(ವಿಡಿಯೋ)ಅಬ್ಬಾ...! ಗರ್ಭಿಣಿ ಮಹಿಳೆಯನ್ನು ನೋಡಿದ ಈ ಹುಲಿ ಮಾಡಿದ್ದೇನು ಗೊತ್ತಾ? ನೋಡಲೇಬೇಕಾದ ದೃಶ್ಯಗಳಿವು!

Published : Jul 01, 2017, 03:50 PM ISTUpdated : Apr 11, 2018, 12:50 PM IST
(ವಿಡಿಯೋ)ಅಬ್ಬಾ...! ಗರ್ಭಿಣಿ ಮಹಿಳೆಯನ್ನು ನೋಡಿದ ಈ ಹುಲಿ ಮಾಡಿದ್ದೇನು ಗೊತ್ತಾ? ನೋಡಲೇಬೇಕಾದ ದೃಶ್ಯಗಳಿವು!

ಸಾರಾಂಶ

ಹುಲಿ ಅಂದರೆ ನೆನಪಾಗುವುದು ಕ್ರೂರತ್ವ, ಅದರ ಕೆಂಪು ಕಣ್ಣುಗಳು. ಹತ್ತಿರ ಹೋದರೆ ಎಲ್ಲಿ ದಾಳಿ ಮಾಡಿ ಸಾಯಿಸುತ್ತದೋ ಎಂಬ ಭಯ. ಈ ಭಯವನ್ನು ನಮ್ಮ ಮನದಲ್ಲಿ ಹಾಗೇ ಉಳಿಸುವ ಹಲವಾರು ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವರು ಅಚಾನಕ್ಕಾಗಿ ಹುಲಿ ಬೋನಿನೊಳಗೆ ಬಿದ್ದು, ತಮ್ಮ ಪ್ರಾಣ ಕಳೆದುಕೊಂಡಿದ್ದರೆ. ಮತ್ತೆ ಕೆಲವರು ದಾಳಿಗೊಳಗಾಗಿ ಅಸುನೀಗಿದ್ದಾರೆ. ನಮ್ಮ ರಾಜ್ಯದಲ್ಲೂ ಇಂತಹ ಪ್ರಕರಣಗಳು ನಡೆದಿವೆ.ಆದರೆ ಇದೀಗ ಅಚ್ಚರಿ ಮೂಡಿಸುವ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಹುಲಿ ಮನುಷ್ಯರ ಮೇಲೆಡ ಇಷ್ಟು ಅನುಕಂಪ ತೋರಿಸುತ್ತಾ ಎಂಬ ಪ್ರಶ್ನೆ ಮೂಡಿಸುತ್ತದೆ. ಗರ್ಭಿಣಿ ಮಹಿಳೆಯೊಬ್ಬಳ ಮೇಲೆ ಹುಲಿ ತೋರಿಸಿದ ಅನುಕಂಪ ಬಹಳಷ್ಟು ವೈರಲ್ ಆಗುತ್ತಿದೆ.

ಅಮೆರಿಕಾದ ಗರ್ಭಿಣಿ ಮಹಿಳೆ ಬ್ರಿಟ್ಟನಿ ಓಸ್ಬರ್ನ್ ಎಂಬಾಕೆ ಮೃಗಾಲಯವೊಂದಕ್ಕೆ ತನ್ನ ಗೆಳತಿಯೊಂದಿಗೆ ತೆರಳಿದ್ದಾಳೆ. ಈ ವೇಳೆ ಹುಲಿ ಬೋನಿನ ಹೊರಗಡೆ ಬ್ರಿಟ್ಟನಿ ಕುಳಿತಿದ್ದು, ಗೆಳತಿ ಈ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದರು. ಇಷ್ಟರಲ್ಲೇ ಬೋನಿಗೆ ಅಳವಡಿಸಿದ್ದ ಗಾಜಿನ ಬಳಿ ಬಂದ ಹುಲಿ ಆಕೆಯನ್ನು ನೋಡಿ ಕೊಟ್ಟ ಪ್ರತಿಕ್ರಿಯೆಯೇ ಅತ್ಯಂತ ಅಚ್ಚರಿ ಮೂಡಿಸಿದೆ. ಕ್ರೂರತೆಗೆ ಹೆಸರುವಾಸಿಯಾಗಿರುವ ಹುಲಿ ಮುಗ್ಧ ಪ್ರಾಣಿಯಂತೆ ವರ್ತಿಸಿದೆ. ಇದರಿಂದ ಖುಷಿಪಟ್ಟ ಬ್ರಿಟ್ಟನಿ ತಾನೂ ಗಾಜಿನ ಬಳಿ ಹೋಗಿ ನಿಂತಿದ್ದಾಳೆ. ಅಷ್ಟರಲ್ಲೇ ಗಾಜಿನ ಆಚೆ ಬದಿಯಲ್ಲಿದ್ದ ಹುಲಿ ಆಕೆಯ ಹೊಟ್ಟೆ ಭಾಗವನ್ನು ನೆಕ್ಕಲಾರಂಭಿಸಿದೆ.

ಫೇಸ್'ಬುಕ್'ನಲ್ಲಿ ಈ ದೃಶ್ಯಾವಳಿಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ https://www.facebook.com/brittany.smith.56/videos/10101173254690562/

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾದಪ್ಪ ಮೆಸ್‌ನಲ್ಲಿ ಮುದ್ದೆ ಬಡಿಸೋದು ಅಶುಚಿ; ಟೀಕಿಸಿದವರ ಬೌದ್ಧಿಕ ಬಡತನ ಬಯಲಿಗೆಳೆದ ಕಾರ್ತಿಕ್ ರೆಡ್ಡಿ!
25 ಲಕ್ಷದ ಬ್ಯಾಗ್ ಬಿಟ್ಟು ದೋಣಿ ವಿಹಾರಕ್ಕೆ ಹೋದ ಮಹಿಳೆ, ವಾಪಸ್ ಬಂದಾಗ ಶಾಕ್