು ದಪ್ಪ ಅಂತ ಕೊರಗುವವರಿಗೂ ಸ್ಫೂರ್ತಿಯಾಗಿದ್ದಾರೆ.
ಸುಶಾಂತ್ ಸಿಂಗ್ ವಿಶ್ವಾಸದ್ರೋಹಿ ಎಂದ ಸಾರಾ ಆಲಿ ಖಾನ್
ಎತ್ತರ : 5'4
ತೂಕ : 52 ಕೆಜಿ
ಸುತ್ತಳತೆ : 32-26-34