
ಬೇಸಿಗೆಗೆ ಯಾವದ್ಯಾವುದೋ ತಂಪು ತಂಪು ಪಾನೀಯಗಳನ್ನು ಕುಡಿಯುವ ಬದಲು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ, ದಾಹ ತೀರಿಸಿ, ಆರೋಗ್ಯವನ್ನು ಕಾಪಾಡುವಂಥ ಈ ಜ್ಯೂಸ್ ಮಾಡಿ ಕುಡಿಯರಿ. ಅದರಲ್ಲಿಯೂ ಈ ಪಾನಕಗಳನ್ನು ಸಕ್ಕರೆ ಬದಲು, ಬೆಲ್ಲ ಬೆರೆಸಿ, ಐಸ್ ಕ್ಯೂಬ್ ಬದಲು ಮಣ್ಣಿನ ಮಡಕೆಯಲ್ಲಿಟ್ಟ ನೀರಿನಿಂದ ಮಾಡದರಂತೂ ಮತ್ತಷ್ಟು ಆರೋಗ್ಯಕಾರಿ.
ಬೇಕಾಗುವ ಸಾಮಾಗ್ರಿಗಳು
ಪುದೀನಾ, ಹಸಿ ಶುಂಠಿ, ಕಾಳುಮೆಣಸು-ಎಲ್ಲವೂ ಸ್ವಲ್ಪ ಸ್ವಲ್ಪ, ಸಕ್ಕರೆ-4 ಚಮಚ, ಏಲಕ್ಕಿ ಪುಡಿ-ಸ್ವಲ್ಪ, ನಿಂಬೆ ರಸ-2 ಚಮಚ.
ಮಾಡುವುದು ಹೇಗೆ?
ಪುದೀನಾ, ಹಸಿ ಶುಂಠಿ ಮತ್ತು ಕಾಳುಮೆಣಸುಗಳನ್ನು ಪೇಸ್ಟ್‌ನಂತೆ ರುಬ್ಬಿಕೊಳ್ಳಿ. ಒಂದು ದೊಡ್ಡ ಲೋಟ ನೀರಿಗೆ ಸಕ್ಕರೆ, ಏಲಕ್ಕಿ ಪುಡಿ, ನಿಂಬೆ ರಸ, ಒಂದು ಚಿಟಿಕೆ ಉಪ್ಪು, ಎರಡು ಸ್ಪೂನ್ ರುಬ್ಬಿದ ಪೇಸ್ಟ್ ಹಾಕಿ ಚೆನ್ನಾಗಿ ಶೇಕ್ ಮಾಡಿದರೆ ಪಾನಕ ರೆಡಿ.
ಕಾಡುವ ಡೀಹೈಡ್ರೇಷನ್‌ಗೆ ಈ ಪಾನೀಯ ಬೆಸ್ಟ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.