ರೆಸಿಪಿ: ನರಕ ಚತುರ್ದಶಿಗೆ ಚೀನಿಕಾಯಿ ಕಡುಬು ಮಾಡೋದು ಹೇಗೆ?

By Web DeskFirst Published Nov 5, 2018, 4:38 PM IST
Highlights

ನರಕ ಚತುರ್ದಶಿಗೆ ಚೀನಿಕಾಯಿ ಕಡುಬು ಮಾಡುವುದು ವಾಡಿಕೆ. ಹಬ್ಬಗಳಲ್ಲಿ ಮಾಡುವ ವಿವಿಧ ಖಾದ್ಯಗಳಿಗೆ ತನ್ನದೇ ಆದ ವೈಶಿಷ್ಟ್ಯ ಇರುತ್ತದೆ. ದೀಪಾವಳಿ ಮೊದಲ ದಿನ ಮಾಡೋ ಚೀನಿಕಾಯಿ ಕಡುಬು ಮಾಡುವುದು ಹೇಗೆ?

ದೀಪಾವಳಿಯ ನರಕ ಚತುರ್ದಶಿಯಂದು ಚೀನಿಕಾಯಿ ಕಡುಬು ಮಾಡುವುದು ಸಂಪ್ರದಾಯ. ಸಿಹಿ ಮತ್ತು ಖಾರ ಎರಡೂ ರುಚಿಗಳಲ್ಲಿ ಮಾಡಬಹುದಾದ ಈ ಖಾದ್ಯ ಆರೋಗ್ಯಕ್ಕೂ ಒಳ್ಳೆಯದು. 

ಬೇಕಾಗುವ ಸಾಮಗ್ರಿಗಳು: 

  • ಅಕ್ಕಿ - 2 ಲೋಟ, 
  • ಚೀನಿಕಾಯಿ- 2 ಲೋಟ (ತುರಿದಿದ್ದು)
  • ಬೆಲ್ಲ- 1 ಲೋಟ
  • ತೆಂಗಿನಕಾಯಿ ತುರಿ - 1 ಲೋಟ
  • ಏಲಕ್ಕಿ - 4 
  • ಚಿಟಿಕೆ ಉಪ್ಪು ರುಚಿಗೆ 

ಮಾಡುವ ವಿಧಾನ:

ಚೀನಿಕಾಯಿಯನ್ನು ತುರಿದಿಟ್ಟುಕೊಳ್ಳಿ. ಅದಕ್ಕೆ ತುಸು ಹುರಿದ ಅಕ್ಕಿ ತರಿಯನ್ನು ಸೇರಿಸಿ. ಜತೆಗೆ ತುರಿದ ಬೆಲ್ಲ, ಏಲಕ್ಕಿ ಪುಡಿ ಹಾಗೂ ಚಿಟಿಕೆ ಉಪ್ಪು ಸೇರಿಸಿ. ಉಂಡೆಯನ್ನಾಗಿ ಮಾಡಿ. ಇಡ್ಲಿ ಪಾತ್ರೆಯಲ್ಲಿ ಇಟ್ಟು ಹಬೆಯಲ್ಲಿ ಬೇಯಿಸಿ. ಬೆಂದ ನಂತರ ತುಪ್ಪದೊಂದಿಗೆ ಸವಿಯಲು ಕಡುಬು ಸಿದ್ಧ.

ಖಾರದ ಕಡುಬು:

ಖಾರದ ಕಡುಬು ಬೇಕೆಂದರೆ ಬೆಲ್ಲದ ಬದಲು ಶುಂಠಿ, ಮೆಣಸಿನಕಾಯಿ ಹಾಗೂ ತೆಂಗಿನ ತುರಿಯನ್ನು ಸೇರಿಸಿ. ಇದಕ್ಕೆ ಕೊತ್ತಂಬರಿ ಸೊಪ್ಪೂ ಹಾಕಿ. ಚಟ್ನಿಯೊಂದಿಗೆ ಸವಿಯಬಹುದು.

click me!