
ಬೊಜ್ಜು ಬರಬಾರದು ಎಂದು ಕೆಲವರು ಸಕ್ಕರೆ, ಹಾಲು ಹಾಕದೆ ಬ್ಲ್ಯಾಕ್ ಕಾಫಿ ಕುಡಿಯುತ್ತಾರೆ. ಆದರೆ ಇಲ್ಲೊಂದು ಸಮೀಕ್ಷೆಯು ಇಂಥವರ ಬಗ್ಗೆ ಸ್ವಲ್ಪ ಅಪಾಯಕಾರಿ ಮಾಹಿತಿಯನ್ನು ತೆರೆದಿಟ್ಟಿದೆ. ಬ್ಲ್ಯಾಕ್ ಕಾಫಿ ಕುಡಿಯುವವರು/ ಇಷ್ಟಪಡುವವರು ಸೈಕೋಪಾತ್, ಸ್ಯಾಡಿಸ್ಟ್ ಹಾಗೂ ಜಗಳಗಂಟರಾಗಿರುವ ಸಾಧ್ಯತೆ ಹೆಚ್ಚು ಎಂಬುದು ಈ ಸಮೀಕ್ಷೆಯ ಫಲಿತಾಂಶ! ಆಸ್ಟ್ರಿಯಾದ ಇನ್ಸ್‌ಬ್ರುಕ್ ವಿವಿ ತಜ್ಞರು ಸಾವಿರಕ್ಕೂ ಹೆಚ್ಚು ಮಂದಿ ಕಾಫಿ ಪ್ರಿಯರನ್ನು ಸಂದರ್ಶಿಸಿ ಈ ಸಂಗತಿಯನ್ನು ಹೊರಗೆಡವಿದ್ದಾರೆ.
ಕಹಿ ಕಾಫಿ ಇಷ್ಟಪಡುವಂತಹ ಮನಸ್ಥಿತಿಗೂ ಸೈಕೋಪತಿಕ್ ಮನಸ್ಥಿತಿಗೂ ಬಹಳ ಸಾಮ್ಯತೆಯಿದೆ. ದೀರ್ಘಕಾಲ ಬ್ಲ್ಯಾಕ್ ಕಾಫಿಯನ್ನೇ ಕುಡಿಯುತ್ತ ಬಂದವರು ತಮ್ಮ ಜೊತೆಗಿರುವವರಿಗೆ ಅಪಾಯಕಾರಿಯಾಗಿಯೂ ಪರಿಣಮಿಸಬಹುದು.
ಇದಕ್ಕೆ ವ್ಯತಿರಿಕ್ತವಾಗಿ, ಹೆಚ್ಚು ಹಾಲು ಹಾಗೂ ಹೆಚ್ಚು ಸಕ್ಕರೆ ಬೆರೆಸಿದ ಕಾಫಿಯನ್ನು ಇಷ್ಟಪಡುವವರು ಹೆಚ್ಚು ಒಳ್ಳೆಯವರಾಗಿರುತ್ತಾರೆ. ಅವರಲ್ಲಿ ದಯಾಗುಣ ಹಾಗೂ ಕ್ಷಮಾಗುಣ ಜಾಸ್ತಿಯಿರುತ್ತದೆ ಎಂದೂ ಸಮೀಕ್ಷೆ ಹೇಳಿದೆ. ಇದೇ ಸೂತ್ರ ಬ್ಲ್ಯಾಕ್ ಟೀಗೂ ಅನ್ವಯಿಸುತ್ತದೆಯೇ ಎಂಬುದನ್ನು ಈ ಸಮೀಕ್ಷೆ ತಿಳಿಸಿಲ್ಲ. ಒಟ್ಟಿನಲ್ಲಿ ಬ್ಲ್ಯಾಕ್ ಕಾಫಿ ಕುಡಿಯುವವರೂ, ಅವರ ಸುತ್ತ ಇರುವವರೂ ಇನ್ಮುಂದೆ ಎಚ್ಚರದಿಂದಿರಬೇಕು ಅಂತಾಯ್ತು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.