ಹೊಟ್ಟೇನೂ ತುಂಬುವಂತೆ ಮಾಡುವುದರೊಂದಿಗೆ ರುಚಿ ಎನಿಸುವ ಪಾವ್ ಬಾಜಿಯನ್ನು ಮನೇಲೂ ಮಾಡಬಹುದು. ಹೇಗೆ? ಇಲ್ಲಿದೆ ರೆಸಿಪಿ...
ಈ ಮಳೆಯಲ್ಲಿ ಬಿಸಿ ಬಿಸಿ ಏನಾದರೂ ತಿನ್ನಬೇಕು ಎಂದೆನಿಸಿದರೆ ನೆನಪಾಗುವುದು ಪಾವ್ ಬಾಜಿ. ಬೆಣ್ಣೆಯೊಂದಿಗೆ ಫ್ರೈ ಮಾಡಿರುವ ಪಾವ್ ಜತೆ ವಿವಿಧ ತರಕಾರಿ ಹಾಕಿ ಮಾಡಿದ ಬಾಜಿ ಸವಿಯುವ ಮಜಾನೇ ಬೇರೆ. ಹೊಟ್ಟೇನೂ ತುಂಬುವ ಈ ಫಾಸ್ಟ್ ಫುಡ್ ರೆಸಿಪಿ ಇಲ್ಲಿದೆ..
ಬೇಕಾಗುವ ಸಾಮಾಗ್ರಿಗಳು:
ಬೆಣ್ಣೆ
ಟೊಮ್ಯಾಟೋ
ಬಟಾಣಿ
ದೊಣ ಮೆಣಸಿನಕಾಯಿ
ಆಲೂಗೆಡ್ಡೆ
ಉಪ್ಪು
ಖಾರದ ಪುಡಿ
ಅರಿಶಿಣ ಪುಡಿ
ಪಾವ್ ಬಾಜಿ ಮಸಾಲ
ಕಸ್ತೂರಿ ಮೇಥಿ
ಕೊತ್ತಂಬರಿ ಸೊಪ್ಪು
ಶುಂಠಿ- ಬೆಳ್ಳುಳಿ ಪೇಸ್ಟ್
ಈರುಳ್ಳಿ
ನಿಂಬೆ ಹಣ್ಣು
ಪಾವ್
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಬೆಣ್ಣೆ, ಟೊಮ್ಯಾಟೊ, ಬಟಾಣಿ, ಆಲೂಗಡ್ಡೆ ಮತ್ತು ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. 10 ನಿಮಿಷಗಳ ನಂತರ ಅದನ್ನು ಸ್ಮ್ಯಾಷ್ ಮಾಡಬೇಕು. ಆಮೇಲೆ ಅದಕ್ಕೆ ಖಾರ, ಅರಿಶಿಣ, ಪಾವ್ ಮಸಾಲ, ಕೊತ್ತಂಬರಿ, ಈರುಳ್ಳಿ ಮತ್ತು ಕಸ್ತೂರಿ ಮೇಥಿ ಸೇರಿಸಬೇಕು.
ಮತ್ತೊಂದು ಬಾಣಲೆಗೆ ಬೆಣ್ಣೆ, ಖಾರದ ಪುಡಿ ಮತ್ತು ಪಾವ್ ಮಸಾಲ್ ಹಾಕಿ. ಅದಕ್ಕೆ ಪಾವನ್ನು (ಬ್ರೆಡ್) ಎರಡು ಭಾಗ ಮಾಡಿ ಬೆಣ್ಣೆ ಹಚ್ಚಿ ಫ್ರೈ ಮಾಡಬೇಕು. ಅಷ್ಟೇ. ರುಚಿಯಾದ ಪಾವ್ ಬಾಜಿ ಸಿದ್ಧ.
ನಂತರ ಒಂದು ತಟ್ಟೆಯಲ್ಲಿ ಬಾಜಿ ಮತ್ತು ಪಾವ್ ಇಟ್ಟು, ಅದಕ್ಕೆ ನಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಗೂ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿದರೆ ಪಾವ್ ಬಾಜಿ ಸಿದ್ಧ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.