ಈಗಿನ ಮಕ್ಕಳಿಗೆ ಇಟಾಲಿಯನ್ ಫುಡ್ ಕಡೆ ಒಲವು ಜಾಸ್ತಿ. ಚಳಿಗೂ ಸೈ, ಮಳೆಗೂ ಸೈ ಎನಿಸಿಕೊಳ್ಳುವ ವೈಟ್ ಆ್ಯಂಡ್ ರೆಡ್ ಪಾಸ್ತಾವೆಂದರಂತೂ ಅಚ್ಚುಮೆಚ್ಚು. ಹಾಗಂತೆ ಹೊರಗೆ ತಿಂದರೆ ಅಷ್ಟು ಒಳ್ಳೆಯದಲ್ಲ. ಮನೆಯಲ್ಲಿಯೂ ಮಾಡಬಹುದು. ತುಸು ಹೆಚ್ಚು ಕಮ್ಮಿಯಾದರೂ ಮಾತ್ರ ರುಚಿ ಹಾಳಾಗುತ್ತೆ. ಹಾಗಾದರೆ ಸರಿಯಾಗಿ ತಯಾರಿಸೋ ವಿಧಾನವೇನು?
2 ಮಿನಿಟ್ಸ್ ತಿನಿಸೆಂದೇ ಖ್ಯಾತವಾದ ಪಾಸ್ತಾ ಸರಿಯಿಲ್ಲವೆಂದು ದೂರುವವರೇ ಹೆಚ್ಚು. ಅಷ್ಟಕ್ಕೂ ಇದನ್ನು ಸರಿಯಾಗಿ ಬೇಯಿಸದಿದ್ದಲ್ಲಿ, ಸಾಕಷ್ಟು ಉಪ್ಪು, ಹುಳಿ ಹಾಕದಿದ್ದಲ್ಲಿ ರುಚಿ ಕೆಡುತ್ತೆ.