Raksha Bandhan Wishes in Kannada: ಅಣ್ಣ-ತಮ್ಮ, ಅಕ್ಕ-ತಂಗಿಗೆ ಕಳುಹಿಸಲು ಇಲ್ಲಿವೆ ಹೃದಯಸ್ಪರ್ಶಿ ಶುಭಾಶಯಗಳು

Published : Aug 27, 2026, 12:48 PM IST
Raksha Bandhan 2026

ಸಾರಾಂಶ

ಸಹೋದರ-ಸಹೋದರಿಯರ ನಡುವಿನ ಪ್ರೀತಿ, ಕಾಳಜಿ ಸಂಭ್ರಮಿಸುವ ವಿಶೇಷ ಹಬ್ಬವೇ ರಕ್ಷಾಬಂಧನ. ಈ ಬಾರಿ ರಕ್ಷಾಬಂಧನವನ್ನು ಆಗಸ್ಟ್ 28, ಶುಕ್ರವಾರದಂದು ಆಚರಿಸಲಾಗುತ್ತಿದೆ. ರಾಖಿ ಕಟ್ಟುವ ಜೊತೆಗೆ ನಿಮ್ಮ ಸಹೋದರ ಅಥವಾ ಸಹೋದರಿಗೆ ಮನದಾಳದ ಶುಭಾಶಯಗಳನ್ನು ಕಳುಹಿಸಲು ಇಲ್ಲಿವೆ ಕೆಲವು ವಿಶೇಷ ಮೆಸೇಜ್‌ಗಳು.

ಸಹೋದರ-ಸಹೋದರಿಯರ ನಡುವಿನ ಪ್ರೀತಿ, ಕಾಳಜಿ ಮತ್ತು ಬಾಂಧವ್ಯವನ್ನು ಸಂಭ್ರಮಿಸುವ ವಿಶೇಷ ಹಬ್ಬವೇ ರಕ್ಷಾಬಂಧನ. ಈ ಬಾರಿ ರಕ್ಷಾಬಂಧನವನ್ನು ಆಗಸ್ಟ್ 28, ಶುಕ್ರವಾರದಂದು ಆಚರಿಸಲಾಗುತ್ತಿದೆ. ರಾಖಿ ಕಟ್ಟುವ ಜೊತೆಗೆ ನಿಮ್ಮ ಸಹೋದರ ಅಥವಾ ಸಹೋದರಿಗೆ ಮನದಾಳದ ಶುಭಾಶಯಗಳನ್ನು ಕಳುಹಿಸಲು ಇಲ್ಲಿವೆ ಕೆಲವು ವಿಶೇಷ ಮೆಸೇಜ್‌ಗಳು.

ಪ್ರತಿ ಸಹೋದರ-ಸಹೋದರಿಯ ಸಂಬಂಧದಲ್ಲೂ ಜಗಳ, ತುಂಟಾಟ, ಕೋಪ ಇದ್ದೇ ಇರುತ್ತದೆ. ಆದರೆ ಎಷ್ಟೇ ದೂರವಿದ್ದರೂ, ಎಷ್ಟೇ ಜಗಳವಾದರೂ ಈ ಬಂಧ ಮಾತ್ರ ಎಂದಿಗೂ ಕಳಚುವುದಿಲ್ಲ. ಬಾಲ್ಯದ ನೆನಪುಗಳಿಂದ ಹಿಡಿದು ಜೀವನದ ಕಷ್ಟದ ಸಮಯದಲ್ಲಿ ಪರಸ್ಪರ ನೀಡುವ ಬೆಂಬಲದವರೆಗೆ, ಒಡಹುಟ್ಟಿದವರ ಸಂಬಂಧಕ್ಕೆ ತನ್ನದೇ ಆದ ವಿಶೇಷತೆ ಇದೆ.

ಈ ರಕ್ಷಾಬಂಧನದಂದು ನಿಮ್ಮ ಪ್ರೀತಿಯ ಸಹೋದರ ಅಥವಾ ಸಹೋದರಿಗೆ ಈ ಕೆಳಗಿನ ಸಂದೇಶಗಳ ಮೂಲಕ ಶುಭಾಶಯ ತಿಳಿಸಬಹುದು.

ನನ್ನ ಪ್ರತಿಯೊಂದು ಸಂತೋಷದಲ್ಲೂ, ಕಷ್ಟದಲ್ಲೂ ಜೊತೆಯಾಗಿರುವ ನನ್ನ ಪ್ರೀತಿಯ ಸಹೋದರ/ಸಹೋದರಿಗೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು.

ಎಷ್ಟೇ ಜಗಳ ಮಾಡಿದರೂ, ನೀನು ನನ್ನ ಜೀವನದ ಅತ್ಯಂತ ಅಮೂಲ್ಯ ವ್ಯಕ್ತಿ. ಹ್ಯಾಪಿ ರಕ್ಷಾಬಂಧನ

ಜೀವನ ನಮ್ಮನ್ನು ಬೇರೆ ಬೇರೆ ದಿಕ್ಕುಗಳಲ್ಲಿ ಕರೆದೊಯ್ದರೂ, ನಮ್ಮ ನಡುವಿನ ಈ ಬಂಧ ಎಂದಿಗೂ ದೂರವಾಗದು. ರಕ್ಷಾಬಂಧನದ ಶುಭಾಶಯಗಳು.

ನನ್ನ ತಪ್ಪುಗಳನ್ನೆಲ್ಲ ತಿಳಿದಿದ್ದರೂ ನನ್ನನ್ನು ಬಿಟ್ಟು ಹೋಗದವನೇ ನಿಜವಾದ ಸಹೋದರ. ನಿನಗೆ ಹ್ಯಾಪಿ ರಾಖಿ!

ಬಾಲ್ಯದ ತುಂಟಾಟ, ಜಗಳ, ನಗು-ಸಂತೋಷದ ಪ್ರತಿಯೊಂದು ನೆನಪಿಗೂ ನೀನೇ ಕಾರಣ. ಈ ಸುಂದರ ಬಂಧ ಹೀಗೆಯೇ ಸದಾ ಇರಲಿ.

ರಾಖಿಯ ಈ ಪವಿತ್ರ ದಾರಿಯಂತೆ ನಮ್ಮ ಪ್ರೀತಿ, ನಂಬಿಕೆ ಮತ್ತು ಬಾಂಧವ್ಯವೂ ಸದಾ ಗಟ್ಟಿಯಾಗಿರಲಿ. ಹ್ಯಾಪಿ ರಕ್ಷಾಬಂಧನ 2026!

ದೂರ ನಮ್ಮನ್ನು ಬೇರ್ಪಡಿಸಬಹುದು, ಆದರೆ ಸಹೋದರ-ಸಹೋದರಿಯರ ನಡುವಿನ ಪ್ರೀತಿಯನ್ನು ಎಂದಿಗೂ ಕಡಿಮೆ ಮಾಡಲು ಸಾಧ್ಯವಿಲ್ಲ. ರಕ್ಷಾಬಂಧನದ ಶುಭಾಶಯಗಳು!

WhatsApp ಸ್ಟೇಟಸ್‌ಗೆ ಚಿಕ್ಕ ಮೆಸೇಜ್‌ಗಳು

ಒಡಹುಟ್ಟಿದವರ ಬಂಧಕ್ಕೆ ಸಾಟಿಯೇ ಇಲ್ಲ. ಹ್ಯಾಪಿ ರಕ್ಷಾಬಂಧನ!

ಜಗಳ ಎಷ್ಟೇ ಇರಲಿ, ಪ್ರೀತಿ ಮಾತ್ರ ಸದಾ ಒಂದೇ. ಹ್ಯಾಪಿ ರಾಖಿ!

ಸಹೋದರ/ಸಹೋದರಿ ಅಂದರೆ ಜೀವನಪೂರ್ತಿ ಇರುವ ಬೆಸ್ಟ್ ಫ್ರೆಂಡ್.

ರಾಖಿಯ ದಾರಿಯಲ್ಲಿ ಪ್ರೀತಿ, ನಂಬಿಕೆ ಮತ್ತು ಸಾವಿರಾರು ನೆನಪುಗಳು.

ನನ್ನ ಬಾಲ್ಯದ ಸಂಗಾತಿಗೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು!

ಒಡಹುಟ್ಟಿದವರ ಪ್ರೀತಿ ಎಂದಿಗೂ ಹಳೆಯದಾಗುವುದಿಲ್ಲ. Happy Rakhi 2026!

Instagram ಕ್ಯಾಪ್ಶನ್‌ಗಳು

ಜಗಳ ನಮ್ಮದು, ಪ್ರೀತಿ ಕೂಡ ನಮ್ಮದೇ… Happy Raksha Bandhan!

Childhood partner, forever supporter #RakshaBandhan2026

ಒಂದೇ ಕುಟುಂಬ, ಸಾವಿರ ನೆನಪುಗಳು, ಒಂದೇ ಅಮೂಲ್ಯ ಬಂಧ.

ರಾಖಿ ಕಟ್ಟುವ ಕ್ಷಣಕ್ಕಿಂತ, ಅದರ ಹಿಂದೆ ಇರುವ ಪ್ರೀತಿಯೇ ವಿಶೇಷ.

ಈ ರಕ್ಷಾಬಂಧನದಂದು ದುಬಾರಿ ಉಡುಗೊರೆಗಳಿಗಿಂತ ಒಂದು ಪ್ರೀತಿಯ ಮಾತು, ಒಂದು ಹಳೆಯ ನೆನಪು ಅಥವಾ ಮನದಾಳದ ಶುಭಾಶಯವೇ ನಿಮ್ಮ ಸಹೋದರ-ಸಹೋದರಿಯ ಮುಖದಲ್ಲಿ ದೊಡ್ಡ ನಗು ಮೂಡಿಸಬಹುದು. ಹಾಗಾಗಿ ಈ ವಿಶೇಷ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಹೃದಯಪೂರ್ವಕವಾಗಿ “ಹ್ಯಾಪಿ ರಕ್ಷಾಬಂಧನ 2026” ಎಂದು ಹೇಳಲು ಮರೆಯಬೇಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೀವು ಈ ಪಾತ್ರೆ ಅಥವಾ ಡಬ್ಬಿಯಲ್ಲಿ ಮೊಸರನ್ನು ಹಾಕಿಡ್ತೀರಾ? ಹಾಗಾದ್ರೆ ಈಗ್ಲೇ ಚೇಂಜ್ ಮಾಡಿ
ನಿಮ್ಮ ಗ್ಯಾಸ್ ಲೈಟರ್ ಪದೇ ಪದೇ ಕೈಕೊಡುತ್ತಿದೆಯೇ? ಹೊಸದನ್ನು ಖರೀದಿಸುವ ಮುನ್ನ ಈ 1 ನಿಮಿಷದ ಟೆಸ್ಟ್ ಮಾಡಿ